ಬೆಂಗಳೂರು,ನ.7- ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಅಕ್ಟೋಬರ್ ತಿಂಗಳ ಉತ್ತಮ ಆಟಗಾರರ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹೆಸರನ್ನು ಹೊರಗಿಡಲಾಗಿದೆ.
2023ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‍ನಲ್ಲಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 174 ರನ್ ಗಳಿಸಿರುವುದಲ್ಲದೆ ವಿಕೆಟ್ ಕೀಪರ್ ಹಾಗೂ ಫೀಲ್ಡರ್ ರೂಪದಲ್ಲಿ ಒಟ್ಟು 10 ಕ್ಯಾಚ್‍ಗಳನ್ನು ಪಡೆದಿರುವುದಲ್ಲದೆ ಅಕ್ಟೋಬರ್ ತಿಂಗಳಿನಲ್ಲಿ 3 ಶತಕ ಸೇರಿದಂತೆ 431 ರನ್‍ಗಳನ್ನು ಬಾರಿಸಿದ್ದು ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ.
ಇನ್ನು ಭಾರತೀಯ ಸಂಜಾತ ನ್ಯೂಜಿಲೆಂಡ್‍ನ ಯುವ ಆಟಗಾರ ರಚಿನ್ ರವೀಂದ್ರ ಅವರು ಕೂಡ ವಿಶ್ವಕಪ್ ಟೂರ್ನಿಯಲ್ಲಿ ಆಕ್ಟೋಬರ್ ಮಾಸದಲ್ಲಿ ಆಡಿದ 6 ಪಂದ್ಯಗಳಿಂದ 81.20 ಸರಾಸರಿಯಲ್ಲಿ 406 ರನ್ ಗಳಿಸಿದ್ದು 2 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಚಿನ್ 389 ರನ್ ಬಾರಿಸಿದ್ದರು.
ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ
ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಮೋಘ ಬೌಲಿಂಗ್ ಪ್ರದರ್ಶನ ತೋರುತ್ತಿದ್ದು ಅಕ್ಟೋಬರ್ ತಿಂಗಳಿನಲ್ಲಿ 3.91 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ಅಫಾಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 39 ರನ್‍ಗಳನ್ನು ನೀಡಿ ಪ್ರಮುಖ 4 ವಿಕೆಟ್ ಪಡೆದಿದ್ದಲ್ಲದೆ 16 ರನ್ ಗಳಿಸುವ ಮೂಲಕ ಆಲ್‍ರೌಂಡ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಸಹಕರಿಸಿದ್ದರು.
ಅಲ್ಲದೆ ಡಿಫೆಂಡಿಂಗ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆಯೇ ಐಸಿಸಿ ಪ್ರಕಟಿಸಿರುವ ಅಕ್ಟೋಬರ್ ತಿಂಗಳ ಪ್ರಶಸ್ತಿಗೆ ಬುಮ್ರಾ ಹೆಸರು ಪಾತ್ರವಾಗಿದೆ.