Homeಅಂತಾರಾಷ್ಟ್ರೀಯಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಏರಿಕೆ

ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಏರಿಕೆ

Crude oil prices rise as US-Iran war intensifies

ಲಂಡನ್‌, ಜು.13- ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ. 4 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದೆ.ಜಾಗತಿಕ ಇಂಧನ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್‌ ಜಲಸಂಧಿಯ ಭದ್ರತೆಯ ಬಗ್ಗೆ ಆತಂಕ ಎದುರಾಗಿರುವುದೇ
ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇಂದು ಬೆಳಗಿನ ವಹಿವಾಟಿನಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ. 4.28 ರಷ್ಟು ಹೆಚ್ಚಾಗಿ ಬ್ಯಾರೆಲ್‌ಗೆ 79.26 ಡಾಲರ್‌(7,570 ರೂ.) ತಲುಪಿದ್ದರೆ, ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆ ಶೇ. 4.37 ರಷ್ಟು ಏರಿಕೆಯಾಗಿ 74.53 ಡಾಲರ್‌(7,125 ರೂ.) ತಲುಪಿದೆ.ಇರಾನ್‌ ವಾರಾಂತ್ಯದಲ್ಲಿ ತನ್ನ ದಾಳಿಯ ವ್ಯಾಪ್ತಿಯನ್ನು ಕತಾರ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್‌್ಸದೇಶಗಳಿಗೂ ವಿಸ್ತರಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಿದೆ.

ಕುವೈತ್‌, ಬಹರೇನ್‌ ಮೇಲೆ ಮತ್ತೆ ದಾಳಿ ಜಲಮಾರ್ಗ ಬಂದ್‌ ಎಂದ ಇರಾನ್‌ ನಿಯಮ ಉಲ್ಲಂಘಿಸಿ ಚಲಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಬೆನ್ನಲ್ಲೇ, ಇರಾನ್‌ ಈ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿತ್ತು. ಕೆಪ್ಲರ್‌ ಸಂಸ್ಥೆಯ ಹಡಗು ಟ್ರ್ಯಾಕಿಂಗ್‌ ದತ್ತಾಂಶದ ಪ್ರಕಾರ, ಈ ಜಲಸಂಧಿಯ ಮೂಲಕ ಕೇವಲ 6 ಹಡಗುಗಳು ಮಾತ್ರ ಹಾದುಹೋಗಿವೆ. ಇದು ಕಳೆದ ಐದು ವಾರಗಳಲ್ಲೇ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ.

ಜಲಸಂಧಿಯನ್ನು ಮುಕ್ತವಾಗಿಡಲು ಅಮೆರಿಕ ಮತ್ತು ಇರಾನ್‌ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಶಾಂತಿ ಒಪ್ಪಂದ ಹಾಗೂ ಮಾತುಕತೆಗಳು ಈ ಹೊಸ ದಾಳಿಗಳಿಂದಾಗಿ ಸಂಪೂರ್ಣವಾಗಿ ಹಳ್ಳ ಹಿಡಿದಿವೆ.ಇರಾನ್‌ ವಿದೇಶಾಂಗ ಸಚಿವಾಲಯವು ಅಮೆರಿಕದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದು ವಿಶ್ವಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ.

ಅಲ್ಲದೆ ಯಾವ ದೇಶಗಳು ಇರಾನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ತನ್ನ ಭೂಮಿ ಅಥವಾ ಮಿಲಿಟರಿ ನೆಲೆಗಳನ್ನು ಬಳಸಲು ಅವಕಾಶ ನೀಡುತ್ತವೆಯೋ, ಆ ದೇಶಗಳನ್ನು ಇರಾನ್‌ ಸೇನೆಯು ಶತ್ರು ದೇಶ ಎಂದು ಪರಿಗಣಿಸಿ ದಾಳಿ ನಡೆಸಲಿದೆ ಎಂದು ಕಠಿಣ ಎಚ್ಚರಿಕೆ ನೀಡಿದೆ.

RELATED ARTICLES

Latest News