Thursday, April 16, 2026
Homeಅಂತಾರಾಷ್ಟ್ರೀಯಅಮೆರಿಕದ ಸಿಯಾಟಲ್‌ ನಗರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

ಅಮೆರಿಕದ ಸಿಯಾಟಲ್‌ ನಗರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

First-ever life-size Swami Vivekananda statue in U.S. unveiled in Seattle

ನ್ಯೂಯಾರ್ಕ್‌,ಏ.12: ಅಮೆರಿಕದ ಸಿಯಾಟಲ್‌ ನಗರದಲ್ಲಿ ಖ್ಯಾತ ಭಾರತೀಯ ತತ್ವಜ್ಞಾನಿ ಮತ್ತು ಆಧ್ಯಾತಿಕ ನಾಯಕ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಸಿಯಾಟಲ್‌ನ ವ್ಯಸ್ತ ಪ್ರದೇಶವಾದ ವೆಸ್ಟ್ಲೇಕ್‌ ಸ್ಕ್ವೇರ್‌ ನಲ್ಲಿ ಸ್ಥಾಪಿಸಲಾದ ಈ ಕಂಚಿನ ಪ್ರತಿಮೆಯು ಅಮೆರಿಕದಲ್ಲಿ ,ನಗರ ಆಡಳಿತದಿಂದ ಸ್ಥಾಪಿಸಲಾದ ಮೊದಲ ವಿವೇಕಾನಂದರ ಪ್ರತಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರತಿಮೆಯನ್ನು ಭಾರತೀಯ ಶಿಲ್ಪಿ ನರೇಶ್‌ ಕುಮಾರ್‌ ಕುಮಾವತ್‌ ರೂಪಿಸಿದ್ದು, ಸಿಯಾಟಲ್‌ ಮೇಯರ್‌ ಕೇಟೀ ವಿಲ್ಸನ್‌ ಮತ್ತು ಸಿಯಾಟ ಮತ್ತು ಸಿಯಾಟಲ್‌ನ ಭಾರತದ ಕಾನ್ಸುಲ್‌ ಜನರಲ್‌ ಪ್ರಕಾಶ್‌ ಗುಪ್ತಾ ಸಂಯುಕ್ತವಾಗಿ ಅನಾವರಣಗೊಳಿಸಿದರು.
1893ರ ವಿಶ್ವ ಧರ್ಮ ಸಂಸತ್ತು ರಿಂದ 2026ರ ಸಿಯಾಟಲ್‌ ವರೆಗೆ ಸಿಯಾಟಲ್‌ ನಗರ ಈಗ ಹೊಸ ಭಾರತೀಯ ಐಕಾನ್‌ ಆಗಿ ಸ್ವಾಮಿ ವಿವೇಕಾನಂದರನ್ನು ಸ್ವಾಗತಿಸಿದೆ ಎಂದು ಸಿಯಾಟಲ್‌ನ ಭಾರತೀಯ ಕಾನ್ಸುಲೇಟ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್‌ ಕೇಟಿ ವಿಲ್ಸನ್‌‍, ಈ ಪ್ರತಿಮೆ ಸಿಯಾಟಲ್‌ ನಗರದ ಸಮಾವೇಶಾತಕ ಮನೋಭಾವವನ್ನು ಪ್ರತಿಬಿಂಬಿಸುವುದರ ಜೊತೆಗೆ ಭಾರತ ಮತ್ತು ಅಮೆರಿಕದ ನಡುವೆ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಈ ಪ್ರತಿಮೆಯನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ವತಿಯಿಂದ ಸಿಯಾಟಲ್‌ ನಗರಕ್ಕೆ ಉಡುಗೊರೆಯಾಗಿ ನೀಡಲಾಗಿದೆ. ನಗರದ ಬಹುಸಾಂಸ್ಕೃತಿಕ ಸ್ವಭಾವ ಮತ್ತು ಒಳಗೊಂಡ ಮನೋಭಾವವನ್ನು ಗುರುತಿಸಿ ಇದನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ.
ಪ್ರತಿಮೆ ಅನಾವರಣ ಕಾರ್ಯಕ್ರಮವು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ದಿನಾಚರಣೆಯ ಅಂಗವಾಗಿ ನಡೆದಿದ್ದು, ಭಾರತ ಮತ್ತು ಅಮೆರಿಕದ ಪ್ಯಾಸಿಫಿಕ್‌ ನಾರ್ತ್‌ವೆಸ್ಟ್‌‍ ಪ್ರದೇಶದ ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದ ಭಾಗವಾಗಿದೆ.

ಪ್ರತಿಮೆ ಇರುವ ವೆಸ್ಟ್‌ಲೇಕ್‌‍ ಸ್ಕ್ವೇರ್‌ ಪ್ರದೇಶವು ದಿನವೂ 4 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ಪ್ರಮುಖ ಸ್ಥಳವಾಗಿದೆ. ಇದು ಅಮೆಜಾನ್‌ ಮುಖ್ಯ ಕಚೇರಿ ಸ್ಫಿಯರ್ಸ್‌, ಸಿಯಾಟಲ್‌ ಕನ್ವೆನ್ಷನ್‌ ಸೆಂಟರ್‌ ಮತ್ತು ಸಿಯಾಟಲ್‌ ಸೆಂಟರ್‌ ಮೋನೊರೇಲ್‌ ಹತ್ತಿರದಲ್ಲಿದೆ.

ಗಮನಾರ್ಹವಾಗಿ ಸ್ವಾಮಿ ವಿವೇಕಾನಂದರು 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಪರಿಷತ್ತಿನಲ್ಲಿ ತಮ ಐತಿಹಾಸಿಕ ಭಾಷಣದ ಮೂಲಕ ಹಿಂದೂ ತತ್ವಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ್ದರು.

RELATED ARTICLES

Latest News