ಕೇಕ್‌ಕೆನವೆರಾಲ್,ಫೆ.15- ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಭೂಮಿಗೆ ವಾಪಸ್ಸಾದ ಸಹೋದ್ಯೋಗಿಗಳ ಸ್ಥಾನವನ್ನು ನಾಲ್ವರು ನೂತನ ಗಗನಯಾತ್ರಿಗಳು ಭರ್ತಿ ಮಾಡಿದ್ದಾರೆ.
ಸ್ಪೇಸ್‌ಎಕ್ಸ್ ಗಗನನೌಕೆಯು ಕೇಪ್‌ಕೆನವೆರಾಲ್‌ನಿಂದ ಉಡಾವಣೆಗೊಂಡ ಒಂದು ದಿನದ ಬಳಿಕ ನಿನ್ನೆ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾದ ಗಗನ ಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಸಿತು.
ಗಗನಯಾತ್ರಿಯೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂಚಿತವಾಗಿಯೆ ಭೂಮಿಗೆ ಕರೆಸಿಕೊಳ್ಳಲಾಗಿದ್ದು, ನಾಸಾದ ಮಾನವಸಹಿತ ಅಂತರಿಕ್ಷ ಯಾನದ 65 ವರ್ಷಗಳಲ್ಲಿ ಇದೇ ಮೊದಲ ಘಟನೆ. ಗಗನಯಾತ್ರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ತುತು ವಾಪಸ್ ಕರೆಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಓರ್ವ ಅಮೆರಿಕನ್ ಮತ್ತು ಇಬ್ಬರು ರಷ್ಯನ್ ಸೇರಿ ಮೂವರು ಗಗನ ಯಾತ್ರಿಗಳು ಉಳಿದಿದ್ದ ನಾಸಾ ಬಾಹ್ಯಾಕಾಶ ನಡಿಗೆಗೆ ತಡೆ ನೀಡಿ ಸಂಶೋಧನಾ ಕಾರ್ಯ ಸಂಕ್ಷಿಪ್ತಗೊಳಿಸಲು ಕಾರಣವಾಗಿತ್ತು.
ಎಂಟರಿಂದ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನೂತನ ಗಗನಯಾತ್ರಿಗಳೆಂದೆರೆ ನಾಸಾದ ಜೆಸಿಕಾ ಮೀರ್ ಮತ್ತು ಜಾಕ್ ಹಾಥಾವೇ, ಫ್ರಾನ್ಸ್ ನ ಸೋಫಿ ಅಡನಾಟ್ ಮತ್ತು ರಷ್ಯಾದ ಅಂದ್ರೆಯೀ ಕೆಡಿಯಲ್. ಮೀರ್ ಅವರು ಸಾಗರ ಜೀವಶಾಸ್ತ್ರಜ್ಞರಾಗಿದ್ದಾರೆ ಮತ್ತು ಫೆಡಿಯಲ್ ಮಾಜಿ ಮಿಲಿಟರಿ ಪೈಲಟ್ ಆಗಿದ್ದಾರೆ. ಅಡೆನಾಟ್ ಸೇನಾ ಹೆಲಿಕಾಪ್ಟರ್ ಪೈಲಟ್ ಆಗಿದ್ದು, ಬಾಹ್ಯಾಕಾಶ ನಡೆಗೆ ಮಾಡಿದ 2ನೇ ಫ್ರೆಂಚ್ ಮಹಿಳೆ ಎನಿಸಲಿದ್ದಾರೆ.
