Homeಅಂತಾರಾಷ್ಟ್ರೀಯನೋಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಆರೋಗ್ಯ ಗಂಭೀರ

ನೋಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಆರೋಗ್ಯ ಗಂಭೀರ

Iranian Nobel Peace Prize laureate Narges Mohammadi hospitalized

ಟರಾನ್‌ ಮೇ 3- ಇರಾನ್‌ನ ಮಾನವ ಹಕ್ಕು ಹೋರಾಟಗಾರ್ತಿ ಮತ್ತು ನೋಬೆಲ್‌ ಶಾಂತಿ ಬಹುಮಾನ ಪುರಸ್ಕೃತೆ ನರ್ಜಿಸ್‌‍ ಮೊಹಮದಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬ ಹಾಗೂ ಫೌಂಡೇಶನ್‌ ತಿಳಿಸಿವೆ.

ಹೃದಯ ಸಂಬಂಧಿ ತೊಂದರೆ ಮತ್ತು ಅಸ್ವಸ್ಥತೆಯಿಂದ ಶುಕ್ರವಾರ ಅವರನ್ನು ಜಂಜಾನ್‌ ನಗರದ ಆಸ್ಪತ್ರೆಗೆ ತುರ್ತುವಾಗಿ ದಾಖಲಿಸಲಾಗಿದೆ. ವೈದ್ಯರು ಅವರನ್ನು ತಹ್ರಾನ್‌ಗೆ ಸ್ಥಳಾಂತರಿಸಲು ಸಲಹೆ ನೀಡಿದರೂ, ಇರಾನ್‌ ಗುಪ್ತಚರ ಇಲಾಖೆ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ಕುಟುಂಬದವರು ಹೇಳಿದ್ದಾರೆ.

ನಾರ್ವೇಜಿಯನ್‌ ನೋಬೆಲ್‌ ಸಮಿತಿಯು ಕೂಡ ತಕ್ಷಣ ಅವರನ್ನು ಅವರ ವೈದ್ಯಕೀಯ ತಂಡದ ಬಳಿ ಸ್ಥಳಾಂತರಿಸಲು ಇರಾನ್‌ ಅಧಿಕಾರಿಗಳಿಗೆ ಮನವಿ ಮಾಡಿದೆ.ಪ್ರಸ್ತುತ ಆಕೆ ಬಂಧನದಲ್ಲಿದ್ದು ಆರೋಗ್ಯ ಹದಗೆಟ್ಟಿದ್ದು ಇರಾನ್‌ ನಿಲುವನ್ನು ಟೀಕಿಸಿದ್ದಾರೆ.

RELATED ARTICLES
spot_img

Latest News