Tuesday, May 5, 2026
Homeರಾಷ್ಟ್ರೀಯಸ್ಪಿರಿಟ್‌ ಏರ್‌ಲೈನ್ಸ್ ಕಾರ್ಯಾಚರಣೆ ಸ್ಥಗಿತ

ಸ್ಪಿರಿಟ್‌ ಏರ್‌ಲೈನ್ಸ್ ಕಾರ್ಯಾಚರಣೆ ಸ್ಥಗಿತ

Spirit Airlines shutting down after rescue talks collapse

ನ್ಯೂಯಾರ್ಕ್‌ ,ಮೇ.3- ಅಮೆರಿಕದ ಕಡಿಮೆ ದರದ ವಿಮಾನ ಪ್ರಯಾಣಕ್ಕೆ ಹೆಸರಾಗಿದ್ದ ಸ್ಪಿರಿಟ್‌ ಏರ್‌ಲೈನ್ಸ್‌‍ ಕಂಪನಿ 34 ವರ್ಷಗಳ ಸೇವೆಯ ಬಳಿಕ ತನ್ನ ಕಾರ್ಯಾಚರಣೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ಹಳದಿ ಬಣ್ಣದ ವಿಮಾನಗಳ ಮೂಲಕ ದಿನಕ್ಕೆ ನೂರಾರು ಹಾರಾಟಗಳನ್ನು ನಡೆಸುತ್ತಿದ್ದ ಈ ಅಲ್ಟ್ರಾಲೋ ಕಾಸ್ಟ್‌ ಏರ್‌ಲೈನ್‌‍ ತನ್ನ ಕಾರ್ಯಾಚರಣೆಗಳನ್ನು ಕ್ರಮಬದ್ಧವಾಗಿ ಮುಕ್ತಾಯಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದೆ.

ಎಲ್ಲಾ ವಿಮಾನಯಾನಗಳನ್ನು ರದ್ದುಪಡಿಸಲಾಗಿದ್ದು, ಗ್ರಾಹಕ ಸೇವೆಯೂ ಲಭ್ಯವಿರುವುದಿಲ್ಲ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಕಳೆದ 34 ವರ್ಷಗಳಲ್ಲಿ ಕಡಿಮೆ ದರದ ಮಾದರಿಯಿಂದ ವಿಮಾನೋದ್ಯಮಕ್ಕೆ ನೀಡಿದ ಸೇವೆ ಪರಿಣಾಮದ ಬಗ್ಗೆ ನಮಗೆ ಹೆಮೆ ಇದೆ. ಇನ್ನೂ ಹಲವು ವರ್ಷಗಳ ಕಾಲ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಆಶಯವಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸರ್ಕಾರದ ಆರ್ಥಿಕ ನೆರವು ದೊರೆಯದ ಹಿನ್ನೆಲೆಯಲ್ಲಿ ಈ ನಿರ್ಧಾರ ನಿರೀಕ್ಷಿತವಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಕೊನೆಯ ಪ್ರಸ್ತಾವನೆನೀಡಿದ್ದರೂ ಒಪ್ಪಂದವಾಗಲಿಲ್ಲ ಎಂದು ವರದಿಯಾಗಿದೆ. ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡುವವರು ಹಾಗೂ ಪ್ರವಾಸಿಗರು ಈ ನಿರ್ಧಾರದ ಪರಿಣಾಮವನ್ನು ಹೆಚ್ಚು ಅನುಭವಿಸುವ ಸಾಧ್ಯತೆ ಇದೆ.

ಲಾಸ್‌‍ ವೇಗಾಸ್‌‍, ಫೋರ್ಟ್‌ ಲಾಡರ್‌ಡೇಲ್‌‍ ಮತ್ತು ಓರ್ಲ್ಯಾಂಡೊ ಮೊದಲಾದ ನಗರಗಳಲ್ಲಿ ಸಂಸ್ಥೆಯ ಸೇವೆಗಳು ಹೆಚ್ಚಿನ ಪ್ರಮಾಣದಲ್ಲಿದ್ದವು.ವಿಮಾನೋದ್ಯಮ ವಿಶ್ಲೇಷಣಾ ಸಂಸ್ಥೆಯ ಪ್ರಕಾರ, ತೈಲ ದರ ಏರಿಕೆಯಿಂದ ಸಾಕಷ್ಟು ನಷ್ಟ ಅನುಭವಿಸಿದೆ

RELATED ARTICLES

Latest News