Homeಅಂತಾರಾಷ್ಟ್ರೀಯಭಯದಿಂದ ಬಿಲದಲ್ಲಿ ಅಡಗಿ ಕುಳಿತಿರುವ ಮೊಜ್ತಬಾ ಖಮೇನಿ ಭೇಟಿ ಕಷ್ಟ ಸಾಧ್ಯವಂತೆ

ಭಯದಿಂದ ಬಿಲದಲ್ಲಿ ಅಡಗಿ ಕುಳಿತಿರುವ ಮೊಜ್ತಬಾ ಖಮೇನಿ ಭೇಟಿ ಕಷ್ಟ ಸಾಧ್ಯವಂತೆ

Iran’s President Met New Supreme Leader In Total Darkness

ಟೆಹ್ರಾನ್‌,ಆ.6- ಇರಾನ್‌ ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ಭಾರಿ ಬಿಕ್ಕಟ್ಟು ಎದುರಾಗಿರುವ ವರದಿಗಳ ನಡುವೆಯೇ, ದೇಶದ ನೂತನ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಅವರೊಂದಿಗೆ ಸಂವಹನ ನಡೆಸುವುದು ಈ ಪರಿಸ್ಥಿತಿಯಲ್ಲಿ ತೀರಾ ಕಷ್ಟಕರವಾಗಿದೆ ಎಂದು ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಬಹಿರಂಗಪಡಿಸಿದ್ದಾರೆ.

ಅಮೆರಿಕ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ವಾಯುದಾಳಿಯಲ್ಲಿ ಮಾಜಿ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.

ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ. ಕೇವಲ ಲಿಖಿತ ಪ್ರಕಟಣೆಗಳ ಮೂಲಕವೇ ಆದೇಶ ಹೊರಡಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಧ್ಯಕ್ಷ ಪೆಜೆಶ್ಕಿಯಾನ್‌, ಅವರನ್ನು ಸಂಪರ್ಕಿಸುವುದು ಸದ್ಯಕ್ಕೆ ಸವಾಲಾಗಿದೆ. ಆದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆಯೇ ನಮಗೆ ಮುಂದೆ ಸಾಗಲು ಬಲ ನೀಡುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ಸುಪ್ರೀಂ ಲೀಡರ್‌ ಕುರಿತು ಇಲ್ಲಸಲ್ಲದ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಭಿನ್ನಾಭಿಪ್ರಾಯದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.

ಮೊಜ್ತಬಾ ಖಮೇನಿ ಅವರು ಇರಾನ್‌ ಅಧ್ಯಕ್ಷರಿಗಿಂತ ಹೆಚ್ಚಾಗಿ ಮಿಲಿಟರಿ ಶಕ್ತಿ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ ಕಮಾಂಡರ್‌ ಅಹ್ಮದ್‌ ವಾಹಿದಿ ಅವರಿಗೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದ್ದಾರೆ. ವಿದೇಶಾಂಗ ನೀತಿ ಮತ್ತು ಯುದ್ಧದ ತಂತ್ರಗಳಲ್ಲಿ ತಮ್ಮ ಆಡಳಿತವನ್ನು ಸಂಪೂರ್ಣವಾಗಿ ಬದಿಗಿಡಲಾಗುತ್ತಿದೆ ಎಂದು ಆಕ್ರೋಶಗೊಂಡಿದ್ದ ಪೆಜೆಶ್ಕಿಯಾನ್‌‍, ಈಗಾಗಲೇ ಮೇ ತಿಂಗಳಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು.

ಇರಾನ್‌ನಲ್ಲಿ ಸುಪ್ರೀಂ ಲೀಡರ್‌ ಹುದ್ದೆಯು ದೇಶದ ಅತ್ಯುನ್ನತ ಸರ್ವಾಧಿಕಾರಿ ಅಧಿಕಾರ ಹೊಂದಿದ್ದು, ರಾಜಕೀಯ ಅಧ್ಯಕ್ಷರಿಗಿಂತ ಸಶಸ್ತ್ರ ಪಡೆಗಳು ಹೇಳಿದಂತೆ ಕೇಳುವ ವಾತಾವರಣ ಸೃಷ್ಟಿಯಾಗಿದೆ. ಇರಾನ್‌ನ ಪ್ರಮುಖ ಆಂತರಿಕ ಮತ್ತು ಮಿಲಿಟರಿ ನಿರ್ಧಾರಗಳನ್ನು ತಳೆಯುವಲ್ಲಿ ಪೆಜೆಶ್ಕಿಯಾನ್‌ ನೇತೃತ್ವದ ನಾಗರಿಕ ಸರ್ಕಾರಕ್ಕೆ ಯಾವುದೇ ಪ್ರಭಾವ ಇಲ್ಲದಿರುವುದು, ಅಮೆರಿಕ-ಇಸ್ರೇಲ್‌ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.

RELATED ARTICLES
spot_img

Latest News