Thursday, April 30, 2026
Homeಅಂತಾರಾಷ್ಟ್ರೀಯ29 ರೈತರನ್ನು ಕೊಂದ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು

29 ರೈತರನ್ನು ಕೊಂದ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು

Islamic State militants kill at least 29 in attack on Nigerian village

ಅಬುಜಾ, ಏ. 28 (ಎಪಿ) ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಹಳ್ಳಿಯೊಂದರ ಮೇಲೆ ನಡೆಸಿದ ದಾಳಿಯಲ್ಲಿ 29ಕ್ಕೂ ಹೆಚ್ಚು ರೈತರು ಬಲಿಯಾಗಿರುವ ಘಟನೆ ನೈಜಿರಿಯಾದಲ್ಲಿ ನಡೆದಿದೆ.
ಉಗ್ರಗಾಮಿಗಳು ಈಶಾನ್ಯ ನೈಜೀರಿಯಾದಲ್ಲಿ ರಾತ್ರಿಯಿಡೀ ಒಂದು ಹಳ್ಳಿಯ ಮೇಲೆ ದಾಳಿ ಮಾಡಿ ಕನಿಷ್ಠ 29 ಜನರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಗವರ್ನರ್‌ ಪ್ರಕಾರ, ದೇಶದ ಅಡಮಾವಾ ರಾಜ್ಯದ ಗೊಂಬಿ ಸ್ಥಳೀಯ ಸರ್ಕಾರಿ ಪ್ರದೇಶದ ಗಯಾಕು ಎಂಬ ಹಳ್ಳಿಯಲ್ಲಿ ತಡರಾತ್ರಿ ಈ ದಾಳಿ ನಡೆದಿದೆ.ಟೆಲಿಗ್ರಾಮ್‌ ಮೆಸೇಜಿಂಗ್‌ ಅಪ್ಲಿಕೇಶನ್‌ನಲ್ಲಿ ಸಂದೇಶದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದಮಾವಾ ರಾಜ್ಯ ಗವರ್ನರ್‌ ಅಹ್ಮದು ಉಮರು ಫಿಂಟಿರಿ ದಾಳಿಯನ್ನು ದುರಂತ ಮತ್ತು ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದರು.

RELATED ARTICLES

Latest News