Sunday, April 12, 2026
Homeಅಂತಾರಾಷ್ಟ್ರೀಯಹೊಸ ಸುಪ್ರೀಮ್ ಲೀಡರ್ ಮೊಜ್ತಬಾ ಖಮೇನಿಗೆ ಜೀವ ವಿಮೆ ಇಲ್ಲ : ನೆತನ್ಯಾಹು ವಾರ್ನಿಂಗ್

ಹೊಸ ಸುಪ್ರೀಮ್ ಲೀಡರ್ ಮೊಜ್ತಬಾ ಖಮೇನಿಗೆ ಜೀವ ವಿಮೆ ಇಲ್ಲ : ನೆತನ್ಯಾಹು ವಾರ್ನಿಂಗ್

'No life insurance': Netanyahu's stark warning to Iran's new supreme leader Mojtaba Khamenei

ಜೆರುಸಲೆಮ್‌‍, ಮಾ.13- ಇರಾನ್‌ ವಿರುದ್ಧದ ಅಮೆರಿಕ-ಇಸ್ರೇಲ್‌ ಜಂಟಿ ಕಾರ್ಯಾಚರಣೆ ನಿರೀಕ್ಷೆಗಿಂತ ಉತ್ತಮವಾಗಿ ನಡೆಯುತ್ತಿದೆ ಮತ್ತು ಇಸ್ರೇಲ್‌ ಎಂದಿಗಿಂತಲೂ ಬಲಿಷ್ಠವಾಗಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಇರಾನ್‌ನ ಹೊಸದಾಗಿ ಆಯ್ಕೆಯಾದ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗೆ ಯಾವುದೇ ಜೀವ ವಿಮೆ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇರಾನ್‌ ಜನರ ಮೇಲಿನ ದಬ್ಬಾಳಿಕೆಯ ಕ್ರೂರ ಆಡಳಿತವನ್ನು ತೆಗೆದುಹಾಕಲು ಅಮೆರಿಕ ಮತ್ತು ಇಸ್ರೇಲ್‌ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ನಾವು ಕ್ರಾಂತಿಕಾರಿ ಗಾರ್ಡ್‌ಗಳು ಮತ್ತು ಕ್ಷಿಪಣಿ ದಾಳಿಗೆ ತಕ್ಕ ಹೊಡೆತಗಳನ್ನು ನೀಡುತ್ತಿದ್ದೇವೆ ಮತ್ತು ನಾವು ಇನ್ನೂ ಸಕ್ರಿಯರಾಗಿದ್ದೇವೆ ಎಂದು ಅವರು ಹೇಳಿದರು. ನಾವು ಕಾಯುವುದಿಲ್ಲ ಈಗ ನಾವು ಪ್ರಾರಂಭಿಸುತ್ತೇವೆ, ಅಭೂತಪೂರ್ವ ಶಕ್ತಿಯೊಂದಿಗೆ ನಮ ಗುರಿ ಸಾಧನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರೊಂದಿಗಿನ ಅವರ ಸಂಬಂಧವನ್ನು ನೆತನ್ಯಾಹು ಶ್ಲಾಘಿಸಿದರು.ನಾವು ಅಮೆರಿಕದೊಂದಿಗೆ ಹಿಂದೆಂದೂ ಇಲ್ಲದ ಮೈತ್ರಿಯನ್ನು ರಚಿಸಿದ್ದೇವೆ, ನಮ ಉತ್ತಮ ಸ್ನೇಹಿತ ಅಧ್ಯಕ್ಷ ಟ್ರಂಪ್‌ ಅವರೊಂದಿಗಿನ ಮುಕ್ತವಾಗಿ ಮಾತನಾಡುತ್ತೇನೆ ವಿಚಾರಗಳು ಮತ್ತು ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಮತ್ತು ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನೆತನ್ಯಾಹು ಹೇಳಿದರು.

ನಾವು ನಮ್ಮ ದೇಶಗಳ ಬಗ್ಗೆ ಅಥವಾ ಈ ಪೀಳಿಗೆಯ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ನಾವು ಭವಿಷ್ಯದ ಪೀಳಿಗೆಯ ಬಗ್ಗೆ ಮಾನವೀಯತೆಯ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.
ಇಸ್ರೇಲಿ ದಾಳಿಯಲ್ಲಿ ಇರಾನಿನ ಉನ್ನತ ಪರಮಾಣು ವಿಜ್ಞಾನಿಗಳನ್ನು ಕೊಂದಿವೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಾಬಾ ಖಮೇನಿ ಅವರನ್ನು ಕ್ರಾಂತಿಕಾರಿ ಕಾವಲುಗಾರರ ಕೈಗೊಂಬೆ ಎಂದು ಖಂಡಿಸಿದರು.

ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು ಇರಾನಿನ ಜನರಿಗೆ ಹೊಸ ಸ್ವಾತಂತ್ರ್ಯದ ಹಾದಿಯ ಕ್ಷಣ ಸಮೀಪಿಸುತ್ತಿದೆ ಮತ್ತು ಇಸ್ರೇಲ್‌ ಅವರೊಂದಿಗೆ ನಿಂತಿದೆ ಎಂದು ಹೇಳಿದರು. ಆದರೆ ನಂತರ ಅದು ನಿಮ ಮೇಲೆ ಅವಲಂಬಿತವಾಗಿದೆ. ಅದು ನಿಮ ಕೈಯಲ್ಲಿದೆ ಎಂದು ಅವರು ಹೇಳಿ ಅಚ್ಚರಿ ಮೂಡಿಸಿದ್ದಾರೆ.

RELATED ARTICLES

Latest News