ನ್ಯೂಯಾರ್ಕ್, ಏ. 20 : ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳ ಸಂಚಾರವನ್ನು ಅಮೆರಿಕಾ-ಇರಾನ್ ಸಂಘರ್ಷ ತಡೆದ ಹಿನ್ನೆಲೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ತೈಲದ ಬೆಲೆ ಏರಿಕೆಯಾಗಿದೆ.
ಪರ್ಷಿಯನ್ ಗಲ್‌್ಪ ಪ್ರದೇಶದ ಈ ಜಲಮಾರ್ಗ ಜಾಗತಿಕ ಇಂಧನ ಸರಬರಾಜಿಗೆ ಅತ್ಯಂತ ಪ್ರಮುಖವಾಗಿದೆ.ಅಮೆರಿಕದ ಕಚ್ಚಾ ತೈಲದ ಬೆಲೆ ಶಿಕಾಗೋ ಮರ್ಕಂಟೈಲ್ ಎಕ್ಸ್ಚೇಂಜ್‌ನಲ್ಲಿ ವಹಿವಾಟು ಪುನರಾರಂಭವಾದ ನಂತರ ಶೇಕಡಾ 6.4ರಷ್ಟು ಏರಿ ಪ್ರತಿ ಬ್ಯಾರೆಲ್‌ಗೆ 87.88 ಡಾಲರ್‌ಗೆ ತಲುಪಿತು.
ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 6.5ರಷ್ಟು ಏರಿ ಪ್ರತಿ ಬ್ಯಾರೆಲ್‌ಗೆ 96.25 ಡಾಲರ್‌ಗೆ ಏರಿತುಕಳೆದ ಎರಡು ದಿನಗಳಲ್ಲಿ ಜಲಸಂಧಿ ಸಂಬಂಧಿಸಿದಂತೆ ಆಶಾಭಾವನೆ ಮತ್ತು ನಿರಾಶೆಗಳ ನಡುವಿನ ಬೆಳವಣಿಗೆಗಳ ನಂತರ ಮಾರುಕಟ್ಟೆಯಲ್ಲಿ ಈ ಪ್ರತಿಕ್ರಿಯೆ ಕಂಡುಬಂದಿದೆ.
ತನ್ನ ಕರಾವಳಿಯ ಬಳಿಯ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯುವುದಾಗಿ ಶುಕ್ರವಾರ ಇರಾನ್ ಘೋಷಿಸಿತ್ತು. ಈ ಸುದ್ದಿಯಿಂದ ಕಚ್ಚಾ ತೈಲದ ಬೆಲೆಗಳು 9 ಶೇಕಡಕ್ಕೂ ಹೆಚ್ಚು ಕುಸಿದಿದ್ದವು.ಆದರೆ ಶನಿವಾರ ಅಮೆರಿಕಾ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರು ಇರಾನ್ ಬಂದರುಗಳ ಮೇಲಿನ ಅಮೆರಿಕಾ ನೌಕಾಪಡೆಯ ನಿಷೇಧ ಮುಂದುವರಿಯುತ್ತದೆ ಎಂದು ಹೇಳಿದ ಬಳಿಕ, ತೆಹ್ರಾನ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು.
ವಾರಾಂತ್ಯದಲ್ಲಿ ಇರಾನ್ ಕ್ರಾಂತಿಕಾರಿ ಗಾರ್ಡ್ ಹಲವು ನೌಕೆಗಳ ಮೇಲೆ ಗುಂಡಿನ ದಾಳಿ ನಡೆಸಿತು. ನಿಷೇಧವನ್ನು ಮೀರಿ ಸಾಗಲು ಪ್ರಯತ್ನಿಸಿದ ಇರಾನ್ ಧ್ವಜದ ಸರಕು ಹಡಗನ್ನು ಅಮೆರಿಕಾ ಬಲವಂತವಾಗಿ ವಶಪಡಿಸಿಕೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಇರಾನ್ ವಿರುದ್ಧ ಅಮೆರಿಕಾ-ಇಸ್ರೇಲ್ ಯುದ್ಧ ಈಗ ಎಂಟನೇ ವಾರಕ್ಕೆ ಕಾಲಿಟ್ಟಿದ್ದು, ಇದು ಇತ್ತೀಚಿನ ದಶಕಗಳಲ್ಲಿ ಅತ್ಯಂತ ಗಂಭೀರ ಜಾಗತಿಕ ಇಂಧನ ಸಂಕಷ್ಟಗಳಲ್ಲಿ ಒಂದಾಗಿ ಪರಿಣಮಿಸಿದೆ.
ಮಧ್ಯಪ್ರಾಚ್ಯದಿಂದ ಹೆಚ್ಚಿನ ತೈಲವನ್ನು ಆಮದು ಮಾಡುವ ಏಷ್ಯಾ ಮತ್ತು ಯುರೋಪಿನ ದೇಶಗಳು ಸರಬರಾಜು ಸ್ಥಗಿತ ಮತ್ತು ಉತ್ಪಾದನಾ ಕಡಿತದಿಂದ ಹೆಚ್ಚು ಪರಿಣಾಮ ಅನುಭವಿಸುತ್ತಿವೆ. ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಬೆಲೆ ಏರಿಕೆಯಿಂದ ವಿಶ್ವದಾದ್ಯಂತ ವ್ಯಾಪಾರಗಳು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.
