Tuesday, April 14, 2026
Homeಅಂತಾರಾಷ್ಟ್ರೀಯಅಮೆರಿಕ-ಇರಾನ್‌ ಸಂಘರ್ಷ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಮುಂದಾದ 'ಉಗ್ರ'ರಾಷ್ಟ್ರ ಪಾಕಿಸ್ತಾನ

ಅಮೆರಿಕ-ಇರಾನ್‌ ಸಂಘರ್ಷ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಮುಂದಾದ ‘ಉಗ್ರ’ರಾಷ್ಟ್ರ ಪಾಕಿಸ್ತಾನ

Pak Attempts To Act Mediator In Iran War, US-Tehran Talks Likely In Islamabad

ವಾಷಿಂಗ್ಟನ್‌, ಮಾ.24- ಅಮೆರಿಕ-ಇರಾನ್‌ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಮುಂದೆ ಬಂದಿದೆ.ಅಮೆರಿಕ ಮತ್ತು ಇರಾನ್‌ ನಡುವಿನ ಸಂಭಾವ್ಯ ಮಾತು ಕತೆಗಳ ಕುರಿತಾದ ವರದಿಗಳಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬರಬಾರದು ಎಂದು ಇದೇ ಸಂದರ್ಭದಲ್ಲಿ ಶ್ವೇತಭವನ ಹೇಳಿ ಕೊಂಡಿದೆ. ರಾಜತಾಂತ್ರಿಕ ಪ್ರಯತ್ನಗಳು ಸೂಕ್ಷ್ಮವಾಗಿರುತ್ತವೆ ಎಂದು ಹೇಳಿದ್ದು,

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ನಡುವಿನ ಮಾತುಕತೆಗಳನ್ನು ದೃಢಪಡಿಸಿದೆ.ಅಮೆರಿಕದ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್‌ನಲ್ಲಿ ಇರಾನಿನ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು ಎಂಬ ವರದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್‌ ಅವರು ಸಭೆ ಕುರಿತಾದ ಊಹಾಪೋಹಗಳನ್ನು ನಾವು ಔಪಚಾರಿಕವಾಗಿ ಘೋಷಿಸುವವರೆಗೆ ಅದು ಸತ್ಯವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಪಾಕಿಸ್ತಾನದ ಅಧಿಕಾರಿಯೊಬ್ಬರು ಮತ್ತು ಎರಡನೇ ಮೂಲವೊಂದು ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನೇರ ಮಾತುಕತೆಗಳು ಈ ವಾರದ ಆರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಬಹುದು ಎಂದು ಹೇಳಿವೆ.

ಟ್ರಂಪ್‌ ಹಾಗೂ ಮುನೀರ್‌ ನಡುವಿನ ಮಾತುಕತೆ ಬಳಿಕ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್‌್ಸ, ಶಾಂತಿ ಕಾರ್ಯಾಚರಣೆಗಳ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಮತ್ತು ಉದ್ಯಮಿ ಜೇರೆಡ್‌ ಕುಶ್ನರ್‌ ಅವರು ಪಾಕಿಸ್ತಾನದ ರಾಜಧಾನಿಯಲ್ಲಿ ಇರಾನಿನ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಮಧ್ಯಸ್ಥಿಕೆ ವಹಿಸುತ್ತಿರುವ ರಾಷ್ಟ್ರಗಳು ಇಸ್ಲಾಮಾಬಾದಿನಲ್ಲಿ ಅಮೆರಿಕ ಮತ್ತು ಇರಾನಿನ ನಡುವೆ ಸಭೆ ನಡೆಸಲು ಪ್ರಯತ್ನಿಸುತ್ತಿವೆ, ಈ ವಾರದ ಕೊನೆಯಲ್ಲಿ ಇದು ನಡೆಯಬಹುದು ಎಂದು ಹೇಳಿದೆ.ಅಮೆರಿಕ ಹಾಗೂ ಇರಾನ್‌ ನಡುವೆ ಉತ್ತಮ ಮಾತುಕತೆಗಳು ನಡೆದಿವೆ. ಕೆಲವು ವಿಷಯಗಳಲ್ಲಿ ಒಪ್ಪಂದವಾಗುವ ಸಾಧ್ಯತೆ ಕೂಡ ಇದೆ ಎಂದು ಟ್ರಂಪ್‌ ಹೇಳಿದ್ದಾರೆ. ಈ ಕಾರಣದಿಂದಲೇ ದಾಳಿಗಳನ್ನು ಐದು ದಿನಗಳ ಕಾಲ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ಮಾತುಕತೆಗಳು ವಿಫಲವಾದರೆ ದಾಳಿಗಳು ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News