Homeಅಂತಾರಾಷ್ಟ್ರೀಯಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್‌

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್‌

Trump hails Modi, pledges full US support at Delhi event

ವಾಷಿಂಗ್ಟನ್‌, ಮೇ 26 (ಪಿಟಿಐ) ಪ್ರಧಾನಿ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಹೋಗಳಿದ್ದಾರೆ ಎಂಬ ಪೋಸ್ಟ್‌ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್‌ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕ ಹೊಗಳಿದ್ದಾರೆ ಎಂದು ಗೋರ್‌ ಬರೆದುಕೊಂಡಿದ್ದಾರೆ.

ಅಧ್ಯಕ್ಷ ಟ್ರಂಪ್‌ ಇಂದು ರಾತ್ರಿ ನನಗೆ ಕರೆ ಮಾಡಿದರು. ಅವರು ಸ್ಪಷ್ಟ ಸಂದೇಶವನ್ನು ಹೊಂದಿದ್ದರು: ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ನಾವು ಎಂದಿಗೂ ಭಾರತಕ್ಕೆ ಹತ್ತಿರವಾಗಿರಲಿಲ್ಲ. ನಾನು ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ ಎಂದು ಗೋರ್‌ಎಕ್‌್ಸಪೋಸ್ಟ್‌ನಲ್ಲಿ ಹೇಳಿದ್ದಾರೆ.

ಟ್ರಂಪ್‌ ಸೋಮವಾರ ಸಂಜೆ ತಮ್ಮ ಅಧಿಕೃತ ಟ್ರುತ್‌ ಸೋಷಿಯಲ್‌ ಖಾತೆಯಲ್ಲಿ ಸಂದೇಶವನ್ನು ನವದೆಹಲಿಯ ಭಾರತ್‌ ಮಂಟಪದಲ್ಲಿ ನಡೆದ ಅಮೆರಿಕದ 250 ನೇ ವಾರ್ಷಿಕೋತ್ಸವದ ಆಚರಣೆಯ ವೀಡಿಯೊ ಕ್ಲಿಪ್‌ ಜೊತೆಗೆ ಮರು ಪೋಸ್ಟ್‌ ಮಾಡಿದ್ದಾರೆ.
ಭಾರತವು ನನ್ನನ್ನು 100 ಪ್ರತಿಶತ ನಂಬಬಹುದು ಎಂದು ಟ್ರಂಪ್‌ ಹೇಳಿದರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೇಷ್ಠ ಸ್ನೇಹಿತ ಎಂದು ಕರೆದರು.

RELATED ARTICLES

Latest News