Homeಅಂತಾರಾಷ್ಟ್ರೀಯಇರಾನ್‌ ಮೇಲೆ `ಮಹಾ' ದಾಳಿಗೆ ಯುಎಇ ಮತ್ತು ಅಮೆರಿಕ ಸಜ್ಜು

ಇರಾನ್‌ ಮೇಲೆ `ಮಹಾ’ ದಾಳಿಗೆ ಯುಎಇ ಮತ್ತು ಅಮೆರಿಕ ಸಜ್ಜು

UAE and US prepare for attack on Iran

ನವದೆಹಲಿ,ಮೇ 18- ಒಂದು ವೇಳೆ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಇರಾನ್‌ನ ಪ್ರಮುಖ ಮೂಲ ಸೌಕರ್ಯಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸಿದೆ.

ವಿಶೇಷವೆಂದರೆ ಮೂರು ದಿನಗಳ ಹಿಂದೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ಚೀನಾಕ್ಕೆ ಭೇಟಿ ನೀಡಿ ಇರಾನ್‌ ಮಾತುಕತೆಗೆ ಬಾರದಿದ್ದರೆ ಹಿಂದೆಂದೂ ಕಂಡರಿಯದ ದಾಳಿ ನಡೆಸಲಾಗುವುದು ಎಂದು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಮನವರಿಕೆ ಮಾಡಿದ್ದಾರೆ.

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕ ಸಜ್ಜಾಗಿದೆ. ಕಳೆದ ಒಂದು ತಿಂಗಳಿನಿಂದ ಕದನ ವಿರಾಮ ಘೋಷಣೆ ಮಾಡಿದ್ದು, ಕೆಲವು ಷರತ್ತುಗಳಿಗೆ ಇರಾನ್‌ ಒಪ್ಪದಿರುವುದು ದೊಡ್ಡಣ್ಣನ ಕಣ್ಣು ಕೆಂಪಾಗುವಂತೆ ಮಾಡಿದೆ.

ರಾಜತಾಂತ್ರಿಕ ಒಪ್ಪಂದಕ್ಕೆ ಅಂತಿಮ ಗಡುವು ನೀಡಿರುವ ಅಮೆರಿಕ ನಿಗದಿತ ಒಪ್ಪಂದಗಳು ವಿಫಲವಾದರೆ ವೈಮಾನಿಕ ಮತ್ತು ಮಿಲಿಟರಿ ದಾಳಿ ಪುನರಾರಂಭಿಸುವ ಬಗ್ಗೆಯೂ ಪರಿಗಣಿಸಿದೆ. ಹಾರ್ಮುಜ್‌ ಜಲಸಂಧಿಯನ್ನು ಮರುಮುಕ್ತಗೊಳಿಸದಿದ್ದರೆ ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.

ಇರಾನ್‌ ವಿಷಯದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕೆಂದು ಟ್ರಂಪ್‌ ಮೇಲೆ ಕೆಲವು ಸಂಸದರು ಒತ್ತಡ ಹಾಕುತ್ತಿದ್ದಾರೆ. ಮಿಲಿಟರಿ ಶಕ್ತಿ ಬಳಸುವುದು, ಭೀಕರ ವೈಮಾನಿಕ ದಾಳಿ ಪುನರಾರಂಭಿಸಲು ಉನ್ನತಾಧಿಕಾರಿಗಳು ರಕ್ಷಣಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ದಿ ನ್ಯೂಯಾರ್ಕ್‌ ಟೈಮ್ಸೌ ವರದಿ ಮಾಡಿದೆ.

ನಾವು ಇಟ್ಟ ಶಾಂತಿ ಪ್ರಸ್ತಾವನೆಯನ್ನು ಇರಾನ್‌ ತಿರಸ್ಕರಿಸಿದೆ. ಅವರ ಮೊದಲ ವಾಕ್ಯವೇ ನನಗೆ ಇಷ್ಟವಾಗಲಿಲ್ಲ. ನಮ ದಾರಿಗೆ ಬರದಿದ್ದರೆ ನಮಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಟ್ರಂಪ್‌ ಗುಡುಗಿದ್ದಾರೆ.

ಇದರ ನಡುವೆ ಇರಾನ್‌ ಭಾನುವಾರ ಯುಎಇ ನಲ್ಲಿರುವ ಅಣುಸ್ಥಾವರದ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತಳ್ಳುವಂತೆ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್‌ ಮೇಲೆ ದಾಳಿ ನಡೆಸಲು ಯುಎಇ ಮುಂದಾಗಿದೆ.

RELATED ARTICLES

Latest News