Sunday, April 12, 2026
Homeಅಂತಾರಾಷ್ಟ್ರೀಯಅಸಹಾಯಕವಾದ ವಿಶ್ವಸಂಸ್ಥೆ ಭದ್ರತಾ ಮಂಡಳಿ : ಗುಟೆರ್ರೆಸ್‌‍ ಆತಂಕ

ಅಸಹಾಯಕವಾದ ವಿಶ್ವಸಂಸ್ಥೆ ಭದ್ರತಾ ಮಂಡಳಿ : ಗುಟೆರ್ರೆಸ್‌‍ ಆತಂಕ

UN chief deeply concerned over ‘possible intensification of instability’ in Venezuela

ವಿಶ್ವಸಂಸ್ಥೆ,ಮಾ.15- ತೀಕ್ಷ್ಣ ಹೇಳಿಕೆ ಯೊಂದನ್ನು ನೀಡಿರುವ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರೆಸ್‌‍ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ಭದ್ರತಾ ಮಂಡಳಿಯು ಪ್ರಸಕ್ತ ಜಗತ್ತನ್ನು ಪ್ರತಿಂಬಿಸುತ್ತಿಲ್ಲ ಮತ್ತು ಅದರ ಕಾಯಂ ಸದಸ್ಯರ ವಿಟೋ ಬಳಕೆಯಿಂದಾಗಿ ಸಂಘರ್ಷಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಗುಟೆರ್ರೆಸ್‌‍ ಹೇಳಿದ್ದಾರೆ.

ಭದ್ರತಾ ಮಂಡಳಿಯು ಈಗಿನ ಜಗತ್ತನ್ನು ಪ್ರತಿನಿಧಿಸುತ್ತಿಲ್ಲ ಇದು 1945ರ ನಂತರದ ಜಗತ್ತನ್ನು ಪ್ರತಿನಿಧಿಸುತ್ತಿದೆ ಎಂದು ಅವರು ಬೈರೂತ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು.

15 ಸದಸ್ಯರ ಭದ್ರತಾ ಮಂಡಳಿಯ ಮೂವರು ಕಾಯಂ ಸದಸ್ಯರು ಯೂರೋಪಿನವರು, ಒಬ್ಬರು ಏಷ್ಯಾದವರು ಮತ್ತು ಇನ್ನೊಬ್ಬರು ಅಮೆರಿಕದವರು. ಆಫ್ರಿಕಾ ಅಥವಾ ದಕ್ಷಿಣ ಅಮೆರಿಕದ ಕಾಯಂ ಸದಸ್ಯರಿಲ್ಲ ಎಂದು ಅವರು ಗಮನಸಳೆದರು.

ಸ್ಪಷ್ಟವಾಗಿ ಜಗತಿನ ಜನಸಂಖ್ಯೆ ಮತ್ತು ಸಂಸತ್‌ನಲ್ಲಿ ಗಣನೀಯ ಪಾಲು ಪಡೆದಿರುವ ಏಷ್ಯಾದಿಂದಲೂ ಚೀನಾ ಮಾತ್ರ ಏಕೈಕ ಕಾಯಂ ಸದಸ್ಯ ರಾಷ್ಟ್ರವಾಗಿದೆ ಎಂದ ಅವರು ನುಡಿದರು.

RELATED ARTICLES

Latest News