Homeಅಂತಾರಾಷ್ಟ್ರೀಯಟೆಕ್ಸಾಸ್‌‍ ಬಂದರಿನ ಬಳಿ ಇರುವ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ

ಟೆಕ್ಸಾಸ್‌‍ ಬಂದರಿನ ಬಳಿ ಇರುವ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ

Valero oil refinery in Port Arthur hit by fire after massive explosion-

ವಾಷಿಂಗ್ಟನ್‌,ಮಾ.24- ಇರಾನ್‌ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕದ ಟೆಕ್ಸಾಸ್‌‍ ಬಂದರು ಬಳಿ ಇರುವ ವ್ಯಾಲೆರೊ ಕಚ್ಚಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ ಸಂಭವಿಸಿದೆ.

ಸ್ಫೋಟದಿಂದ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ ಜೋರಾದ ಸ್ಫೋಟದ ಸದ್ದಿನ ನಂತರ ಬೆಂಕಿ ಜ್ವಾಲೆ ಜೊತೆಗೆ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರಿತು ಎಂದು ಹೇಳಿದ್ದಾರೆ. ಕೈಗಾರಿಕಾ ಹೀಟರ್‌ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಟೆಕ್ಸಾಸ್‌‍ನ ಕರಾವಳಿಯ ಉದ್ದಕ್ಕೂ ಸುಮಾರು 4 ಸಾವಿರ ಎಕರೆಗಳಲ್ಲಿ ವ್ಯಾಲೆರೊ ಸಂಸ್ಕರಣಾಗಾರ ನಿರ್ಮಾಣವಾಗಿದ್ದು ಪ್ರತಿದಿನ 3.80 ಲಕ್ಷದಿಂದ 4.30 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.ಘಟನೆಯಲ್ಲಿ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ. ಆದರೆ ಭಾರೀ ಪ್ರಮಾಣದ ಕಚ್ಚಾತೈಲ ಹರಿದುಹೋಗಿದೆ.

RELATED ARTICLES
spot_img

Latest News