Sunday, December 1, 2024
Homeಕ್ರೀಡಾ ಸುದ್ದಿ | Sports42 ನೇ ಬಾರಿ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ

42 ನೇ ಬಾರಿ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ

ಮುಂಬೈ, ಮಾ. 14- ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು 169 ರನ್ಗಳಿಂದ ಮಣಿಸಿದ ಅಜಿಂಕ್ಯಾ ರಹಾನೆ ಸಾರಥ್ಯದ ಮುಂಬೈ ತಂಡವು ರಣಜಿ ಇತಿಹಾಸದಲ್ಲಿ 42ನೇ ಬಾರಿ ಟ್ರೋಫಿ ಜಯಿಸುವ ಮೂಲಕ 8 ವರ್ಷಗಳ ಚಾಂಪಿಯನ್ ಪಟ್ಟವನ್ನು ಬರವನ್ನು ನೀಗಿಸಿಕೊಂಡಿದೆ.

ರಣಜಿ ಫೈನಲ್ ಪಂದ್ಯಗಳಲ್ಲಿ ಈ ಹಿಂದೆ 2 ಬಾರಿ ಮುಂಬೈ ತಂಡವನ್ನು ಮಣಿಸಿಯೇ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತಾದರೂ ಈ ಬಾರಿ ಸೋಲುವ ಮೂಲಕ ನಿರಾಸೆ ಅನುಭವಿಸಿದೆ.ಎರಡನೇ ಇನ್ನಿಂಗ್ಸ್ನಲ್ಲಿ ಪಂದ್ಯ ಗೆಲ್ಲಲು ವಿದರ್ಭ 538 ರನ್ಗಳ ಬೃಹತ್ ಗುರಿಯನ್ನು ಪಡೆದಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ 92 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್ಗಳನ್ನು ಗಳಿಸಿ ಸೋಲಿನ ದವಡೆಗೆ ಸಿಲುಕಿತ್ತು.

ಆದರೆ ಅಂತಿಮ ದಿನದಾಟದಲ್ಲಿ ನಾಯಕ ಆಕಾಶ್ ವಾಡೇಕರ್ ಅವರು ತಾಳ್ಮೆಯುತ ಆಟ ಪ್ರದರ್ಶಿಸಿ ಶತಕ (102 ರನ್) ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ನಾಯಕನಿಗೆ ಆಸರೆಯಾಗಿದ್ದ ಹರ್ಷ್ ದುಬೇ ಕೂಡ ಅರ್ಧಶತಕ ಸಿಡಿಸಿ (65 ರನ್) ಗಮನ ಸೆಳೆದರು.

ಆದರೆ ನಾಯಕ ಅಕ್ಷಯ್ ಅವರು ಕೊಟೈನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದ ನಂತರ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ವಿದರ್ಭ ಅಂತಿಮವಾಗಿ 134.3 ಓವರ್ಗಳಲ್ಲಿ 368 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ 169 ರನ್ಗಳ ಹೀನಾಯ ಸೋಲು ಕಂಡಿತು.

ಮುಂಬೈ ಪರ ತುಷನ್ ಕೊಟೈನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಮುಶೀರ್ ಖಾನ್ ಹಾಗೂ ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರು. ದ್ವಿತೀಯ ಇನಿಂಗ್ಸ್ನಲ್ಲಿ 136 ರನ್ ಹಾಗೂ 2 ವಿಕೆಟ್ ಪಡೆದ ಮುಶೀರ್ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ 509 ರನ್ ಹಾಗೂ 29 ವಿಕೆಟ್ ಪಡೆದ ತುಷಾನ್ ಕೊಟೈನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ರಣಜಿ ಇತಿಹಾಸದಲ್ಲಿ 42ನೇ ಬಾರಿ ಟ್ರೋಫಿ ಜಯಿಸಿದ ಮುಂಬೈ ತಂಡಕ್ಕೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ಹಲವರು ಶುಭಾಶಯ ತಿಳಿಸಿ ಆಟಗಾರರನ್ನು ಶ್ಲಾಘಿಸಿದ್ದಾರೆ.

RELATED ARTICLES

Latest News