Homeರಾಷ್ಟ್ರೀಯಮಾದಕ ವಸ್ತು ಕಳ್ಳಸಾಗಣೆ ಪ್ರಕರಣ : 3 ರಾಜ್ಯಗಳಲ್ಲಿ ಇಡಿ ದಾಳಿ

ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ : 3 ರಾಜ್ಯಗಳಲ್ಲಿ ಇಡಿ ದಾಳಿ

Drug smuggling case: ED raids in 3 states

ಐಜ್ವಾಲ್‌‍/ನವದೆಹಲಿ, ಜೂ 8- ಸುಮಾರು 142 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ಮಿಜೋರಾಂ, ತ್ರಿಪುರಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಲಾದ ಸ್ಥಳಗಳು ಮಿಜೋರಾಂನಲ್ಲಿರುವ ಭಾರತ-ಮ್ಯಾನ್ಮಾರ್‌ ಅಂತರರಾಷ್ಟ್ರೀಯ ಗಡಿ ಪ್ರದೇಶ ಹಾಗೂ ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಸಮೀಪದಲ್ಲಿವೆ ಎಂದು ಅವರು ಹೇಳಿದ್ದಾರೆ.

ಎನ್‌ಸಿಬಿ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ,ಇಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ಆರಂಭಿಸಿತ್ತು.2025ರ ಆಗಸ್ಟ್‌ 21ರಂದು ತ್ರಿಪುರಾದಲ್ಲಿ 49.10 ಕೆ.ಜಿ. ಮೆಥಾಂಫೆಟಮೈನ್‌ ಹಾಗೂ 40 ಗ್ರಾಂ ಹೆರಾಯಿನ್‌ ವಶಪಡಿಸಿಕೊಳ್ಳಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮ್ಯಾನಾರ್‌ನಿಂದ ಮಾದಕ ವಸ್ತುಗಳನ್ನು ಮಿಜೋರಾಂನ ಗಡಿ ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತಿತ್ತು. ಬಳಿಕ ಅವುಗಳನ್ನು ತ್ರಿಪುರಾದಲ್ಲಿರುವ ಸ್ವೀಕರಿಸುವವರಿಗೆ ತಲುಪಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.ಗಡಿ ದಾಟಿ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಕಳ್ಳಸಾಗಣೆ ಜಾಲವೇ ಈ ಚಟುವಟಿಕೆ ನಡೆಸುತ್ತಿತ್ತು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

RELATED ARTICLES

Latest News