Homeರಾಷ್ಟ್ರೀಯಉಗ್ರರು ನಡೆಸಿದ ನಡೆದ ಸರಣಿ ದಾಳಿಯಲ್ಲಿ 18 ಪಾಕ್ ಸೈನಿಕರು ಬಲಿ

ಉಗ್ರರು ನಡೆಸಿದ ನಡೆದ ಸರಣಿ ದಾಳಿಯಲ್ಲಿ 18 ಪಾಕ್ ಸೈನಿಕರು ಬಲಿ

18 Pakistani soldiers killed in series of attacks by terrorists

ಇಸ್ಲಾಮಾಬಾದ್‌, ಮೇ 15: ಪಾಕಿಸ್ತಾನದಲ್ಲಿ ಉಗ್ರರು ನಡೆಸಿದ ಸರಣಿ ದಾಳಿಗೆ 18 ಪಾಕಿಸ್ತಾನಿ ಸೈನಿಕರು ಬಲಿಯಾಗಿದ್ದಾರೆ.ಇಲ್ಲಿನ ವಾಯವ್ಯ ಪ್ರಾಂತ್ಯವಾದ ಖೈಬರ್‌ ಪಖ್ತುಂಖ್ವಾದಲ್ಲಿ ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 18 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಷೇಧಿತ ಸಂಘಟನೆ ತೆಹ್ರೀಕ್‌-ಎ-ತಾಲಿಬಾನ್‌ ಪಾಕಿಸ್ತಾನ ಉಗ್ರರು ಸೇನಾ ಶಿಬಿರಗಳು ಮತ್ತು ಪೊಲೀಸ್‌‍ ಚೌಕಿಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿ ನಡೆಸಿದ್ದಾರೆ.

ಬಜೌರ್‌ ಜಿಲ್ಲೆಯ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿಗೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 9 ಉಗ್ರರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಪಾಕಿಸ್ತಾನದ ಬಜೌರ್‌ ಜಿಲ್ಲೆಯ ದಮಂಗಿ ಸ್ಕೌಟ್‌್ಸ ಕ್ಯಾಂಪ್‌ನ ಮುಖ್ಯ ದ್ವಾರದ ಬಳಿ ಉಗ್ರನೊಬ್ಬ ಆತ್ಮಹತ್ಯಾ ಸ್ಫೋಟ ನಡೆಸುವ ಮೂಲಕ ದಾಳಿಯನ್ನು ಆರಂಭಿಸಿದ್ದಾನೆ. ಸ್ಫೋಟದ ಬೆನ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಉಗ್ರರು ಶಿಬಿರಕ್ಕೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ಈ ಗುಂಡಿನ ಕಾಳಗದಲ್ಲಿ 14 ಸಿಬ್ಬಂದಿ ಹತರಾಗಿದ್ದಾರೆ.

ಇದೇ ವೇಳೆ ಐನಾಯಿ ಕಿಲೆ ಮತ್ತು ಮಾಮಂಡ್‌ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸದ್ಯ ಘಟನಾ ಸ್ಥಳವನ್ನು ಸೇನೆಯು ಸುತ್ತುವರೆದಿದೆ. ಅಡಗಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಪಾಕಿಸ್ತಾನದಲ್ಲಿ ಆಗಾಗ್ಗೆ ನಡೆಯುತ್ತಿರುವ ಈ ದಾಳಿಗಳು ಅಲ್ಲಿನ ಭದ್ರತಾ ಲೋಪಗಳನ್ನು ಬಹಿರಂಗಪಡಿಸಿವೆ. ಆಗಾಗ್ಗೆ ಸಂಭವಿಸುವ ಸ್ಫೋಟಗಳಿಂದಾಗಿ ಸೇನೆ ಮತ್ತು ನಾಗರಿಕರು ತೀವ್ರ ಆತಂಕದಲ್ಲಿ ದಿನಕಳೆಯುವಂತಾಗಿದೆ.

ಕಳೆದ ಮಂಗಳವಾರವಷ್ಟೇ ಖೈಬರ್‌ ಪಖ್ತುಂಖ್ವಾದ ನೌರಂಗ್‌ ಬಜಾರ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಉಗ್ರರ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಘಟನಾ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News