Homeರಾಷ್ಟ್ರೀಯಕಾಲುವೆಗೆ ಉರುಳಿ ಬಿದ್ದ ಕಾರು, ನಾಲ್ವರ ಸಾವು

ಕಾಲುವೆಗೆ ಉರುಳಿ ಬಿದ್ದ ಕಾರು, ನಾಲ್ವರ ಸಾವು

3 brothers among 4 dead after car falls into canal in Mathura

ಮಥುರಾ,ಫೆ.19- ಕಾರೊಂದು ಕಾಲುವೆಗೆ ಉರುಳಿ ಬಿದ್ದು ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಘಟನೆ ಕಳೆದ ರಾತ್ರಿ ನಹ್ಲಾ ದೇವಿಯ ಸೇತುವೆಯ ಬಳಿ ನಡೆದಿದೆ. ಮಹಮೂದ್‌ಪುರದಿಂದ ದೀಗ್‌ ಕಡೆಗೆ ಹೋಗುತ್ತಿದ್ದ ಕಾರು ಅತಿ ವೇಗದಲ್ಲಿ ತಿರುವು ಪಡೆಯುವಾಗ ನಹ್ಲಾ ದೇವಿಯ ಸೇತುವೆಯ ತಡೆಗೋಡೆಗೆ ಗುದ್ದಿ ಕಾಲುವೆಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಬಲದೇವ್‌ಗಢ ನಿವಾಸಿಗಳಾದ ರಾಹುಲ್‌ (23), ಮತ್ತು ಅವರ ಸೋದರಸಂಬಂಧಿಗಳಾದ ಅಮಿತ್‌ (23) ಮತ್ತು ಮೋಹಿತ್‌ (21) ಎಂದು ಗುರುತಿಸಲಾಗಿದೆ.ಮತ್ತೊಬ್ಬ ಯುವಕನ ಗುರುತು ಪತ್ತೆಯಾಗಿಲ್ಲ.

ರಸ್ತೆಯಲ್ಲಿ ತೀಕ್ಷ್ಣವಾದ ತಿರುವು ಇದ್ದು ಚಾಲಕ ಅಜಾಗರುಕತೆಯಿಂದ ಕಾರನ್ನು ಚಲಾಯಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ (ಗ್ರಾಮೀಣ) ಸುರೇಶ್‌ ಚಂದ್ರ ರಾವತ್‌ ತಿಳಿಸಿದ್ದಾರೆ.

ಕಾರು ಸುಮಾರು ಆರು ಮೀಟರ್‌ ಅಗಲದ ನೀರಿನ ಕಾಲುವೆಗೆ ಉರುಳಿದೆ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಕಾರನ್ನು ಕಾಲುವೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು ಆದರೆ ಅದರಲ್ಲಿದ್ದವರನ್ನು ಉಳಿಸಲು ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ರಾವತ್‌ ಹೇಳಿದರು.ಘಟನೆ ಕುತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌‍ಪಿ ರಾವತ್‌ ತಿಳಿಸಿದ್ದಾರೆ.

RELATED ARTICLES
spot_img

Latest News