ಬರಿಪಾದ,ಫೆ.19-ಎಲೆ ಕೂಯುಲು ಕಾಡಿನಂಚೆಗೆ ಹೋಗಿದ್ದಾಗ ಕರಡಿ ಗುಂಪು ಪತಿಯ ಮೇಲೆ ದಾಳಿ ಮಾಡಿದನ್ನು ನೋಡಿದ ಪತ್ನಿ ವೀರಾವೇಶದಿಂದ ಹೋರಾಡಿದ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ನಡದಿದೆ.
ಕರಡಿಯೊಂದಿಗಿನ ಹೋರಾಟದ ಮಹಿಳೆ ತನ್ನ ಗಂಡನನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಂಜಿಯಾ ಶ್ರೇಣಿಯ ಮಿಲು ಗ್ರಾಮದ ಬಳಿಯ ಹತಿಸಲಬೇಡ ಅರಣ್ಯದಲ್ಲಿ ಬುಡಕಟ್ಟು ದಂಪತಿಗಳಾದ ಮಾಲ್ಡೆ ಸೊರೆನ್ (48) ಮತ್ತು ಲಿಲಿ ಸೊರೆನ್ (41) ಎಲೆಗಳನ್ನು ಸಂಗ್ರಹಿಸುತ್ತಿದ್ದಾಗ ಈ ಘಟನೆ ನಡೆದಿದೆ.
ದಂಪತಿಗಳು ದಟ್ಟವಾದ ಕಾಡಿಗೆ ಪ್ರವೇಶಿಸಿದಾಗ, ಆರು ಕಾಡು ಕರಡಿಗಳ ಗುಂಪ ಎದುರಾಗಿ,ಅದರಲ್ಲಿ ಒಂದು ಮಾಲ್ಡೆ ಮೇಲೆ ದಾಳಿ ಮಾಡಿ, ಅವರನ್ನು ಕ್ರೂರವಾಗಿ ಥಳಿಸಿಸತ್ತು. ಸ್ಥಳದಿಂದ ಓಡಿಹೋಗುವ ಬದಲು, ಕೊಡಲಿಯನ್ನು ಎತ್ತಿಕೊಂಡು ಲಿಲಿ ತನ್ನ ಗಂಡನನ್ನು ರಕ್ಷಿಸಲುವೀರಾವೇಶದಿಂದ ಕಾದಾಡಿದ್ದಾರೆ.
ಈ ನಡುವೆ ಕರಡಿ ಗಾಯಗೊಂಡು ಕಾಡಿಗೆ ಓಡಿಹೋಗಿದೆ.ಆದರೆ ಮಾಲ್ಡೆ ಸೊರೆನ್ ತಲೆ ಗಂಭೀರ ಗಾಯಗಳಾಗಿತ್ತು.ಮಾಲ್ಡೆ ಅವರನ್ನು ಮೊದಲು ಕಾರಂಜಿಯಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮತ್ತು ನಂತರ ಉತ್ತಮ ಚಿಕಿತ್ಸೆಗಾಗಿ ಕಿಯೋಂಜಾರ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಎಂದು ರೇಂಜ್ ಆಫೀಸರ್ ಪ್ರಶಾಂತ್ ಕುಮಾರ್ ಸ್ವೈನ್ ಹೇಳಿದರು.
ಒಟ್ಟಾರೆ ಮಹಿಳೆಯ ದೈರ್ಯವನ್ನು ಸ್ಥಳೀಯರು ಕೊಂಡಾಡಿದ್ದಾರೆ.
