ಲಕ್ನೋ,ಫೆ.19- ಭಾರತವು ಒಂದು ದಿನ ಜಾಗತಿಕ ದಕ್ಷಿಣ ವಲಯವನ್ನು ಮುನ್ನಡೆಸಲಿದೆ ಮತ್ತು ನಂತರ ಯಾವುದೇ ರಾಷ್ಟ್ರ ಅಥವಾ ಯಾವುದೇ ಸುಂಕಗಳು ನಮಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಲ್ಲಿ ನಡೆದ ಆರ್‌ಎಸ್‌ಎಸ್ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ಚದ ದಕ್ಷಿಣ ಗೋಳಾರ್ಧದಲ್ಲಿ ಅಭಿವೃದ್ಧಿ ಹೊಂದುತ್ತಿರುವ, ಕಡಿಮೆ ಅಭಿವೃದ್ಧಿ ಹೊಂದಿದ ಅಥವಾ ಅಭಿವೃದ್ಧಿಯಾಗದ ದೇಶಗಳೆಂದು ಪರಿಗಣಿಸಲಾದ ದೇಶಗಳನ್ನು ಭಾರತ ಮುನ್ನಡೆಸಲಿದೆ.
ಅಮೆರಿಕದೊಂದಿಗಿನ ಇತ್ತೀಚಿನ ಸುಂಕ ವಿವಾದದ ಮಧ್ಯೆ ಭಾಗವತ್ ಅವರ ಹೇಳಿಕೆಗಳು ಮಹತ್ವ ಪಡದಿವೆ.ಯಾವುದೇ ರಾಷ್ಟ್ರದ ಮುಂದೆ ಬಗ್ಗುವುದಿಲ್ಲ, ಸುಂಕಗಳು ನಮ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತವು ದೃಢವಾಗಿ ನಿಲ್ಲುತ್ತದೆ ಎಂದು ಅವರು ವಿವರವಾಗಿ ತಿಳಿಸಿದರು.
ಸ್ವಲ್ಪ ಸಮಯದಲ್ಲಿ, ಎಲ್ಲವೂ ಮತ್ತೆ ಸಾಮಾನ್ಯವಾಗುತ್ತದೆ. ಆತಂಕದ ಪಡಬೇಕಾಗಿಲ್ಲ.ಮಕ್ಕಳು ಮನೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕು ಮತ್ತು ಭೌಗೋಳಿಕ ಅಂತರದ ಹೊರತಾಗಿಯೂ ಕುಟುಂಬಗಳು ಭಾವನಾತಕವಾಗಿ ಸಂಪರ್ಕದಲ್ಲಿರಬೇಕು ಎಂದು ಅವರು ಹೇಳಿದರು.
ಸಂಪ್ರದಾಯಗಳನ್ನು ಎತ್ತಿಹಿಡಿಯಲು ಮತ್ತು ಯುವ ಪೀಳಿಗೆಗೆ ಮೌಲ್ಯಗಳನ್ನು ರವಾನಿಸಲು ಕುಟುಂಬಗಳು ವರ್ಷಕ್ಕೊಮೆಯಾದರೂ ಒಟ್ಟುಗೂಡಬೇಕೆಂದು ಅವರು ಸಲಹೆ ನೀಡಿದರು. ಒಳ್ಳೆಯ ಕುಟುಂಬವು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ. ದೇವಾಲಯಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಮತ್ತು ಭಕ್ತರೇ ನಿರ್ವಹಿಸಬೇಕು ಎಂದು ಭಾಗವತ್ ನುಡಿದರು.
