Homeರಾಷ್ಟ್ರೀಯಜಿಂಕೆ ಬೇಟೆಯಾಡಿದ ನಾಲ್ವರ ಬಂಧನ

ಜಿಂಕೆ ಬೇಟೆಯಾಡಿದ ನಾಲ್ವರ ಬಂಧನ

ಈರೋಡ್‌, ಆ.26 (ಪಿಟಿಐ)- ತಮಿಳುನಾಡಿನ ಈರೋಡ್‌ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಕೊಂದ ಆರೋಪದ ಮೇಲೆ ನಾಲ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಮಾದೇಶ್‌ (41), ರಂಗನ್‌ (41), ಸದಯಪ್ಪನ್‌ (31) ಮತ್ತು ಕರಿ (68) ಎಂದು ಗುರುತಿಸಲಾಗಿದೆ.

ಅರಣ್ಯಾಧಿಕಾರಿಗಳ ಪ್ರಕಾರ, ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಕಡಂಬೂರು ಅರಣ್ಯ ವ್ಯಾಪ್ತಿಯ ಗುಥಿಯಾಲತ್ತೂರ್‌ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದರು. ಈ ವೇಳೆ ನಾಲ್ವರು ವ್ಯಕ್ತಿಗಳು ಗೋಣಿ ಚೀಲವೊಂದನ್ನು ಹೊತ್ತುಕೊಂಡು ಅರಣ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ.

ಅನುಮಾನಗೊಂಡ ಅರಣ್ಯ ಸಿಬ್ಬಂದಿ ನಾಲ್ವರನ್ನು ತಡೆದು ಗೋಣಿ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ ಕತ್ತರಿಸಿದ ಜಿಂಕೆ ಮಾಂಸದ ತುಂಡುಗಳು ಹಾಗೂ ಕೆಲವು ಬೇಟೆಯಾಡುವ ಸಲಕರಣೆಗಳು ಪತ್ತೆಯಾಗಿವೆ.

ವಿಚಾರಣೆ ವೇಳೆ ನಾಲ್ವರು ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ನಾಲ್ವರನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಆರೋಪಿಗಳನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

RELATED ARTICLES
spot_img

Latest News