Homeರಾಷ್ಟ್ರೀಯಮಧ್ಯಪ್ರದೇಶದಲ್ಲಿ ಕೇವಲ 8 ತಿಂಗಳಲ್ಲಿ 50 ಮಂದಿ, 45 ಹುಲಿಗಳ ಸಾವು

ಮಧ್ಯಪ್ರದೇಶದಲ್ಲಿ ಕೇವಲ 8 ತಿಂಗಳಲ್ಲಿ 50 ಮಂದಿ, 45 ಹುಲಿಗಳ ಸಾವು

50 people, 45 tigers killed in Madhya Pradesh in just 8 months

ಭೋಪಾಲ್‌,ಆ.11- ಭಾರತದಲ್ಲಿ ಅತಿ ಹೆಚ್ಚು ಹುಲಿ ಮತ್ತು ಚಿರತೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆಯ ಯಶಸ್ಸಿನ ನಡುವೆಯೂ ಒಂದು ಗಂಭೀರ ಬಿಕ್ಕಟ್ಟು ತಲೆದೋರಿದೆ.

2026ರ ಮೊದಲ ಎಂಟು ತಿಂಗಳಲ್ಲಿ ರಾಜ್ಯದಾದ್ಯಂತ ಕಾಡುಪ್ರಾಣಿಗಳ ದಾಳಿಗೆ ಬಲಿಯಾದವರ ಸಂಖ್ಯೆ ಕನಿಷ್ಠ 50ಕ್ಕೇರಿದ್ದರೆ, ಸರಿಸುಮಾರು ಅದೇ ಅವಧಿಯಲ್ಲಿ 45ಕ್ಕೂ ಹೆಚ್ಚು ಹುಲಿಗಳು ಪ್ರಾಣ ಕಳೆದುಕೊಂಡಿವೆ. ಇದು ರಾಜ್ಯದಲ್ಲಿ ವನ್ಯಜೀವಿ ಹಾಗೂ ಮಾನವನ ನಡುವಿನ ಸಹಬಾಳ್ವೆಗೆ ಸವಾಲಾಗಿ ಪರಿಣಮಿಸಿದೆ.

ಮಧ್ಯಪ್ರದೇಶ ಅರಣ್ಯ ಇಲಾಖೆಯ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷ ಅತಿ ಹೆಚ್ಚು ಮಾನವ ಸಾವಿಗೆ ಹುಲಿಗಳೇ ಕಾರಣವಾಗಿವೆ.ಒಟ್ಟು ಮಾನವ ಸಾವುಗಳು (50): ಹುಲಿ ದಾಳಿಯಿಂದ 22, ಕಾಡುಹಂದಿಗಳಿಂದ 8, ಆನೆಗಳಿಂದ 7, ಕರಡಿಗಳಿಂದ 4 ಹಾಗೂ ಚಿರತೆಯಿಂದ 1 ಸಾವು ಸಂಭವಿಸಿದೆ. ಬಲಿಯಾದವರಲ್ಲಿ 16 ಮಹಿಳೆಯರು ಹಾಗೂ ಹುಡುಗಿಯರೇ ಆಗಿದ್ದಾರೆ.

ದಾಳಿ ಸಮಯ: ಮಾರ್ಚ್‌ (7), ಏಪ್ರಿಲ್‌ (13) ಮತ್ತು ಮೇ (10) ತಿಂಗಳುಗಳಲ್ಲಿ ಅತಿ ಹೆಚ್ಚು ಅಂದರೆ 30 ಸಾವುಗಳು ಸಂಭವಿಸಿವೆ. ಈ ಅವಧಿಯಲ್ಲಿ ಬುಡಕಟ್ಟು ಸಮುದಾಯದ ಗ್ರಾಮಸ್ಥರು ಟೆಂಡು ಎಲೆಗಳು ಮತ್ತು ಮಹುವಾ ಹೂವುಗಳನ್ನು ಸಂಗ್ರಹಿಸಲು ಅರಣ್ಯ ಪ್ರದೇಶಗಳಿಗೆ ತೆರಳುವುದರಿಂದ ವನ್ಯಜೀವಿಗಳ ಮುಖಾಮುಖಿಯಾಗುವ ಸಂಭವ ಹೆಚ್ಚಿರುತ್ತದೆ.

ಹುಲಿ ದಾಳಿಯಿಂದ ಮೃತರಾದ 22 ಜನರಲ್ಲಿ 14 ಮಂದಿ ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಕೃತಿಯ ಮೋಗ್ಲಿ ಕಲ್ಪನೆಗೆ ಸ್ಫೂರ್ತಿಯಾದ ಮಹಾಕೋಶಲ್‌ ಪ್ರದೇಶದ ಸಿಯೋನಿ ಹಾಗೂ ಸುತ್ತಮುತ್ತಲಿನ ದಟ್ಟ ಅರಣ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ಬಾಂಧವಗಢ ಹುಲಿ ಮೀಸಲು ಪ್ರದೇಶ ಹಾಗೂ ಪಕ್ಕದ ಜಿಲ್ಲೆಗಳಿಂದಲೂ ಏಳು ಹುಲಿ ಸಂಬಂಧಿತ ಸಾವುಗಳು ವರದಿಯಾಗಿವೆ.

ಜತೆಗೆ ಛತ್ತೀಸ್‌‍ಗಢ ಗಡಿಯಲ್ಲಿರುವ ಅನುಪ್ಪುರ್‌, ಸಿಧಿ ಮತ್ತು ಶಹದೋಲ್‌ ಜಿಲ್ಲೆಗಳಲ್ಲಿ ಆನೆ ಮತ್ತು ಕರಡಿ ದಾಳಿಯ ಪ್ರಕರಣಗಳು ಹೆಚ್ಚಾಗಿವೆ.ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, 2020-21ರಿಂದ 2024-25ರ ನಡುವಿನ ಐದು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಕಾಡುಪ್ರಾಣಿಗಳ ದಾಳಿಗೆ ಒಟ್ಟು 406 ಜನರು ಬಲಿಯಾಗಿದ್ದಾರೆ.

ಇದೇ ಅವಧಿಯಲ್ಲಿ 5,804 ಜನರು ಗಾಯಗೊಂಡಿದ್ದು, 72,627 ಜಾನುವಾರುಗಳು ನಷ್ಟವಾಗಿವೆ.ಮಾನವ ಸಾವು ಮತ್ತು ಜಾನುವಾರು ಹಾನಿಗೆ ಪರಿಹಾರವಾಗಿ ಸರ್ಕಾರವು 88.38 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪಾವತಿಸಿದೆ (2024-25ರಲ್ಲಿ ಮಾತ್ರ ಪರಿಹಾರ ಮೊತ್ತವು 20.05 ಕೋಟಿ ರೂ. ದಾಟಿದೆ).

ಸಂಘರ್ಷಕ್ಕೆ ಪ್ರಮುಖ ಕಾರಣಗಳೇನು?
ಆವಾಸಸ್ಥಾನದ ಕೊರತೆ : 2022ರ ರಾಷ್ಟ್ರೀಯ ಹುಲಿ ಗಣತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ 785ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ ಇದು ಸುಮಾರು 1,000 ತಲುಪಿದೆ ಎಂದು ಅಂದಾಜಿಸಲಾಗಿದೆ. ಆದರೆ ಹುಲಿಗಳ ಸಂಖ್ಯೆಗೆ ತಕ್ಕಂತೆ ಅರಣ್ಯ ಪ್ರದೇಶ ವಿಸ್ತರಣೆಯಾಗಿಲ್ಲ. ಭೂದೃಶ್ಯದ ವಿಘಟನೆ: ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಕೃಷಿಭೂಮಿಗಳು ಮತ್ತು ಮಾನವ ವಸಾಹತುಗಳು ವನ್ಯಜೀವಿ ಕಾರಿಡಾರ್‌ಗಳನ್ನು ಛೇದಿಸುತ್ತಿರುವುದರಿಂದ ಪ್ರಾಣಿಗಳು ಮತ್ತು ಮಾನವರು ಮುಖಾಮುಖಿಯಾಗುವ ಸಂದರ್ಭಗಳು ಹೆಚ್ಚುತ್ತಿವೆ.

RELATED ARTICLES
spot_img

Latest News