Homeರಾಷ್ಟ್ರೀಯಲಕ್ನೋ ವಿಮಾನ ನಿಲ್ದಾಣದದಲ್ಲಿ ಆಕಾಶ ಏರ್‌ ವಿಮಾನ ತುರ್ತು ಭೂಸ್ಪರ್ಶ

ಲಕ್ನೋ ವಿಮಾನ ನಿಲ್ದಾಣದದಲ್ಲಿ ಆಕಾಶ ಏರ್‌ ವಿಮಾನ ತುರ್ತು ಭೂಸ್ಪರ್ಶ

Akasa Air flight runs short on fuel, makes emergency landing in Lucknow

ಲಕ್ನೋ.ಮೇ 28: ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಆಕಾಶ ಏರ್‌ ವಿಮಾನಯಾನ ಸಂಸ್ಥೆಯ ವಿಮಾನ ಇಂಧನ ಕೊರತೆಯಿಂದಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಘಟನೆ ನಡೆದಿದೆ.ಪೈಲಟ್‌ಗಳು ಇಂಧನ ಕೊರತೆ ಮನಗಂಡು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ವಿಮಾನವು ಭುವನೇಶ್ವರಕ್ಕೆ ತಲುಪಬೇಕಿತ್ತು. ಆದರೆ ಅಲ್ಲಿ ಹವಾಮಾನ ಅತ್ಯಂತ ಕೆಟ್ಟದಾಗಿದ್ದ ಕಾರಣ, ರಾತ್ರಿ 8.40 ರ ಸುಮಾರಿಗೆ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಯಿತು.

ಈ ಮಾರ್ಗಮಧ್ಯೆ ವಿಮಾನದ ಇಂಧನ ಮಟ್ಟ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್‌ ಗಮನಿಸಿದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಪೈಲಟ್‌ ತಕ್ಷಣವೇ ತುರ್ತು ಕರೆ ಮಾಡಿ ವಾಯು ಸಂಚಾರ ನಿಯಂತ್ರಣ ಸಂಸ್ಥೆಯಿಂದ ಆದ್ಯತೆಯ ಮೇರೆಗೆ ವಿಮಾನ ಇಳಿಸಲು ಅನುಮತಿ ಕೋರಿದರು.

ರಾತ್ರಿ 9.02 ಕ್ಕೆ ಪೈಲಟ್‌ನಿಂದ ಸಂದೇಶ ಸಿಗುತ್ತಿದ್ದಂತೆ ಎಚ್ಚೆತ್ತ ಲಕ್ನೋ ಎಟಿಸಿ, ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು. ರನ್‌ವೇಯನ್ನು ತಕ್ಷಣವೇ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಎಫ್‌‍ ಸಿಬ್ಬಂದಿ, ಅಗ್ನಿಶಾಮಕ ದಳದ ವಾಹನಗಳು, ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್‌್ಸಗಳನ್ನು ರನ್‌ವೇ ಸುತ್ತಲೂ ಸನ್ನದ್ಧವಾಗಿ ನಿಲ್ಲಿಸಲಾಯಿತು.

ಎಲ್ಲಾ ಆತಂಕಗಳ ಮಧ್ಯೆ, ಬೋಯಿಂಗ್‌ 737 ಮ್ಯಾಕ್‌್ಸಆಕಾಶ್‌ ಏರ್‌ ವಿಮಾನವು ರಾತ್ರಿ 9.21 ಕ್ಕೆ ರನ್‌ವೇ 09 ರಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಯಿತು. ವಿಮಾನ ಇಳಿದ ತಕ್ಷಣ ಎಲ್ಲವೂ ಸಾಮಾನ್ಯವಾಗಿದೆ ಎಂದು ಪೈಲಟ್‌ ತಿಳಿಸಿದ ನಂತರ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ರಾತ್ರಿ 9.30 ರ ಸುಮಾರಿಗೆ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು.

ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ವಿಮಾನ ಇಳಿದ ಬಳಿಕ ಮೂವರು ಪ್ರಯಾಣಿಕರು ಲಕ್ನೋದಲ್ಲೇ ಇಳಿದುಕೊಂಡರು. ನಂತರ ವಿಮಾನಕ್ಕೆ ಮತ್ತೊಮೆ ಇಂಧನ ತುಂಬಿಸಿ, ಭುವನೇಶ್ವರಕ್ಕೆ ಕಳುಹಿಸಿಕೊಡಲು ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News