Homeರಾಷ್ಟ್ರೀಯಪ್ರತಿಕೂಲ ಹವಾಮಾನ : ಬಂಗಾಳ ಸಿಎಂ ಸುವೇಂದು ಅಧಿಕಾರಿ ಹೆಲಿಕಾಪ್ಟರ್‌ ತುರ್ತು ಭೂಶ್ಪರ್ಶ

ಪ್ರತಿಕೂಲ ಹವಾಮಾನ : ಬಂಗಾಳ ಸಿಎಂ ಸುವೇಂದು ಅಧಿಕಾರಿ ಹೆಲಿಕಾಪ್ಟರ್‌ ತುರ್ತು ಭೂಶ್ಪರ್ಶ

Bengal CM's Suvendu's Helicopter Makes Emergency Landing at Kolaghat

ಕೋಲ್ಕತಾ, ಆ.11- ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿದ್ದ ಹೆಲಿಕಾಪ್ಟರ್‌ ಪೂರ್ವ ಮೇದಿನಿಪುರ ಜಿಲ್ಲೆಯ ಕೋಲಾಘಾಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಮುಖ್ಯಮಂತ್ರಿಯವರು ದಮ್‌ದಮ್‌ನಿಂದ ಕೇಶಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್‌ ಕೋಲಾಘಾಟ್‌ನ ತೆರೆದ ಮೈದಾನದಲ್ಲಿ ಹೆಲಿಕಾಪ್ಟರ್‌ ಇಳಿಸಲು ನಿರ್ಧರಿಸಿದರು ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್‌ ಬೋಸ್‌‍ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಧಿಕಾರಿ ಕೇಶಪುರಕ್ಕೆ ತೆರಳುತ್ತಿದ್ದರು.ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಬಳಿಕ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕೇಶಪುರದಲ್ಲಿರುವ ನಿಗದಿತ ಕಾರ್ಯಕ್ರಮದ ಸ್ಥಳದತ್ತ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News