Monday, May 4, 2026
Homeರಾಷ್ಟ್ರೀಯಬಂಗಾಳದಲ್ಲಿ ಶ್ಯಾಮ ಪ್ರಸಾದ್‌ ಮುಖರ್ಜಿ ಕನಸು ನನಸಾಗಿಸಿದ ಬಿಜೆಪಿ

ಬಂಗಾಳದಲ್ಲಿ ಶ್ಯಾಮ ಪ್ರಸಾದ್‌ ಮುಖರ್ಜಿ ಕನಸು ನನಸಾಗಿಸಿದ ಬಿಜೆಪಿ

BJP made Shyama Prasad Mukherjee's dream come true in Bengal

ನವದೆಹಲಿ,ಮೇ.4- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಕೇವಲ ರಾಜಕೀಯ ಫಲಿತಾಂಶವಲ್ಲ,ಇದು ಹಿಂದುತ್ವದ ಪ್ರಮುಖ ನಾಯಕರು ಆದ ಮತ್ತು ಜನಸಂಘ ಸ್ಥಾಪಕ ಶಾಂಪ್ರಕಾಶ್‌ ಮುಖರ್ಜಿ ಅವರಿಗೆ ಅಟಲ್‌ ಬಿಗಾರಿ ವಾಜಪೇಯಿ ಅವರ ನೆನೆಯುವ ಹೆಮೆ ತರುವ ಕ್ಷಣವಾಗಿದೆ.

ಬಂಗಾಳದಲ್ಲಿ ಬಿಜೆಪಿಗೆ ಹಿಂದೆ ನೆಲೆಯೂರಲು ಆಗದಿರುವುದು ವಾಜಪೇಯಿ ಅವರಿಗೆ ಸದಾ ಚಿಂತೆಯಾಗಿತ್ತು. ಏಕೆಂದರೆ ಇದೇ ಬಂಗಾಳವೇ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ನೆಲೆಯಾಗಿದ್ದು, ಅವರು ಬಿಜೆಪಿಯ ಉದ್ಭವದಲ್ಲಿ ಪ್ರಮುಖ ಪಾತ್ರವಹಿಸಿದ ಚಿಂತಕನಾಗಿದ್ದರು.

ಬಂಗಾಳದಲ್ಲಿ ಬಿಜೆಪಿಯ ಈ ಗೆಲುವು ದೀರ್ಘಕಾಲದ ಪ್ರಯತ್ನದ ಫಲವಾಗಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 3 ಸ್ಥಾನಗಳನ್ನು ಗೆದ್ದಿತ್ತು. ಆದರೆ ಅಲ್ಲಿ ಪ್ರಾರಂಭವಾದ ಬೆಳವಣಿಗೆ 2021ರ ಚುನಾವಣೆಯಲ್ಲಿ 77 ಸ್ಥಾನಗಳವರೆಗೆ ಏರಿಕೆಯಾಗಲು ಕಾರಣವಾಯಿತು. ಮತಶೇಕಡಾ ಅಂತರದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಸುಮಾರು 10 ಶೇಕಡಾ ವ್ಯತ್ಯಾಸ ಇತ್ತು.

ದಕ್ಷಿಣ ಕೊಲ್ಕತ್ತಾದ ಪ್ರಮುಖ ರಸ್ತೆಗೆ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಹೆಸರು ಇರುವುದು ಕೇವಲ ಗೌರವವಲ್ಲ; ಅದು ಬಂಗಾಳದ ಜನರಲ್ಲಿ ಅವರ ಬಗ್ಗೆ ಇರುವ ಪರಿಚಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಬಂಗಾಳದ ಕೊಡುಗೆಗೆ ಸಾಕ್ಷಿಯಾಗಿದೆ.

ಈ ಹಿನ್ನೆಲೆಯಲ್ಲೇ, ಬಂಗಾಳದಲ್ಲಿ ಬಿಜೆಪಿಯ ಮುಂದುವರಿದ ಯಶಸ್ಸು, ಮುಖರ್ಜಿ ಅವರ ಪರಂಪರೆ ಮತ್ತು ರಾಷ್ಟ್ರೀಯತಾವಾದಿ ರಾಜಕೀಯದ ಬೆಳವಣಿಗೆಗೆ ಮತ್ತಷ್ಟು ಬಲ ನೀಡುವಂತಾಗಿದೆ.

RELATED ARTICLES

Latest News