Homeರಾಜಕೀಯಸಿಎಂ ಶಿವಕುಮಾರ್‌ ರೈತರ ಬದಲು ರಿಯಲ್‌ ಎಸ್ಟೇಟ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ : ವಿಜಯೇಂದ್ರ

ಸಿಎಂ ಶಿವಕುಮಾರ್‌ ರೈತರ ಬದಲು ರಿಯಲ್‌ ಎಸ್ಟೇಟ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ : ವಿಜಯೇಂದ್ರ

DK Shivakumar

ಬೆಂಗಳೂರು,ಜೂ.14- ರೈತರ ಪರವಾಗಿ ಕೆಲಸ ಮಾಡುವ ಬದಲು ಕಾಂಗ್ರೆಸ್‌‍ ಸರ್ಕಾರ ಮತ್ತು ಸಿಎಂ ಶಿವಕುಮಾರ್‌ ರಿಯಲ್‌ ಎಸ್ಟೇಟ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.

ಜಿಬಿಐಟಿ ಯೋಜನೆಗಾಗಿ 499 ಎಕರೆ ಭೂಸ್ವಾಧೀನ ವಿಚಾರದಲ್ಲಿ ಸಿಎಂ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಡದಿ ಟೌನ್‌ ಶಿಪ್‌ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ರೈತರ ಜೊತೆ ಕುಳಿತು ಚರ್ಚಿಸಿ ನಿಜವಾದ ಸಮಸ್ಯೆ ಏನು ಎಂಬುದನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅರ್ಥೈಸಿಕೊಳ್ಳಲಿ. ಶೇಕಡಾ 90ಕ್ಕಿಂತ ಹೆಚ್ಚು ಮಂದಿ ರೈತರು ತಮ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ತಯಾರಾಗಿಲ್ಲ ಎಂದರು.

ಕಾಂಗ್ರೆಸ್‌‍ ಸರ್ಕಾರದ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಬಗ್ಗೆ ಟೀಕಿಸಿದ ಬಿ ವೈ ವಿಜಯೇಂದ್ರ, ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌‍ ಪಕ್ಷವು ಸಾಕಷ್ಟು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ, ಈಗ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿಲ್ಲ ಮತ್ತು ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

ಗೃಹಲಕ್ಷಿ ಯೋಜನೆಯನ್ನು 4-5 ತಿಂಗಳುಗಳ ಕಾಲ ತಡೆಹಿಡಿದು, ಚುನಾವಣೆ ಬಂದಾಗ ಚುನಾವಣಾ ಲಕ್ಷಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ, ಗ್ಯಾರಂಟಿಗಳಿಂದ ಉಂಟಾದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಲಕ್ಷಾಂತರ ಫಲಾನುಭವಿಗಳನ್ನು ಕಡಿತಗೊಳಿಸುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಟೀಕಿಸಿದರು. ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಈ ಭಾಗದ ರೈತರು ಜೂ.22ರಂದು ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.

RELATED ARTICLES

Latest News