Homeರಾಷ್ಟ್ರೀಯವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕ, ಹೋಟೆಲ್‌-ರೆಸ್ಟೋರೆಂಟ್‌ ಉದ್ಯಮಕ್ಕೆ ಮತ್ತಷ್ಟು ಹೊರೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕ, ಹೋಟೆಲ್‌-ರೆಸ್ಟೋರೆಂಟ್‌ ಉದ್ಯಮಕ್ಕೆ ಮತ್ತಷ್ಟು ಹೊರೆ

ನವದೆಹಲಿ, ಅ. 1- ಹಬ್ಬದ ಋತು ಆರಂಭವಾಗುತ್ತಿರುವ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದ್ದು, ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ಧಾಬಾಗಳು, ಬೇಕರಿಗಳು ಹಾಗೂ ಇತರ ಆಹಾರ ವಲಯದ ವಾಣಿಜ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್‌ 1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರದಂತೆ, 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರಮುಖ ನಗರಗಳಲ್ಲಿ ₹60ಕ್ಕೂ ಹೆಚ್ಚು ಏರಿಕೆಯಾಗಿದೆ.

ಆದಾಗ್ಯೂ, ಗೃಹಬಳಕೆಯ ಎಲ್‌ಪಿಜಿ (14.2 ಕೆ.ಜಿ.) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ. ಇದು ಹಬ್ಬದ ಸಮಯದಲ್ಲಿ ಸಾಮಾನ್ಯ ಕುಟುಂಬಗಳಿಗೆ ನಿರಾಳತೆ ನೀಡಿದೆ.ದೇಶದಲ್ಲೇ ಅತಿ ಹೆಚ್ಚು ಏರಿಕೆ ಕಂಡ ನಗರ ಪಾಟ್ನಾ. ಇಲ್ಲಿ ವಾಣಿಜ್ಯ ಸಿಲಿಂಡರ್‌ ದರ ₹71.50 ಏರಿಕೆಯಾಗಿದ್ದು, ಹೊಸ ದರ ₹3,100.50ಕ್ಕೆ ತಲುಪಿದೆ. ಹಿಂದಿನ ದರ ₹3,029 ಆಗಿತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ಗೆ ₹62.50 ಹೆಚ್ಚಳವಾಗಿದ್ದು, ಪ್ರಸ್ತುತ ದರ ₹2,810 ಆಗಿದೆ. ಸೆಪ್ಟೆಂಬರ್‌ನಲ್ಲಿಯೂ ದೆಹಲಿಯಲ್ಲಿ ₹9.50 ಹೆಚ್ಚಿಸಲಾಗಿತ್ತು.ವಾಣಿಜ್ಯ ನಗರಿ ಮುಂಬೈನಲ್ಲಿ ₹63 ಹೆಚ್ಚಳವಾಗಿದ್ದು, ಪ್ರಸ್ತುತ ದರ ₹2,764 ಆಗಿದೆ.

ಚೆನ್ನೈನಲ್ಲಿ ಬೆಲೆ ₹2,983ಕ್ಕೆ ಏರಿಕೆಯಾಗಿದ್ದು, ₹66.50 ಹೆಚ್ಚಳವಾಗಿದೆ. ಅಹಮದಾಬಾದ್‌ನಲ್ಲಿ ₹2,831.50, ಕನ್ಯಾಕುಮಾರಿಯಲ್ಲಿ ₹3,046 ಹಾಗೂ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ₹3,073.50ಕ್ಕೆ ವಾಣಿಜ್ಯ ಸಿಲಿಂಡರ್‌ ದರ ತಲುಪಿದೆ.ಸಾಮಾನ್ಯವಾಗಿ ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ಧಾಬಾಗಳು, ಬೇಕರಿಗಳು ಹಾಗೂ ರಸ್ತೆಬದಿಯ ತಿನಿಸು ಕೇಂದ್ರಗಳಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರ ಹರಿವು ಹೆಚ್ಚಾಗುವ ನಿರೀಕ್ಷೆಯಲ್ಲಿದ್ದ ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿಗಳಿಗೆ ಈ ಬೆಲೆ ಏರಿಕೆ ಹೆಚ್ಚುವರಿ ಹೊರೆ ತಂದಿದೆ.ಆಹಾರ ಪದಾರ್ಥಗಳ ತಯಾರಿಕಾ ವೆಚ್ಚ ಹೆಚ್ಚಾಗುವುದರಿಂದ ಮುಂದಿನ ದಿನಗಳಲ್ಲಿ ಹೊರಗಿನ ಆಹಾರ ಪದಾರ್ಥಗಳ ದರವೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಮುಖ ನಗರಗಳ ವಾಣಿಜ್ಯ ಎಲ್‌ಪಿಜಿ ದರ:
*ದೆಹಲಿ: ₹2,810
*ಮುಂಬೈ: ₹2,764
*ಚೆನ್ನೈ: ₹2,983
*ಪಾಟ್ನಾ: ₹3,100.50
*ಲಕ್ನೋ: ₹2,923.50

RELATED ARTICLES
spot_img

Latest News