Saturday, April 18, 2026
Homeರಾಷ್ಟ್ರೀಯವಿಕಸಿತ ಭಾರತ ನಿರ್ಮಾಣಕ್ಕೆ ಬದ್ಧ : ಸಾಮೂಹಿಕ ಪ್ರಯತ್ನದಿಂದ ಪ್ರಗತಿ

ವಿಕಸಿತ ಭಾರತ ನಿರ್ಮಾಣಕ್ಕೆ ಬದ್ಧ : ಸಾಮೂಹಿಕ ಪ್ರಯತ್ನದಿಂದ ಪ್ರಗತಿ

Committed to building a developed India: Progress through collective efforts

ನವದೆಹಲಿ,ಏ.6- ವಿಕಸಿತ ಭಾರತ ನಿರ್ಮಿಸಲು ಬಿಜೆಪಿ ಬದ್ಧವಾಗಿದೆ. ನಮ ಸಾಮೂಹಿಕ ಸಂಕಲ್ಪವು ಈ ಉದ್ದೇಶವನ್ನು ಮತ್ತಷ್ಟು ಮುನ್ನಡೆಸಲಿ ಮತ್ತು ಭಾರತವನ್ನು ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶಿಸಿದ್ದಾರೆ.

ಪಕ್ಷದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಕನ್ನಡದಲ್ಲೇ ದೇಶಾದ್ಯಂತದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಪೋಸ್ಟ್‌ ಮಾಡಿರುವ ಅವರು, ಬಿಜೆಪಿಯು ಜನಕಲ್ಯಾಣವನ್ನು ತನ್ನ ದೃಷ್ಟಿಕೋನದ ಮೂಲದಲ್ಲಿ ಇರಿಸುವ ಪಕ್ಷವಾಗಿದೆ. ಇದು ಕೇಂದ್ರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ನಮ ಕೆಲಸದಲ್ಲಿ ಪ್ರತಿಫಲಿಸುತ್ತದೆ ಎಂದಿದ್ದಾರೆ.

ಭಾರತ ಮೊದಲು ತತ್ವಕ್ಕೆ ಯಾವಾಗಲೂ ಬದ್ಧವಾಗಿರುವ ನಮ ಪಕ್ಷವು ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ನಮ ಕಾರ್ಯಕರ್ತರಾದವರು ತಮ ನಿಸ್ವಾರ್ಥ ಸೇವೆ, ಅಚಲ ಸಮರ್ಪಣೆ ಮತ್ತು ಉತ್ತಮ ಆಡಳಿತದ ಬಗ್ಗೆ ಆಳವಾದ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ.

ನಮ ಆದರ್ಶಗಳು ಮತ್ತು ಕೆಲಸಗಳೊಂದಿಗೆ ಗರಿಷ್ಠ ಸಂಖ್ಯೆಯ ಜನರನ್ನು ಸಂಪರ್ಕಿಸಲು ಅವರು ತಳಮಟ್ಟದಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಕಳೆದ ಹಲವಾರು ದಶಕಗಳಲ್ಲಿ ಪಕ್ಷದ ಬೆಳವಣಿಗೆಯನ್ನು ರೂಪಿಸಿದ ಸಮರ್ಪಣೆ, ತ್ಯಾಗ ಮತ್ತು ಪರಿಶ್ರಮದಿಂದ ಅಸಂಖ್ಯಾತ ಕಾರ್ಯಕರ್ತರಿಗೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Latest News