ಬೆಂಗಳೂರು,ಏ.18- ತರಬೇತಿ ವೇಳೆ ಪ್ಯಾರಾಚೂಟ್ನಿಂದ ಇಳಿಯುತ್ತಿದ್ದ ಸೈನಿಕರೊಬ್ಬರು 50 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಈರಾಪುರ ಬಳಿ ನಡೆದಿದೆ.
ಈ ಸ್ಥಳದಲ್ಲಿ ಹಲವಾರು ಸೈನಿಕರಿಗೆ ಪ್ಯಾರಾಚೂಚ್ ತರಬೇತಿಗಾಗಿ ಕರೆದುಕೊಂಡು ಬರಲಾಗಿತ್ತು.ಏರ್ಫೋರ್ಸ್ ಹೆಲಿಕಾಫ್ಟರ್ನಿಂದ ಪ್ಯಾರಾಚೂಟ್ ಅಳವಡಿಸಿಕೊಂಡು ಕೆಳಗೆ ಜಿಗಿಯುವ ತರಬೇತಿ ನಡೆಯುತ್ತಿತ್ತು.
ಆ ಸಂದರ್ಭದಲ್ಲಿ ಸೈನಿಕರೊಬ್ಬರು ಪ್ಯಾರಾಚೂಟ್ನಿಂದ ಜಿಗಿಯುವ ವೇಳೆ ಅವಘಡ ಉಂಟಾಗಿ 50 ಅಡಿ ಎತ್ತರದಿಂದ ಏಕಾಏಕಿ ನೆಲಕ್ಕೆ ಅಪ್ಪಳಿಸಿದ್ದರಿಂದ ಕಾಲಿನ ಮೂಳೆ ಮುರಿದಿದೆ.
ತಕ್ಷಣ ಸೇನೆಯವರೇ ಅವರನ್ನು ಬಳ್ಳಾರಿಯಿಂದ ಏರ್ಲಿಫ್್ಟ ಮೂಲಕ ನಗರದ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
