Saturday, April 18, 2026
Homeರಾಜ್ಯಗ್ರೇಟರ್‌ ಬೆಂಗಳೂರು ಪಂಚ ಪಾಲಿಕೆಗಳಲ್ಲಿ 89 ಲಕ್ಷ ಮತದಾರರು

ಗ್ರೇಟರ್‌ ಬೆಂಗಳೂರು ಪಂಚ ಪಾಲಿಕೆಗಳಲ್ಲಿ 89 ಲಕ್ಷ ಮತದಾರರು

Greater Bengaluru has 89 lakh voters in five municipal corporations

ಬೆಂಗಳೂರು, ಏ. 18 – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ ವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಇಂದಿಲ್ಲಿ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಚುನಾ ವಣೆಗೆ ಸಂಬಂಧಿಸಿದಂತೆ ಇಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 9 ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಮಾರ್ಪಾಡುಗಳು ಮಾಡಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡಗಳು ರಚನೆಯಾಗಿದೆ.

ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ 45,71,169 ಪುರುಷರು, 43,22,557 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,95,361 ಮತದಾರರು ಇದ್ದು, 8,023 ಮತಟ್ಟೆಗಳು ಬರಲಿವೆ ಎಂದು ವಿವರಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಒಟು 369 ವಾರ್ಡ್‌ ಗಳ ಪೈಕಿ ಬೆಂಗಳೂರು ದಕ್ಷಿಣ ನಗರಪಾಲಿಕೆಯ ವಾರ್ಡ್‌ ಸಂಖ್ಯೆ 51-ಸುಬ್ರಮಣ್ಯ ಪುರ ಅತಿ ಹೆಚ್ಚು 53,660 ಮತದಾರರನ್ನು ಹೊಂದಿರುತ್ತದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 24-ವಿಜ್ಞಾನನಗರ ದಲ್ಲಿ ಅತಿ ಕಡಿಮೆ 12,897 ಮತದಾರರನ್ನು ಹೊಂದಿರುತ್ತದೆ ಎಂದರು. ಅಂತಿಮ ಮತದಾರರ ಪಟ್ಟಿಯಲ್ಲಿ 2833 ಮತದಾರರು ಹೆಚ್ಚಾಗಿದ್ದಾರೆ.

ವೆಬ್‌ ಸೈಟ್‌ ನಲ್ಲಿ ಮತದಾರರ ಪಟ್ಟಿ:ಮತದಾರರು ವಾರ್ಡವಾರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಆನ್ಲೈನ್‌ ನಲ್ಲಿ ಎಪಿಕ್‌ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಲು ವ್ಯವಸ್ಥೆಯನ್ನು ಕಲ್ವಿಸುವ ನಿಟ್ಟಿನಲ್ಲಿ ವಾರ್ಡ್‌ ವಾರು ಅಂತಿಮ ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಹಾಕಲಾಗಿದೆ.

ಪಿ.ಡಿ.ಎಫ್‌ ಆವೃತ್ತಿಯನ್ನು ಅಪ್ಲೋಡ್‌ ಮಾಡಲಾಗುವುದು. ಸಾರ್ವಜನಿಕರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದಾಗಿದೆ.

ನಗರ ಪಾಲಿಕೆವಾರು ಮತದಾರರ ಸಹಾಯವಾಣಿ:ಮತದಾರರ ಪಟ್ಟಿಗಳ ಪರಿಷ್ಕರಣೆಯ ವೇಳಾಪಟ್ಟಿಯ ಕುರಿತು ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತಿದೆ. ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳ ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ:

ಬೆಂಗಳೂರು ಕೇಂದ್ರ : 080-229758032. ಬೆಂಗಳೂರು ಉತ್ತರ : 080-229759363. ಬೆಂಗಳೂರು ದಕ್ಷಿಣ : 94806857044. ಬೆಂಗಳೂರು ಪೂರ್ವ : 94806857065. ಬೆಂಗಳೂರು ಪಶ್ಚಿಮ : 9480685703ಬೂತ್‌ ಲೆವಲ್‌ ಏಜೆಂಟ್‌ () ನೇಮಕ:ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಾರ್ಡಿನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್‌ ಲೆವಲ್‌ ಏಜೆಂಟ್‌ ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಎಲ್ಲಾ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಲು ಕೋರಲಾಗಿದೆ.

    ಪಟ್ಟಿಗಳಲ್ಲಿ ಹೆಸರನ್ನು ಸೇರಿಸಲು ಅವಕಾಶ:ಒಂದು ವೇಳೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿದ್ದಲ್ಲಿ ಪೂರಕ ಪಟ್ಟಿಗಳಲ್ಲಿ ಹೆಸರನ್ನು ಸೇರಿಸಿಕೂಳ್ಳಬಹುದಾಗಿರುತ್ತದೆ. ಎಲ್ಲಾ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಹಾಗೂ ದೋಷ ರಹಿತ ಮತದಾರರಪಟ್ಟಿಯನ್ನು ತಯಾರಿಸಲು ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

    ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಅಪರ ಆಯುಕ್ತರು, ಸಹಾಯಕ ಆಯುಕ್ತರಾದ ಶ್ರೀನಿವಾಸ್‌‍ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    RELATED ARTICLES

    Latest News