ಕೋಲ್ಕತ್ತಾ, ಏ.18- ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಅಧಿಕಾರಿಗಳು ರಾಜಾಬಜಾರ್ ಸೈನ್ಸ್ ಕಾಲೇಜ್ ಸಮೀಪ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಗುಂಡುಗಳನ್ನು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಸಂದೇಹಾಸ್ಪದವಾಗಿ ಚೀಲವೊಂದನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯನ್ನು ಬಸ್ ನಿಲ್ದಾಣದ ಬಳಿ ತಡೆದ ಎಸ್‌ಟಿಎಫ್ ಅಧಿಕಾರಿಗಳು, ಅವನ ಬಳಿಯಿಂದ ಆರು ಏಕಗೋಳಿ ಬಂದೂಕುಗಳು ಮತ್ತು 14 ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಶಸಾ್ತ್ರಸ್ತ್ರಗಳನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಮತ್ತು ಯಾರಿಗೆ ನೀಡಲು ಉದ್ದೇಶಿಸಲಾಗಿತ್ತು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.ರಾಜ್ಯದಲ್ಲಿ ಚುನಾವಣೆಯ ಹಿನ್ನೆಲೆ ಪೊಲೀಸರು ವಿವಿಧ ಕಡೆ ರಸ್ತೆ ತಡೆಗೋಡೆಗಳನ್ನು ನಿರ್ಮಿಸಿ ವಾಹನಗಳ ತಪಾಸಣೆ ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ, ಕೋಲ್ಕತ್ತಾ ಹಾಗೂ ಸಮೀಪದ ಔರಾ ಪ್ರದೇಶಗಳಲ್ಲಿ ಬೇರೆ ಬೇರೆ ಕಾರ್ಯಾಚರಣೆಗಳಲ್ಲಿ ಅಕ್ರಮ ಹಣದ ದೊಡ್ಡ ಮೊತ್ತಗಳನ್ನು ಜಪ್ತಿ ಮಾಡಲಾಗಿದೆ.
ಶುಕ್ರವಾರ, ಕೋಲ್ಕತ್ತಾ ಪೊಲೀಸ್ ದಕ್ಷಿಣ ಪೂರ್ವ ವಿಭಾಗವು ಬಳ್ಳೀಗಂಜ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ವೇಳೆ ಸುಮಾರು 25 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ.
ಇದಕ್ಕೂ ಮೊದಲು, ರೈಲ್ವೆ ರಕ್ಷಣಾಪಡೆ ಅಧಿಕಾರಿಗಳು ಹೌರಾ ನಿಲ್ದಾಣದ ಸಮೀಪ 72 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು. ಈ ಕಾರ್ಯಾಚರಣೆ ಹೌರಾ ವಿಭಾಗದ ಬನಾರಸ್ ಸೇತುವೆ ಸಮೀಪದ ರೈಲು ಯಾರ್ಡ್ ಪ್ರದೇಶದಲ್ಲಿ ನಡೆದಿತ್ತು.
ಚುನಾವಣೆಗೆ ಮುನ್ನ ಅಕ್ರಮ ಶಸ್ತ್ರಾಸ್ತ್ರ ಹಾಗೂ ಹಣದ ಸಾಗಣೆಯನ್ನು ತಡೆಯಲು ಸಂವೇದನಾಶೀಲ ಪ್ರದೇಶಗಳಲ್ಲಿ ನಿಗಾ ಮತ್ತು ತಪಾಸಣೆ ಮತ್ತಷ್ಟು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
