Homeರಾಷ್ಟ್ರೀಯಮುಂಬೈ ವಿಮಾನ ನಿಲ್ದಾಣದಲ್ಲಿ 4 ಕೆಜಿ ಚಿನ್ನ ವಶ, ಮಹಿಳೆ ಬಂಧನ

ಮುಂಬೈ ವಿಮಾನ ನಿಲ್ದಾಣದಲ್ಲಿ 4 ಕೆಜಿ ಚಿನ್ನ ವಶ, ಮಹಿಳೆ ಬಂಧನ

DRI Seizes Rs 6 Crore Worth of Gold at Mumbai Airport, Woman Arrested

ಮುಂಬೈ,ಜು.4-ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 6 ಕೋಟಿ ಮೌಲ್ಯದ 4 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮಹಿಳಾ ಪ್ರಯಾಣಿಕೆಯನ್ನು ಬಂಧಿಸಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಇತ್ತೀಚೆಗೆ ದುಬೈನಿಂದ ಆಗಮಿಸಿದ್ದ ಮಹಿಳಾ ಪ್ರಯಾಣಿಕೆಯನ್ನು ತಡೆದು ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ಆಕೆಯ ಪ್ಯಾಂಟ್‌ನೊಳಗೆ ಅಡಗಿಸಿಡಲಾಗಿದ್ದ ವಿದೇಶಿ ಗುರುತು ಹೊಂದಿರುವ ತಲಾ ಒಂದು ಕೆಜಿ ತೂಕದ ನಾಲ್ಕು ಚಿನ್ನದ ಗಟ್ಟಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾದ 4 ಕೆಜಿ ಚಿನ್ನದ ಮೌಲ್ಯದೇಶೀಯ ಮಾರುಕಟ್ಟೆಯಲ್ಲಿ ಸುಮಾರು 6 ಕೋಟಿ ಎಂದು ಅಂದಾಜಿಸಲಾಗಿದೆ.ಮಹಿಳೆಯನ್ನು ಕಸ್ಟಮ್ಸೌಕಾಯ್ದೆಯಡಿ ಬಂಧಿಸಲಾಗಿದ್ದು, ಚಿನ್ನದ ಮೂಲ ಹಾಗೂ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Latest News