Thursday, April 16, 2026
Homeರಾಷ್ಟ್ರೀಯತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭೂಕಂಪನ

ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭೂಕಂಪನ

Earthquake jolts several parts of Tamil Nadu

ಮಧುರೈ, ಜ. 30 (ಪಿಟಿಐ) ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ. ಇಲ್ಲಿನ ವಿರುಧುನಗರ, ಶ್ರೀವಿಲ್ಲಿಪುತ್ತೂರು ಮತ್ತು ನೆರೆಯ ಪ್ರದೇಶಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪಗಳ ಮೇಲ್ವಿಚಾರಣೆ ನಡೆಸುವ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಯೊಬ್ಬರು, ವಿರುಧುನಗರ ಮತ್ತು ಹತ್ತಿರದ ಸ್ಥಳಗಳಲ್ಲಿ ರಾತ್ರಿ 9.06 ರ ಸುಮಾರಿಗೆ ಸೌಮ್ಯ ಕಂಪನ ಸಂಭವಿಸಿದೆ ಎಂದು ಹೇಳಿದರು.

ತಿರುಚಿರಾಪಳ್ಳಿಯಿಂದ ನೈಋತ್ಯಕ್ಕೆ 185 ಕಿ.ಮೀ ದೂರದಲ್ಲಿ, ಕೊಚ್ಚಿಯಿಂದ ಆಗ್ನೇಯಕ್ಕೆ 167 ಕಿ.ಮೀ ದೂರದಲ್ಲಿ ರಾತ್ರಿ 9.06 ರ ಸುಮಾರಿಗೆ 10 ಕಿ.ಮೀ ಆಳದಲ್ಲಿ 3 ತೀವ್ರತೆಯ ಲಘು ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ನವೀಕರಣ ತಿಳಿಸಿದೆ.
ಭೂಕಂಪದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ಮುಖ್ಯ ರಸ್ತೆಗೆ ಜಮಾಯಿಸಿದರು.ಈ ಮಧ್ಯೆ, ಸಾಮಾಜಿಕ ಮಾಧ್ಯಮವು ನಿವಾಸಿಗಳು ತಮ್ಮ ಅನುಭವವನ್ನು ಪೋಸ್ಟ್‌ ಮಾಡುವುದರಿಂದ ತುಂಬಿ ತುಳುಕುತ್ತಿತ್ತು.

ಹೌದು, ಕೆಲವು ಸೆಕೆಂಡುಗಳ ಕಾಲ ಮಾತ್ರ ನಿರ್ದಿಷ್ಟ ಕಂಪನವನ್ನು ಅನುಭವಿಸಿದೆ ಎಂದು ನಿವಾಸಿ ಎನ್‌ ಯೋಗರಾಜ್‌ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.ಇನ್ನೊಬ್ಬ ನಿವಾಸಿ ಎನ್‌ ಕಿಶೋರ್‌ ಕುಮಾರ್‌ ಭೂಕಂಪದ ನಂತರ ತನಗೂ ಕಂಪನಗಳ ಅನುಭವವಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

RELATED ARTICLES

Latest News