Homeರಾಷ್ಟ್ರೀಯದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

Elderly woman dies after saree catches fire at Thane temple

ಥಾಣೆ, ಫೆ, 17 (ಪಿಟಿಐ)ದೇವರ ದರ್ಶನಕ್ಕೆ ಹೋಗಿದ್ದ ವೃದ್ಧೆಯೊಬ್ಬರ ಸೀರೆಗೆ ಆಕಸಿಕ ಬೆಂಕಿ ತಗುಲಿದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸೀರೆಗೆ ಬೆಂಕಿ ತಗುಲಿ 73 ವರ್ಷದ ಮಹಿಳೆಯೊಬ್ಬರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬರ್‌ನಾಥ್‌ನ ಬುವಾಪಾಡ ನಿವಾಸಿಯಾಗಿರುವ ಬಿಂದೇಶ್ವರಿ ಕುಶಾವಾ ಶಿವರಾತ್ರಿ ಹಬ್ಬದ ದಿನ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು.ಆಕಸ್ಮಿಕವಾಗಿ ಆಕೆಯ ಸೀರೆ ದೇವಸ್ಥಾನದಲ್ಲಿ ಬೆಳಗಿದ ದಿಯಾ (ಸಾಂಪ್ರದಾಯಿಕ ಎಣ್ಣೆ ದೀಪ) ಸ್ಪರ್ಶಿಸಿ ಬೆಂಕಿಯಲ್ಲಿ ಸುಟ್ಟು ಕರಕಲಾದರು ಎಂದು ಅಂಬರ್‌ನಾಥ್‌‍ ಪಶ್ಚಿಮ ಪೊಲೀಸ್‌‍ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣ ಅವರನ್ನು ಉಲ್ಹಾಸ್‌‍ನಗರ ಕೇಂದ್ರ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ನಿನ್ನೆ ನಿಧನರಾಗಿದ್ದಾರೆ ಎಂದು ಅವರು ಹೇಳಿದರು.ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News