ವಡೋದರ,ಜೂ.14- ಗೆಳೆಯ ಆತಹತ್ಯೆ ಮಾಡಿಕೊಂಡ ಕಾರಣಕ್ಕೆ ಆತನ ಇಬ್ಬರು ಸ್ನೇಹಿತರೂ ಕೂಡ ಆತಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರವಿಶಂಕರ್ಪ್ರಸಾದ್ ಹಾಗೂ ದಿನೇಶ್ ಪ್ರಸಾದ್ ಆತಹತ್ಯೆ ಮಾಡಿಕೊಂಡಿರುವ ಸ್ನೇಹಿತರು ಬಿಹಾರದಲ್ಲಿ ಸ್ನೇಹಿತನೊಬ್ಬ ಆತಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಕ್ಕೆ ನೊಂದಿದ್ದ ರವಿಶಂಕರ್ ಪ್ರಸಾದ್ ರೈಲಿನ ಮುಂದೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾನೆ.
ಗುಜರಾತ್ನ ವಡೋದರಾದಲ್ಲಿ ರೈಲಿನ ಮುಂದೆ ಹಾರುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ನಾನು ಶೀಘ್ರದಲ್ಲೇ ನಿಮ ಬಳಿಗೆ ಬರುತ್ತೇನೆ ಎಂದು ಪೋಸ್ಟ್ ಹಾಕಿದ್ದಾನೆ. ಆತನ ಸ್ನೇಹಿತ ರವಿಶಂಕರ್ ಪ್ರಸಾದ್ ಈ ನಷ್ಟವನ್ನು ಸಹಿಸಲಾರದೆ, ನಾನು ಶೀಘ್ರದಲ್ಲೇ ನಿಮ ಬಳಿಗೆ ಬರುತ್ತೇನೆ ಎಂದು ಗುಜರಾತ್ನ ವಡೋದರಾದಲ್ಲಿ ರೈಲಿನ ಮುಂದೆ ಹಾರುವ ಮೊದಲು ತಮ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಆರಂಭದಲ್ಲಿ ಅವರ ಸಾವು ಅಪಘಾತ ಎಂದು ಭಾವಿಸಲಾಗಿತ್ತು. ಆದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ನೋಡಿದಾಗ ಅವರ ಸಾವು ವಾಸ್ತವವಾಗಿ ಉದ್ದೇಶಪೂರ್ವಕವಾಗೇ ಮಾಡಿಕೊಂಡಿರುವ ಕೃತ್ಯ ಎಂದು ಬಹಿರಂಗಪಟ್ಟಿದೆ.
ಈ ಎರಡು ಸಾವುಗಳು ಅವರ ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಆಘಾತಗೊಳಿಸಿತ್ತು. ಇದರ ನಡುವೆಯೇ ರವಿ ಅವರ ಆಪ್ತ ಸ್ನೇಹಿತನಾಗಿದ್ದ ದಿನೇಶ್ಪ್ರಸಾದ್ ಕೂಡ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಶರಣಾಗಿದ್ದಾನೆ.
ರವಿ ಮತ್ತು ದಿನೇಶ್ ವಡೋದರಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಅವರ ಹಠಾತ್ ಆತಹತ್ಯೆಗೆ ಮುನ್ನ ಅವರು ಯಾವುದೇ ದುಃಖದ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.
