Homeರಾಷ್ಟ್ರೀಯಪೆಟ್ರೋಲ್‌ ಬಂಕ್‌ಗಳಲ್ಲಿ ಕೈಗಾರಿಕೆಗಳಿಗೆ ಇಂಧನ ಮಾರಾಟ ನಿರ್ಬಂಧ

ಪೆಟ್ರೋಲ್‌ ಬಂಕ್‌ಗಳಲ್ಲಿ ಕೈಗಾರಿಕೆಗಳಿಗೆ ಇಂಧನ ಮಾರಾಟ ನಿರ್ಬಂಧ

Govt bars industries from buying petrol, diesel at pumps

ನವದೆಹಲಿ, ಜೂ.12-ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಪೆಟ್ರೋಲ್‌ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಖರೀದಿಸುವುದಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ.

ಅವರು ತಮ ಇಂಧನ ಅಗತ್ಯವನ್ನು ಬಲ್ಕ್ ಮಾರಾಟ ಕೇಂದ್ರಗಳಿಂದಲೇ ಪೂರೈಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ನಿರ್ಬಂಧವು ಆರಂಭಿಕವಾಗಿ 90 ದಿನಗಳವರೆಗೆ ಜಾರಿಯಲ್ಲಿರಲಿದ್ದು ಅಗತ್ಯವಿದ್ದರೆ ಹೊಸ ಆದೇಶದ ಮೂಲಕ ಇದರ ಅವಧಿಯನ್ನು ವಿಸ್ತರಿಸಬಹುದಾಗಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಸಾಮಾನ್ಯ ಗ್ರಾಹಕರಿಗೆ ಮಾರಾಟವಾಗುವ ದರ ಮತ್ತು ಬಲ್‌್ಕ ಮಾರಾಟ ದರಗಳ ನಡುವಿನ ಭಾರೀ ವ್ಯತ್ಯಾಸದಿಂದಾಗಿ, ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಡೀಸೆಲ್‌ಗೆ ಅಸಹಜ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 95.20 ಇದ್ದರೆ, ಬಲ್‌್ಕ ಗ್ರಾಹಕರಿಗೆ ಅದೇ ಡೀಸೆಲ್‌ 134.50 ಪ್ರತಿ ಲೀಟರ್‌ಗೆಮಾರಾಟವಾಗುತ್ತಿದೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಬಳಿಕ ಜಾಗತಿಕ ಕಚ್ಚಾತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಗ್ರಾಹಕರನ್ನು ರಕ್ಷಿಸಲು ಸರ್ಕಾರಿ ತೈಲ ಕಂಪನಿಗಳು ಚಿಲ್ಲರೆ ದರಗಳನ್ನು ನಿಯಂತ್ರಿಸಿದ್ದವು. ಆದರೆ ವಿದ್ಯುತ್‌ ಉತ್ಪಾದನೆ, ಟೆಲಿಕಾಂ ಟವರ್‌ಗಳು ಹಾಗೂ ಕೈಗಾರಿಕಾ ಬಳಕೆಗೆ ಇಂಧನ ಬಳಸುವ ಬಲ್‌್ಕ ಗ್ರಾಹಕರಿಗೆ ಮಾರುಕಟ್ಟೆ ಆಧಾರಿತ ದರವೇ ಅನ್ವಯವಾಗುತ್ತಿತ್ತು.
ಈ ದರ ವ್ಯತ್ಯಾಸದಿಂದ ಖಾಸಗಿ ತೈಲ ಕಂಪನಿಗಳಿಗಿಂತ ಸರ್ಕಾರಿ ಪೆಟ್ರೋಲ್‌ ಬಂಕ್‌ಗಳಲ್ಲಿ ಮಾರಾಟ ಹೆಚ್ಚಾಗಿದೆ.

ಮೇ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗಳಲ್ಲಿ ಪೆಟ್ರೋಲ್‌ ಮಾರಾಟ ಶೇ.4.8ರಷ್ಟು ಹಾಗೂ ಡೀಸೆಲ್‌ ಮಾರಾಟ ಶೇ.6.4ರಷ್ಟು ಏರಿಕೆಯಾಗಿದೆ.

ಹೊಸ ನಿಯಮ ಏನು ಹೇಳುತ್ತದೆ?
ಜೂನ್‌ 11ರಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮೋಟಾರ್‌ ಸ್ಪಿರಿಟ್‌ ಮತ್ತು ಹೈ ಸ್ಪೀಡ್‌ ಡೀಸೆಲ್‌ (ಚಿಲ್ಲರೆ ಮಾರಾಟ ಕೇಂದ್ರಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇ 2026ಅನ್ನು ಹೊರಡಿಸಿದೆ.
ಈ ಆದೇಶದ ಪ್ರಕಾರ:
*ಕೈಗಾರಿಕಾ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ಪೆಟ್ರೋಲ್‌ ಬಂಕ್‌ಗಳಿಂದ ಇಂಧನ ಖರೀದಿಸಲು ಅವಕಾಶ ಇರುವುದಿಲ್ಲ.
*ಅವರು ತಮ್ಮದೇ ಬಳಕೆಯ ಪಂಪ್‌ಗಳು ಅಥವಾ ಅಧಿಕೃತ ಬಲ್‌್ಕ ಮಾರಾಟ ಕೇಂದ್ರಗಳಿಂದ ಇಂಧನ ಪಡೆಯಬೇಕು.
*ಚಿಲ್ಲರೆ ಪೆಟ್ರೋಲ್‌ ಬಂಕ್‌ಗಳಲ್ಲಿ ಡೀಸೆಲ್‌ ಮಾರಾಟವನ್ನು ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಅಥವಾ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ () ಅನುಮೋದಿತ ಕಂಟೇನರ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
*ಪ್ರತಿ ಗ್ರಾಹಕ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್‌ ಡೀಸೆಲ್‌‍ ಮಾತ್ರ ಖರೀದಿಸಲು ಅವಕಾಶವಿರುತ್ತದೆ.
*ಈ ರೀತಿ ಖರೀದಿಸಿದ ಡೀಸೆಲ್‌ ಅನ್ನು ಮರುಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ಕೈಗಾರಿಕಾ ಬಳಕೆದಾರರು ಪೆಟ್ರೋಲ್‌ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸಿದರೆ, ಸಾಮಾನ್ಯ ಜನರಿಗಾಗಿ ಮೀಸಲಿಟ್ಟಿರುವ ಇಂಧನ ಪೂರೈಕೆ ಬೇರೆಡೆಗೆ ತಿರುಗುವ ಅಪಾಯವಿದ್ದು, ಸ್ಥಳೀಯ ಮಟ್ಟದಲ್ಲಿ ಕೊರತೆ ಉಂಟಾಗಬಹುದು ಎಂದು ಸರ್ಕಾರ ಹೇಳಿದೆ.
ಇಂತಹ ಪರಿಸ್ಥಿತಿ ಸಾಮಾನ್ಯ ನಾಗರಿಕರಿಗೆ ಅಗತ್ಯ ಸೇವೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಇಂಧನದ ಅಕ್ರಮ ಸಂಗ್ರಹ, ಕಾಳಸಂತೆ, ಅನಧಿಕೃತ ಖರೀದಿ ಮತ್ತು ಪೂರೈಕೆ ತಿರುವು ಸೇರಿದಂತೆ ದುಷ್ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಕೇಂದ್ರ ನಿರ್ದೇಶಿಸಿದೆ.

ಈ ಆದೇಶದ ಉಲ್ಲಂಘನೆ ಮಾಡಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.ಸರ್ಕಾರವು ಅಗತ್ಯವೆಂದು ಕಂಡಲ್ಲಿ ಯಾವುದೇ ಗ್ರಾಹಕ, ನಿರ್ದಿಷ್ಟ ವರ್ಗ, ಪ್ರದೇಶ ಅಥವಾ ವಹಿವಾಟುಗಳಿಗೆ ಈ ನಿಯಮಗಳಿಂದ ಸಂಪೂರ್ಣ ಅಥವಾ ಭಾಗಶಃ ವಿನಾಯಿತಿ ನೀಡುವ ಅಧಿಕಾರವನ್ನು ಕಾಯ್ದಿರಿಸಿದೆ.

RELATED ARTICLES

Latest News