ಚೆನ್ನೈ, ಜ.31- ನಾನು ತಮಿಳುನಾಡು ರಾಜಕೀಯದಲ್ಲಿ ಕೇವಲ ಕಿಂಗ್ ಮೇಕರ್ ಆಗಿ ಹೊರ ಹೊಮ್ಮುವುದಿಲ್ಲ ಬದಲಿಗೆ ಸರ್ಕಾರ ರಚಿಸುವಷ್ಟು ಬಹುಮತ ಪಡೆದೇ ತೀರುತ್ತೇನೆ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ಚಿತ್ರ ನಟ ದಳಪತಿ ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕರೂರು ಕಾಲ್ತುಳಿತ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಶ್ವಾಸ ಹೊರ ಹಾಕಿದ್ದಾರೆ.
ಮೊದಲನೆಯದಾಗಿ ಕರೂರ್ ಕಾಲ್ತುಳಿತವು ಆಘಾತಕಾರಿಯಾಗಿತ್ತು ಮತ್ತು ಅದು ಈಗಲೂ ನನ್ನನ್ನು ಕಾಡುತ್ತಿದೆ ಏಕೆಂದರೆ ಅವರು ಎಂದಿಗೂ ಅಂತಹದ್ದೇನನ್ನೂ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.
ಎರಡನೆಯದಾಗಿ ನಾನು ಏನು ಮಾಡಬೇಕೆಂದು ನಿರ್ಧರಿಸುವ ವ್ಯಕ್ತಿ, ತನ್ನ ಗುರಿಯ ಬಗ್ಗೆ ದ್ವಂದ್ವ ಅಥವಾ ಅನಿಶ್ಚಿತತೆ ಹೊಂದಿಲ್ಲ. ನಾನು ಏನು ಅಂದುಕೊಂಡಿದ್ದೇನೋ ಅದನ್ನು ಸಾಧಿಸಿಯೇ ತೀರುತ್ತೇನೆ ಎಂದು ಅವರು ಸವಾಲು ಹಾಕಿದರು.ಜನ ನಾಯಗನ್ ಚಿತ್ರ ಬಿಡುಗಡೆಗೆ ಅನುಮತಿ ಸಿಗದ ಕಾರಣ ತಮ್ಮ ನಿರ್ಮಾಪಕರು ಬಳಲುತ್ತಿರುವ ಬಗ್ಗೆ ತಮಗೆ ಬೇಸರವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ನನ್ನ ರಾಜಕೀಯದ ಮೇಲೆ ಜನನಾಯಗನ್ ಚಿತ್ರ ಪ್ರಭಾವ ಬೀರಬಹುದು ಎಂದು ನಿರೀಕ್ಷಿಸಿದ್ದೆ ಎಂದು ಅವರು ಹೇಳಿದರು. ನಾನು ದೀರ್ಘಾವಧಿಯ ಯೋಜನೆಯನ್ನು ಹೊಂದಿರುವ, ಉಕ್ಕಿನಂತಹ ಮತ್ತು ತುಂಬಾ ಶಾಂತ, ಕಡಿಮೆ ನಿರ್ಣಯವನ್ನು ಹೊಂದಿರುವ ವ್ಯಕ್ತಿ.
ಹೆಚ್ಚಿನ ಜನರು ತಾವು ಒಂದೇ ಸಾಲಿನ ಉತ್ತರಗಳನ್ನು ನೀಡುತ್ತಾರೆ ಎಂದು ವಿಜಯ್ ಹೇಳಿದ್ದಾರೆ. ನಾನು ಬಾಲಿವುಡ್ ಚಿತ್ರನಟ ನಟ ಶಾರುಖ್ ಖಾನ್ ಅವರ ಅಭಿಮಾನಿ ಅವರ ಮಾದರಿಗಳಲ್ಲಿ ಎಂಜಿಆರ್ ಮತ್ತು ಜೆ ಜಯಲಲಿತಾ ಸೇರಿದ್ದಾರೆ.ರಾಜಕೀಯ ರಂಗದಲ್ಲಿ, ವಿಜಯ್ ಅವರು ಕಿಂಗ್‌ಮೇಕರ್ ಎಂದು ಬ್ರಾಂಡ್ ಆಗಲು ಇಷ್ಟಪಡುವುದಿಲ್ಲ ಎಂದುಅವರು ತಿಳಿಸಿದರು. ನಾನು ಗೆಲ್ಲುತ್ತೇನೆ. ನಾನು ಕಿಂಗ್‌ಮೇಕರ್ ಆಗಲು ಏಕೆ ಬಯಸುತ್ತೇನೆ? ಬರುತ್ತಿರುವ ಜನಸಂದಣಿಯನ್ನು ನೀವು ನೋಡಿದ್ದೀರಾ? ಎಂದು ವಿಜಯ್ ಹೇಳಿದರು.
ಕೆಲವರು ಚಿತ್ರರಂಗದಿಂದ ಬಂದು ಕೆಲವೇ ದಿನಗಳಲ್ಲಿ ರಾಜಕೀಯದಿಂದ ದೂರ ಸರಿಯುತ್ತಾರೆ. ಆದರೆ ನಾನು ಹಾಗಲ್ಲ. ಹಲವಾರು ದಶಕಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಈಗ ರಾಜಕೀಯಕ್ಕೆ ಬಂದಿದ್ದೇನೆ ಇಲ್ಲೂ ಸಾಧನೆ ಮಾಡುವವರೆಗೆ ವಿಶ್ರಮಿಸುವುದಿಲ್ಲ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ನಮ ಟಿವಿಕೆ ಪಕ್ಷಕ್ಕೆ ಶಿಳ್ಳೆ ಚಿಹ್ನೆ ನೀಡಿದೆ. ಇದು ನಮಗೆ ಪಾಸಿಟಿವ್ ವೈಬ್‌್ಸ ತಂದುಕೊಟ್ಟಿದೆ. ನಮ ಕಾರ್ಯಕರ್ತರು ಶಿಳ್ಳೆ ಹೊಡೆದು ಕುಣಿಯುವ ದಿನಗಳು ದೂರವಿಲ್ಲ ಎಂದು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
