Homeರಾಷ್ಟ್ರೀಯವಿಶ್ವ ಸಂಸ್ಥೆಯಲ್ಲಿ ಉಗ್ರರ ರಾಷ್ಟ್ರ ಪಾಕಿಸ್ತಾನದ ಕಳಂಕಿತ ಇತಿಹಾಸ ಬಿಚ್ಚಿಟ್ಟ ಭಾರತ

ವಿಶ್ವ ಸಂಸ್ಥೆಯಲ್ಲಿ ಉಗ್ರರ ರಾಷ್ಟ್ರ ಪಾಕಿಸ್ತಾನದ ಕಳಂಕಿತ ಇತಿಹಾಸ ಬಿಚ್ಚಿಟ್ಟ ಭಾರತ

India flags Pakistan’s ‘long tainted record of genocidal acts’ at UN Security Council

ವಿಶ್ವಸಂಸ್ಥೆ, ಮೇ 21- ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಜನಾಂಗಹತ್ಯೆಯ ಕಳಂಕಿತ ಇತಿಹಾಸವನ್ನು ತೀವ್ರವಾಗಿ ಟೀಕಿಸಿದೆ. ತನ್ನ ಆಂತರಿಕ ವೈಫಲ್ಯಗಳನ್ನು ಮರೆಮಾಚಲು ಪಾಕಿಸ್ತಾನ ಹಲವು ದಶಕಗಳಿಂದ ದೇಶದೊಳಗೂ, ಗಡಿಭಾಗದಾಚೆಯೂ ಹಿಂಸಾತಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಭಾರತ ಆರೋಪಿಸಿದೆ.

ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆಯ ಕುರಿತ ವಾರ್ಷಿಕ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಹರೀಶ್‌ ಪರ್ವತನೇನಿ ಅವರು ಜನಾಂಗಹತ್ಯೆಯ ದೀರ್ಘಕಾಲದ ಕಳಂಕಿತ ದಾಖಲೆ ಹೊಂದಿರುವ ಪಾಕಿಸ್ತಾನವು ,ಭಾರತಕ್ಕೆ ಸಂಬಂಧಿಸಿದ ಆಂತರಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು ವಿಪರ್ಯಾಸಎಂದು ಹೇಳಿದ್ದಾರೆ.
ಈ ಚರ್ಚೆಯಲ್ಲಿ ಪಾಕಿಸ್ತಾನ ಪ್ರತಿನಿಧಿಯು ಜಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯ ವಿಷಯವನ್ನೂ ಅವರು ಪ್ರಸ್ತಾಪಿಸಿದರು.ಈ ವರ್ಷದ ಮಾರ್ಚ್‌ನಲ್ಲಿ ರಮಝಾನ್‌ ಪವಿತ್ರ ತಿಂಗಳ ಸಂದರ್ಭದಲ್ಲಿ, ಶಾಂತಿ ಮತ್ತು ಪ್ರಾರ್ಥನೆಯ ಸಮಯದಲ್ಲಿ ಪಾಕಿಸ್ತಾನವು ಕಾಬೂಲ್‌ನ ಓಮಿದ್‌ ವ್ಯಸನ ಚಿಕಿತ್ಸಾಆಸ್ಪತ್ರೆಯ ಮೇಲೆ ಅಮಾನವೀಯ ವೈಮಾನಿಕ ದಾಳಿ ನಡೆಸಿತ್ತು ಎಂಬುದನ್ನು ಜಗತ್ತು ಮರೆತಿಲ್ಲಎಂದು ಅವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ನಿಯೋಗ ವರದಿ ಪ್ರಕಾರ, ಆ ದಾಳಿಯಲ್ಲಿ 269 ನಾಗರಿಕರು ಸಾವನ್ನಪ್ಪಿದ್ದು, 122 ಮಂದಿ ಗಾಯಗೊಂಡಿದ್ದರು ಎಂದು ತಿಳಿಸಲಾಗಿದೆ. ಅದೇ ವೇಳೆ, ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ಕುರಿತು ಉನ್ನತ ತತ್ವಗಳನ್ನು ಮಾತನಾಡುವ ಪಾಕಿಸ್ತಾನವು ನಿರಪರಾಧಿಗಳ ಮೇಲೆ ದಾಳಿ ನಡೆಸುವುದು ಕಪಟತನ ಎಂದು ಭಾರತ ಆರೋಪಿಸಿದೆ.

1971ರಲ್ಲಿ ನಡೆದ ಅಪರೇಷನ್‌ ಸರ್ಚ್‌ಲೈಟ್‌ ಸಂದರ್ಭದಲ್ಲೂ ಪಾಕಿಸ್ತಾನ ಸೇನೆ ನಡೆಸಿದ ಸಾಮೂಹಿಕ ಅತ್ಯಾಚಾರ ಮತ್ತು ಹಿಂಸಾಚಾರವನ್ನು ಟೀಕಿಸಿದೆ. ಇಂತಹ ಅಮಾನವೀಯ ನಡೆಗಳು, ತನ್ನ ವೈಫಲ್ಯಗಳನ್ನು ಮರೆಮಾಚಲು ಪಾಕಿಸ್ತಾನ ಹಲವು ದಶಕಗಳಿಂದ ನಡೆಸುತ್ತಿರುವ ಹಿಂಸಾತ್ಮಕ ಕ್ರಮಗಳ ಪ್ರತಿಬಿಂಬವಾಗಿದೆ. ಜಗತ್ತು ಈಗ ಪಾಕಿಸ್ತಾನದ ಪ್ರಚಾರ ತಂತ್ರವನ್ನು ಗುರುತಿಸಿದೆ ಎಂದು ಅವರು ಹೇಳಿದರು.

RELATED ARTICLES

Latest News