Homeರಾಷ್ಟ್ರೀಯವಿದೇಶಿ ವಿನಿಮಯದಲ್ಲಿ ಸಂಗ್ರಹದಲ್ಲಿ ಭಾರಿ ಏರಿಕೆ

ವಿದೇಶಿ ವಿನಿಮಯದಲ್ಲಿ ಸಂಗ್ರಹದಲ್ಲಿ ಭಾರಿ ಏರಿಕೆ

India Forex Reserve Hits $709 Billion Mark Ahead of Budget 2026

ನವದೆಹಲಿ, ಜ.31- ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಜ. 23ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 709.41 ಬಿಲಿಯನ್‌ ಡಾಲರ್‌ಗಳಿಗೆ ಏರಿಕೆ ಕಂಡು ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ.

ನಿರಂತರ ಕುಸಿತ ಕಾಣುತ್ತಲೇ ಬಂದಿದ್ದ ವಿದೇಶಿ ವಿನಿಮಯ ಸಂಗ್ರಹದಲ್ಲಿ
ಕೇವಲ ಒಂದು ವಾರದಲ್ಲಿ 8 ಬಿಲಿಯನ್‌ ಡಾಲರ್‌ಗಳಷ್ಟು ಏರಿಕೆಯಾಗಿರುವುದು ಸ್ವಾಗತಾರ್ಹವಾಗಿದೆ.

5.6 ಬಿಲಿಯನ್‌ ಡಾಲರ್‌ಗಳಿಗೆ ಸೀಮಿತವಾಗಿದ್ದ ಆರ್‌ಬಿಐನ ಚಿನ್ನದ ಹಿಡುವಳಿಗಳು ಬರೊಬ್ಬರಿ 123 ಬಿಲಿಯನ್‌ ಡಾಲರ್‌ಗಳಿಗೆ ಏರಿಕೆಯೊಂದಿಗೆ ಶೇ.8.5ರಷ್ಟು ಬೆಳವಣಿಗೆ ಕಂಡಿರುವುದರಿಂದ ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಸ್ಥಿರಗೊಂಡಂತಾಗಿದೆ.

ಈ ಬೆಳವಣಿಗೆಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಮುಖ ಮಾಡಿದ್ದು, ಹಣಕಾಸಿನ ಉಬ್ಬರ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವತ್ತ ಆರ್‌ಬಿಐ ಗಮನ ಹರಿಸಬೇಕಿದೆ.

RELATED ARTICLES
spot_img

Latest News