Homeರಾಜ್ಯಬೀದರ್‌ ಜಿಲ್ಲೆಯ ಮೋಳಕೇರಾ ಗ್ರಾಮದ ಬಳಿ ನಿಗೂಢ ಸ್ಫೋಟ, ಆರು ಮಂದಿಗೆ ಗಾಯ

ಬೀದರ್‌ ಜಿಲ್ಲೆಯ ಮೋಳಕೇರಾ ಗ್ರಾಮದ ಬಳಿ ನಿಗೂಢ ಸ್ಫೋಟ, ಆರು ಮಂದಿಗೆ ಗಾಯ

Mysterious explosion near Molakera village in Bidar district, six injured

ಬೆಂಗಳೂರು,ಜ.31-ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದ ರಸ್ತೆ ಬದಿಯ ಕಸದಲ್ಲಿ ಬೆಳಗ್ಗೆ ನಿಗೂಢ ಸ್ಫೋಟಗೊಂಡ ಪರಿಣಾಮ ನಾಲ್ವರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಈ ಪೈಕಿ ಜಬ್ಬಾರ್‌ ಸಾಬ್‌ (65) ಎಂಬುವವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸುಟ್ಟ ಗಾಯಗಳಾಗಿರುವ ನಾಲ್ವರು ವಿದ್ಯಾರ್ಥಿಗಳಿಗೆ ಬ್ರೀಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 8.30 ರ ಸುಮಾರಿನಲ್ಲಿ ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ನಡೆದು ಹೋಗುತ್ತಿದ್ದರು. ರಸ್ತೆ ಪಕ್ಕದಲ್ಲಿದ್ದ ಕಸದ ಗುಡ್ಡೆಗೆ ಜಬ್ಬಾರ್‌ಸಾಬ್‌ ಕಸ ಹಾಕಲು ಹೋದಾಗ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಹಾಗೂ ಇನ್ನಿಬ್ಬರು ಸ್ಥಳೀಯರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಪೇಯಿಂಟ್‌(ರಾಸಾಯನಿಕ ವಸ್ತು) ನಿಂದ ಸ್ಫೋಟ ಸಂಭವಿಸಿರಬಹುದೆಂದು ತಿಳಿದು ಬಂದಿದೆ.ಸ್ಥಳಕ್ಕೆ ಎಫ್‌ಎಸ್‌‍ಎಲ್‌ ಹಾಗೂ ಸೋಕೋ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ತದ ನಂತರವೇ ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗಲಿದೆ.

RELATED ARTICLES
spot_img

Latest News