ಇಂದೋರ್,ಆ.18- ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದು, ತನ್ನ ಇಬ್ಬರು ಮಕ್ಕಳನ್ನು ಕೊಳಕ್ಕೆ ಎಸೆದಿರುವ ಘಟನೆ ಇಲ್ಲಿನ ಇಂದೋರ್ನ ಕನಾಡಿಯಾದ ಝಲಾರಿಯಾ ಗ್ರಾಮದಲ್ಲಿ ರಾತ್ರಿ 12 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಅನಿತಾ ಕೊಲೆಯಾಗಿರುವ ಪತ್ನಿ. ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ಸುನಿಲ್ ಚೌಹಾಣ್, ಕೊಲೆ ಆರೋಪಿ. ಸುನಿಲ್ ತನ್ನ ಪತ್ನಿಯನ್ನು ಮನೆಯ ಹೊರಗಿನ ಪೊದೆಗಳಿಗೆ ಕರೆದೊಯ್ದು, ಕತ್ತು ಹಿಸುಕಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಹೆಂಡತಿಯನ್ನು ಕೊಂದ ನಂತರ ಮನೆಗೆ ಹೋಗಿ ಮಗಳು ಮಾಹಿ(13) ಮತ್ತು ಮಗ ಅಜಯ್(12)ನನ್ನು ಎತ್ತಿಕೊಂಡು ಹತ್ತಿರದ ಕೊಳಕ್ಕೆ ಎಸೆದು ಬಂದಿದ್ದಾನೆ. ಮಗ ಅಜಯ್ ಸತ್ತವನಂತೆ ನಟಿಸಿ ರಾತ್ರಿ ಕತ್ತಲಲ್ಲಿ ತಪ್ಪಿಸಿಕೊಂಡು ತನ್ನ ಜೀವ ಉಳಿಸಿಕೊಂಡು ಘಟನೆಯ ಕುರಿತು ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಕೊಳಕ್ಕೆ ಬಿದ್ದ ನಂತರ, ಅಜಯ್ ಸತ್ತಂತೆ ನಟಿಸಿ, ಅವಕಾಶ ಸಿಕ್ಕಾಗ ತಪ್ಪಿಸಿಕೊಂಡನು. ಅವನು ಗ್ರಾಮಸ್ಥರಿಗೆ ಮಾಹಿತಿ ನೀಡಿದಾಗ, ಅವರು ರಾತ್ರಿ 1 ಗಂಟೆ ಸುಮಾರಿಗೆ ಠಾಣೆಗೆ ಮಾಹಿತಿ ನೀಡಿದ್ದು, ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕತ್ತಲೆಯಿಂದಾಗಿ ರಾತ್ರಿ ವೇಳೆ ಶೋಧ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲ. ಎಸ್ಡಿಆರ್ಎಫ್ ತಂಡವು ಬೆಳಗಿನ ಜಾವ 2:30ರ ಸುಮಾರಿಗೆ ಸ್ಥಳಕ್ಕೆ ತಲುಪಿ ಶೋಧ ಕಾರ್ಯ ಆರಂಭಿಸಿತು. ಮಾಹಿಯ ಮೃತದೇಹವನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆತಹತ್ಯೆಗೆ ಯತ್ನಿಸಿದ್ದನು ಮತ್ತು ರಾತ್ರಿಯಲ್ಲಿ ಪರಾರಿಯಾಗಲು ಸಿದ್ಧತೆ ನಡೆಸುತ್ತಿದ್ದನು. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ.
