ನವದೆಹಲಿ,ಜು.6- ದೆಹಲಿಯ ಸಿವಿಲ್ ಲೈನ್ಸ್ ನಲ್ಲಿರುವ ಅರುಣಾ ಅಸಫ್ ಅಲಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿದ್ದ ಅರಿವಳಿಕೆ ತಜ್ಞ ಡಾ.ಸಿಮರ್ಪ್ರೀತ್ ಸಿಂಗ್ ಆನಂದ್(35) ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಅರಿವಳಿಕೆ ವಿಭಾಗದ ಹಿರಿಯ ನಿವಾಸಿ ವೈದ್ಯರಾಗಿದ್ದ ಸಿಮರ್ಪ್ರೀತ್ ಸಿಂಗ್ ಮೂಲತಃ ಪಂಜಾಬ್‌ನ ಲುಧಿಯಾನದವರು.
ಜು.4ರಂದು ರಾತ್ರಿ ಪಾಳಿಯಲ್ಲಿದ್ದ ಇವರು ಮರುದಿನ ಬೆಳಿಗ್ಗೆಯೂ ಕೊಠಡಿಯಿಂದ ಹೊರಬಂದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ 3 ಪುಟಗಳ ಆತಹತ್ಯೆಪತ್ರ(ಡೆತ್‌ನೋಟ್) ದೊರೆತಿದೆ. ಪತ್ರದಲ್ಲಿ ಆಸ್ಪತ್ರೆಯ ಸಹೋದ್ಯೋಗಿಯೊಬ್ಬರೊಂದಿಗಿನ ತಮ ಪ್ರೇಮ ಸಂಬಂಧ ಮತ್ತು ಅದಕ್ಕೆ ಉಭಯ ಕುಟುಂಬಗಳ ವಿರೋಧವಿದ್ದುದನ್ನು ಪ್ರಸ್ತಾಪಿಸಿ, ವೈಯಕ್ತಿಕ ಕಾರಣಗಳಿಂದಾಗಿ ಈ ತೀವ್ರ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದಿದ್ದಾರೆ.
ಪೊಲೀಸರು ಘಟನಾ ಸ್ಥಳದಿಂದ ಕ್ಯಾನುಲಾ, ಸಿರಿಂಜ್ ಮತ್ತು ಔಷಧ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯರು ಅರಿವಳಿಕೆ ಔಷಧವನ್ನು ಮಿತಿಮೀರಿ ಚುಚ್ಚಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ರೋಹಿಣಿಯ ಜಿಲ್ಲಾ ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಘಟನಾ ಸ್ಥಳದಿಂದ ಒಂದು ಸಿರಿಂಜ್, ಖಾಲಿ ಔಷಧಿ ಬಾಟಲಿಗಳು, ಕಪ್ಪು ಚೀಲ, ಮೂರು ಪುಟಗಳ ಆತಹತ್ಯೆ ಟಿಪ್ಪಣಿ ಮತ್ತು ವೈಯಕ್ತಿಕ ಡೈರಿಯನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಆತಹತ್ಯೆ ಪತ್ರದಲ್ಲಿ ಸಂಬಂಧ, ಕುಟುಂಬದ ವಿರೋಧದ ಉಲ್ಲೇಖವಿದೆ. ಆದರೆ ಮೂರು ಪುಟಗಳ ಆತಹತ್ಯೆ ಪತ್ರದಲ್ಲಿ ಡಾ. ಆನಂದ್ ಸ್ವಯಂಪ್ರೇರಣೆಯಿಂದ ಈ ತೀವ್ರ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅದೇ ಅರಿವಳಿಕೆ ವಿಭಾಗದ ಹಿರಿಯ ನಿವಾಸಿ ಡಾ.ಆಕಾಂಕ್ಷಾ ಚೌಧರಿ ಅವರೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ, ಇಬ್ಬರೂ ಬೇರೆ ಬೇರೆ ಜಾತಿಗಳಿಗೆ ಸೇರಿದವರಾಗಿರುವುದರಿಂದ ಎರಡೂ ಕುಟುಂಬಗಳು ತಮ ಮದುವೆಯನ್ನು ವಿರೋಧಿಸಿದವು ತಿಳಿಸಿದ್ದಾರೆ.
ಡಾ. ಚೌಧರಿ ಮಧ್ಯಪ್ರದೇಶದ ಜಬಲ್ಪುರದ ನಿವಾಸಿಯಾಗಿದ್ದು, ಡೆತ್‌ನೋಟ್‌ನಲ್ಲಿ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ಸೂಚಿಸಿಲ್ಲ ಮತ್ತು ತನಿಖೆಯ ಭಾಗವಾಗಿ ವಶಪಡಿಸಿಕೊಂಡ ದಾಖಲೆಗಳಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
