Homeರಾಷ್ಟ್ರೀಯಥರ್ಡ್‌ ಪಾರ್ಟಿ ವಿಮೆ ಇಲ್ಲದ ವಾಹನಗಳಿಗೆ ಇಂಧನ ಇಲ್ಲ : ಸುಪ್ರೀಂ ಸೂಚನೆ

ಥರ್ಡ್‌ ಪಾರ್ಟಿ ವಿಮೆ ಇಲ್ಲದ ವಾಹನಗಳಿಗೆ ಇಂಧನ ಇಲ್ಲ : ಸುಪ್ರೀಂ ಸೂಚನೆ

'No third-party insurance cover, no fuel': Supreme Court

ನವದೆಹಲಿ, ಆ. 5- ದೇಶದಲ್ಲಿ ವಾಹನಗಳ ಥರ್ಡ್‌ ಪಾರ್ಟಿ ವಿಮೆ ಕಡ್ಡಾಯ ನಿಯಮವನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್‌ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆ ನಿರ್ಬಂಧಿಸುವಂತೆ ಸೂಚಿಸಿದೆ. ವಿಮೆ ಇಲ್ಲ ಇಂಧನವಿಲ್ಲ ಎಂಬ ಪೈಲಟ್‌ ಯೋಜನೆ ರೂಪಿಸುವ ಸಾಧ್ಯತೆ ಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಆದೇಶ ನೀಡಿದೆ.

ಆದರೆ, ದೇಶಾದ್ಯಂತ ಈ ನಿಯಮ ತಕ್ಷಣದಿಂದ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಗತ್ಯ ರೂಪುರೇಷೆ ಸಿದ್ಧಪಡಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ಇಂತಹ ಕ್ರಮ ಜಾರಿಗೆ ಬರಲಿದೆ.

ಕ್ಯಾಮೆರಾ ಮೂಲಕ ವಿಮೆ ಪರಿಶೀಲನೆ:ಹೆದ್ದಾರಿಗಳಲ್ಲಿ ಅಳವಡಿಸಿರುವ ಸ್ವಯಂಚಾಲಿತ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾಗಳನ್ನು ವಿಮಾ ಡೇಟಾಬೇಸ್‌‍ಗೆ ಸಂಪರ್ಕಿಸುವ ವ್ಯವಸ್ಥೆ ರೂಪಿಸುವಂತೆ ಸೂಚಿಸಲಾಗಿದೆ. ಇದರಿಂದ ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿ ಅದರ ವಿಮೆ ಮಾನ್ಯವಾಗಿದೆಯೇ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಬಹುದಾಗಿದೆ.ವಿಮೆ ಇಲ್ಲದ ವಾಹನಗಳು ಪತ್ತೆಯಾದಲ್ಲಿ ಸ್ವಯಂಚಾಲಿತವಾಗಿ ಇ-ಚಲನ್‌ ಸೃಷ್ಟಿಸುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಗಮನ ಹರಿಸಲಾಗಿದೆ.

ದಂಡ ಮತ್ತಷ್ಟು ಕಠಿಣ? ಥರ್ಡ್‌ ಪಾರ್ಟಿ ವಿಮೆ ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಪ್ರಸ್ತಾವಿತ ದಂಡವನ್ನು 5,000 ಅಥವಾ ವಾರ್ಷಿಕ ವಿಮಾ ಪ್ರೀಮಿಯಂನ ಮೂರು ಪಟ್ಟು ವಿಧಿಸುವ ಕುರಿತು ಚರ್ಚೆ ನಡೆದಿದೆ.ಹೊಸ ವಾಹನಗಳ ವಿಮಾ ಅವಧಿ ಹೆಚ್ಚಳ?ಹೊಸ ಕಾರುಗಳಿಗೆ ಥರ್ಡ್‌ ಪಾರ್ಟಿ ವಿಮೆಯ ಅವಧಿಯನ್ನು 3 ವರ್ಷದಿಂದ 4 ವರ್ಷಕ್ಕೆ, ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷದಿಂದ 6 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.

ಇದರ ಜತೆಗೆ ಸಾಮಾನ್ಯ ವಾಹನ ಮಾಲೀಕರಿಗೂ ಸುಲಭವಾಗಿ ಅರ್ಥವಾಗುವಂತಹ ಸರಳ ವಿಮಾ ಯೋಜನೆಗಳನ್ನು ರೂಪಿಸುವಂತೆ ಗೆ ಸೂಚಿಸಲಾಗಿದೆ. ವಿಮಾ ಪಾಲಿಸಿಗಳ ನಿಯಮಗಳು ಮತ್ತು ಷರತ್ತುಗಳನ್ನು ಜನಸಾಮಾನ್ಯರಿಗೆ ಗೊಂದಲವಾಗದ ರೀತಿಯಲ್ಲಿ ಸರಳಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.

ಅಪಘಾತ ಸಂತ್ರಸ್ತರ ಹಿತಾಸಕ್ತಿ ಮುಖ್ಯ:ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಾಗುವವರಿಗೆ ಕಾನೂನು ಮತ್ತು ಆರ್ಥಿಕ ರಕ್ಷಣೆ ದೊರೆಯುವಂತೆ ಮಾಡುವುದೇ ಥರ್ಡ್‌ ಪಾರ್ಟಿ ವಿಮೆಯ ಪ್ರಮುಖ ಉದ್ದೇಶವಾಗಿದೆ. ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ರಸ್ತೆ ಸುರಕ್ಷತೆ ಹಾಗೂ ವಿಮಾ ಪಾಲನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಪರಿಗಣಿಸಲಾಗಿದೆ.ಆದರೆ ಸಾರ್ವಜನಿಕರು ಗಮನಿಸಬೇಕಾದ ಅಂಶವೆಂದರೆ, ವಿಮೆ ಇಲ್ಲಇಂಧನವಿಲ್ಲ ನಿಯಮವು ಸದ್ಯ ದೇಶಾದ್ಯಂತ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ, ಮತ್ತು ರೂಪುರೇಷೆ ಅಂತಿಮಗೊಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಹೊಸ ವ್ಯವಸ್ಥೆಯ ಜಾರಿ ಸಾಧ್ಯವಾಗಲಿದೆ.

RELATED ARTICLES
spot_img

Latest News