Saturday, April 18, 2026
Homeರಾಷ್ಟ್ರೀಯಅಸ್ಸಾಂ ಸಿಎಂ ವಿರುದ್ಧ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್‌‍ ನಾಯಕ ಪವನ್‌ಕೇರ್‌ ನಾಪತ್ತೆ

ಅಸ್ಸಾಂ ಸಿಎಂ ವಿರುದ್ಧ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್‌‍ ನಾಯಕ ಪವನ್‌ಕೇರ್‌ ನಾಪತ್ತೆ

Pawan Khera Missing From Delhi Residence During Assam Police Visit

ನವದೆಹಲಿ,ಏ.7 – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಅವರ ಕುಟುಂಬದ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಅಸ್ಸಾಂ ಪೊಲೀಸ್‌‍ ತಂಡ ಇಂದು ಕಾಂಗ್ರೆಸ್‌‍ ನಾಯಕ ಪವನ್‌ ಕೇರ್‌ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದೆ.

ಅಸ್ಸಾಂ ಪೊಲೀಸ್‌‍ ತಂಡವು ಆಗಮಿಸಿರುವ ಬಗ್ಗೆ ದೆಹಲಿ ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸ್‌‍ ತಂಡ ಕೂಡ ಅಲ್ಲಿದ್ದು, ವಿಚಾರಣೆಯು ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿಯ ವಿರುದ್ಧ ಹಲವು ಪಾಸ್‌‍ಪೋರ್ಟ್‌ ಮತ್ತು ವಿದೇಶಿ ಆಸ್ತಿ ಕುರಿತಾಗಿ ಕಾಂಗ್ರೆಸ್‌‍ ಮಾಡಿರುವ ಆರೋಪಗಳು ಬಾರಿ ಸದ್ದು ಮಾಡಿದೆ.
ಅಸ್ಸಾಂ ಚುನಾವಣೆ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನಾಗಿ ಹಾಗೂ ಇದು ಶಿಕ್ಷಾರ್ಹ ಅಪರಾಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಹೇಳಿದ್ದಾರೆ.

ಇತ್ತೀಚೆಗೆ ಪವನ್‌ ಕೇರ್‌ ಮಾಡಿರುವ ಆರೋಪ ಕುರಿತು ತನಿಖಾ ಭಾಗವಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೆ ಅವರು ಅಲ್ಲಿಂದ ಪಲಾಯನ ಮಾಡಿದ್ದಾರೆ.ನಿಗೂಡ ಸ್ಥಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ

RELATED ARTICLES

Latest News