Wednesday, April 29, 2026
Homeರಾಷ್ಟ್ರೀಯವಾಷಿಂಗ್ಟನ್‌ ಡಿಸಿ ಮೇಯರ್‌ ಚುನಾವಣೆ : ರಿನಿ ಸಂಪತ್‌ಗೆ ಅಮೆರಿಕನ್‌ ಹಿಂದೂ ಕೋಅಲಿಷನ್‌ ಬೆಂಬಲ

ವಾಷಿಂಗ್ಟನ್‌ ಡಿಸಿ ಮೇಯರ್‌ ಚುನಾವಣೆ : ರಿನಿ ಸಂಪತ್‌ಗೆ ಅಮೆರಿಕನ್‌ ಹಿಂದೂ ಕೋಅಲಿಷನ್‌ ಬೆಂಬಲ

Rini Sampath: AHC backs Indian-origin candidate in DC mayoral race

ವಾಷಿಂಗ್ಟನ್‌, ಏ.28- ಅಮೆರಿಕನ್‌ ಹಿಂದೂ ಕೋಅಲಿಷನ್‌ (ಎಎಚ್‌ಸಿ) ವಾಷಿಂಗ್ಟನ್‌ ಡಿಸಿ ಮೇಯರ್‌ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿರುವ ಭಾರತದ ತ. ನಾಡಿನಲ್ಲಿ ಜನಿಸಿದ ಸೈಬರ್‌ ಸುರಕ್ಷತಾ ತಜ್ಞೆ ರಿನಿ ಸಂಪತ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ.

ರಿನಿ ಸಂಪತ್‌ ಅವರಿಗೆ ಬೆಂಬಲ ಸೂಚಿಸಲು ಎಎಚ್‌ಸಿ, ಇಲ್ಲಿ ಇರುವ ಇಸ್ಕಾನ್‌ ಆಫ್‌ ಡಿಸಿ ದೇವಾಲಯದಲ್ಲಿ ಬೆಂಬಲಿಗರ ಸಭೆಯನ್ನು ಆಯೋಜಿಸಿತು. ಜೂನ್‌ 16ರಂದು ನಡೆಯಲಿರುವ ಡೆಮಾಕ್ರಟಿಕ್‌ ಪ್ರೈಮರಿಯಲ್ಲಿ ಅವರು ಫಿಕ್‌್ಸದಿ ಬೇಸಿಕ್‌್ಸ ಅಜೆಂಡಾ ಹಾಗೂ ಹೊಸ ಡಿಸಿ ಭರವಸೆಯೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ನಾವು ಇನ್ನು ಕೇವಲ ವೀಕ್ಷಕರು ಅಲ್ಲ; ನಮ್ಮ ಮೌಲ್ಯಗಳು ಮತ್ತು ಕುಟುಂಬಗಳು ಸ್ಥಳೀಯ ಆಡಳಿತದ ಉನ್ನತ ಮಟ್ಟಗಳಲ್ಲಿ ಪ್ರತಿನಿಧಿತ್ವ ಪಡೆಯಲು ನಾವು ಒಗ್ಗಟ್ಟಿನ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ರಿನಿಯ ಸ್ಪರ್ಧೆ ಇತಿಹಾಸಾತಕ ಮೊದಲ ಹೆಜ್ಜೆಯಾಗಿದ್ದು, ನಮ ಏಕತೆ ಇದನ್ನು ದೀರ್ಘಕಾಲೀನ ಚಳವಳಿಯನ್ನಾಗಿಸುತ್ತದೆ ಎಂದು ಎಎಚ್‌ಸಿ ಮೆರಿಲ್ಯಾಂಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಂಕುರ ಮಿಶ್ರಾ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಮುದಾಯ ನಾಯಕರು ಶ್ರೀನಿವಾಸ್‌‍ ತಟಿಪಾಮುಲ, ಲಕ್ಷ್ಮಿ ತಲಾಂಕಿ, ಮಹೇಂದ್ರ ಸಾಪಾ ಮತ್ತು ಚಿತ್ರಾಂಜನ್‌ ನಾಥ್‌ ಉಪಸ್ಥಿತರಿದ್ದರು.ತಮಿಳುನಾಡಿನ ತೆನಿ ಜಿಲ್ಲೆಯವರಾದ ರಿನಿ ಸಂಪತ್‌‍, ಏಳು ವರ್ಷದಾಗಿದ್ದಾಗ ಅಮೆರಿಕಾಕ್ಕೆ ತೆರಳಿದ್ದು, ಕಳೆದ ದಶಕಕ್ಕಿಂತ ಹೆಚ್ಚು ಕಾಲದಿಂದ ವಾಷಿಂಗ್ಟನ್‌ ಡಿಸಿಯಲ್ಲಿ ವಾಸಿಸುತ್ತಿದ್ದಾರೆ.

RELATED ARTICLES

Latest News