Saturday, April 11, 2026
Homeರಾಷ್ಟ್ರೀಯಡಾಲರ್‌ ವಿರುದ್ಧ ರೂಪಾಯಿ ದಾಖಲೆ ಕುಸಿತ

ಡಾಲರ್‌ ವಿರುದ್ಧ ರೂಪಾಯಿ ದಾಖಲೆ ಕುಸಿತ

Rupee hits record low against dollar

ಮುಂಬೈ, ಮಾ.23- ಇಂದು ಬೆಳಿಗ್ಗೆ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮತ್ತಷ್ಟು ಕುಸಿತ ಕಂಡು, ಅಮೆರಿಕನ್‌ ಡಾಲರ್‌ ಎದುರು 41 ಪೈಸೆ ಇಳಿದು 93.94ಕ್ಕೆ ತಲುಪಿ ಹೊಸ ದಾಖಲೆ ಮಟ್ಟವನ್ನು ದಾಖಲಿಸಿದೆ.

ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಮುಂದುವರಿದಿರುವುದರಿಂದ ಜಾಗತಿಕ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿರುವುದು ಮತ್ತು ಡಾಲರ್‌ ಬಲವಾಗಿರುವುದು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್‌ಬ್ಯಾಂಕ್‌‍ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 93.84ಕ್ಕೆ ಆರಂಭಗೊಂಡು, ಬಳಿಕ ಮತ್ತಷ್ಟು ಕುಸಿದು 93.94ಕ್ಕೆ ತಲುಪಿತು.

ಇದು ಹಿಂದಿನ ದಿನದ ಬೆಲೆಯಿಂದ 41 ಪೈಸೆ ಕಡಿಮೆ.ಕಳೆದ ಶುಕ್ರವಾರ ಮೊದಲ ಬಾರಿಗೆ ರೂಪಾಯಿ 93 ಮಟ್ಟವನ್ನು ದಾಟಿ, 64 ಪೈಸೆ ಕುಸಿದು 93.53ರಲ್ಲಿ ಅಂತ್ಯಗೊಂಡಿತ್ತು.
ಭಾರತೀಯ ರಿಸರ್ವ್‌ ಬ್ಯಾಂಕ್‌ ವಿವಿಧ ಮಟ್ಟಗಳಲ್ಲಿ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿದರೂ, ಡಾಲರ್‌ಗೆ ಇರುವ ಬೇಡಿಕೆ ಹೆಚ್ಚು ಇರುವುದರಿಂದ ರೂಪಾಯಿ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಫಿನ್ರೆಕ್‌್ಸ ಟ್ರೆಜರಿ ಅಡ್ವೈಸರ್ಸ್‌ ಸಂಸ್ಥೆಯ ಖಜಾನೆ ವಿಭಾಗದ ಮುಖ್ಯಸ್ಥ ಅನಿಲ್‌ ಕುಮಾರ್‌ ಭನ್ಸಾಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ರೂಪಾಯಿ ಮತ್ತಷ್ಟು ಕುಸಿಯುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದರೂ, ತೈಲ ಆಮದು ಮತ್ತು ವಿದೇಶಿ ಹೂಡಿಕೆದಾರರ ಬೇಡಿಕೆ ಹೆಚ್ಚಿನ ಮಟ್ಟದಲ್ಲೇ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್‌ ಕ್ರೂಡ್‌ ಬೆಲೆ 0.60 ಶೇಕಡಾ ಇಳಿಕೆಯಿಂದ ಬ್ಯಾರೆಲ್‌ಗೆ 112.90 ಡಾಲರ್‌ ಮಟ್ಟದಲ್ಲಿ ಇದೆ.ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಸೆನ್ಸೆಕ್‌್ಸ 1,306.27 ಅಂಕಗಳು (1.75%) ಕುಸಿದು 73,226.69ಕ್ಕೆ ತಲುಪಿದೆ. ನಿಫ್ಟಿ ಕೂಡ 418.25 ಅಂಕಗಳು (1.81%) ಇಳಿದು 22,696.25ಕ್ಕೆ ವಹಿವಾಟಾಗಿದೆ.

ಇದಲ್ಲದೆ, ವಿದೇಶಿ ಸಂಸ್ಥಾ ಹೂಡಿಕೆದಾರರು ಶುಕ್ರವಾರ 5,518.39 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ವೇಳೆ, ಮಾರ್ಚ್‌ 13ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 7.052 ಬಿಲಿಯನ್‌ ಇಳಿದು 709.759 ಬಿಲಿಯನ್‌ಗೆ ತಲುಪಿದೆ ಎಂದು ಮಾಹಿತಿ ನೀಡಿದೆ.

RELATED ARTICLES

Latest News