ನವದೆಹಲಿ, ಜೂ.22- ವೈದ್ಯಕೀಯ ಪ್ರವೇಶಾತಿ ಕೋರ್ಸ್ ಗಳಿಗೆ ನಡೆದ ನೀಟ್-ಯುಜಿ 2026 ಪರೀಕ್ಷೆ ಸಂಬಂಧ ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳನ್ನು ವಂಚಿಸಲು ಅಥವಾ ಅವರಿಗೆ ತಪ್ಪು ಮಾಹಿತಿ ನೀಡುವುದು ಇಲ್ಲವೇ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸುಳ್ಳುಸು ಹಬ್ಬಿಸುವುದು ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುವುದು ಗಂಭೀರ ಅಪರಾಧವಾಗಿದೆ.
ಸೆಕ್ಷನ್ 14 ಸಿ ಪ್ರಕಾರ ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಎನ್ಟಿಎ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದೆ.ನಿನ್ನೆ ದೇಶದದ್ಯಾಂತ ನೀಟ್ – ಯುಜಿ 2026 ಮರು ಪರೀಕ್ಷೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುಳ್ಳು ಸುದ್ದಿಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುದು ನಮ ಗಮನಕ್ಕೆ ಬಂದಿದೆ.
ಇದು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು ಸುದ್ದಿ ಇದನ್ನು ಯಾರು ನಂಬಬಾರದೆಂದು ಮನವಿ ಮಾಡಿದೆ. ನೀಟ್ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕತೆ, ಸಮಗ್ರಭದ್ರತೆ ಮತ್ತು ಕಣ್ಗಾವಲಿನಲ್ಲಿ ಯಶಸ್ವಿಯಾಗಿ ನಡೆಸಿದೆ.
ಕೆಲವರು ದುರುದ್ದೇಶ ಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸಂಸ್ಥೆಯು ಅಸಮಾಧಾನ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಧಿಕೃತವಾಗಿ ಎನ್ಟಿಎನ ಅಧಿಕೃತ ವೆಬ್ ಸೈಟ್ neet.nta.nic.in ಅನ್ನು ಪರಿಶೀಲಿಸಬೇಕು. ಸತ್ಯ ಸತ್ಯತೆಯನ್ನು ಪರಮಾರ್ಶೆ ಮಾಡದೆ, ಯಾವುದೇ ವದಂತಿಗಳನ್ನು ನಂಬಬೇಡಿ. ನಮ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಂತ ಮತ್ತು ಸಹನೆಯಿಂದ ನಡೆದುಕೊಳ್ಳಬೇಕೆಂದು ಎನ್ಟಿಎ ಮನವಿ ಮಾಡಿದೆ.
