Homeರಾಷ್ಟ್ರೀಯಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಸುಳಲು ಯತ್ನಿಸಿದ ಮೂವರು ವಶಕ್ಕೆ

ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಸುಳಲು ಯತ್ನಿಸಿದ ಮೂವರು ವಶಕ್ಕೆ

Three arrested for trying to infiltrate into Pakistan-occupied Kashmir

ಶ್ರೀನಗರ, ಮೇ 31-ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದ ಮೂವರನ್ನು ಭಾರತೀಯ ಸೇನೆ ಜಮು-ಕಾಶ್ಮೀರದ ಉರಿ ವಲಯದಲ್ಲಿ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ ಪ್ರದೇಶದ ನಿವಾಸಿಗಳಾದ ಈ ಮೂವರು ಕಳೆದ ರಾತ್ರಿ ಹತ್ಲಂಗಾನಂಬ್ಲಾ ಮಾರ್ಗದ ಮೂಲಕ ನಿಯಂತ್ರಣ ರೇಖೆ ದಾಟಿ ಪಿಒಕೆ ಪ್ರವೇಶಿಸಲು ಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬರು ಮಾಜಿ ಪ್ರಾದೇಶಿಕ ಸೇನಾ ಯೋಧರಾಗಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮೂವರನ್ನೂ ಸೇನಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಮತ್ತೊಂದು ಘಟನೆಯಲ್ಲಿ, ಅದೇ ಸೇನಾ ಘಟಕವು ಉರಿ ಪ್ರದೇಶದ ಸಿಲಿಕೋಟ್‌ ಭಾಗದಲ್ಲಿ ನಿಯಂತ್ರಣ ರೇಖೆ ದಾಟಿ ಕಾಶೀರ ಪ್ರವೇಶಿಸಿದ್ದ ಪಿಒಕೆ ನಿವಾಸಿಯೊಬ್ಬನನ್ನು ವಶಕ್ಕೆ ಪಡೆದಿದೆ.

ಬಂಧಿತನನ್ನು ಜೀಶನ್‌ ಮೀರ್‌ ಎಂದು ಗುರುತಿಸಲಾಗಿದೆ. ಆತ ಪಿಒಕೆಯ ಮುಜಫರಾಬಾದ್‌ನಿವಾಸಿಯಾಗಿದ್ದು, ಉರಿಯ ಟಿಲೈಲಿ ಪ್ರದೇಶದಲ್ಲಿ ವಾಸಿಸುವ ತನ್ನ ಪ್ರೇಯಸಿಯನ್ನು ಭೇಟಿಯಾಗಲು ನಿಯಂತ್ರಣ ರೇಖೆ ದಾಟಿದ್ದೇನೆ ಎಂದು ಹೇಳಿದ್ದಾನೆ.

ಝೀಶಾನ್‌ ಮಿರ್‌ ಹಾಗೂ ಆತನ ಪ್ರೇಯಸಿ ಎಂದು ಹೇಳಲಾಗುತ್ತಿರುವ ಯುವತಿಯನ್ನು ಭದ್ರತಾ ಪಡೆಗಳು ವಿಚಾರಣೆಗೆ ಒಳಪಡಿಸಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಭದ್ರತಾ ಸಂಸ್ಥೆಗಳು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News