Friday, November 7, 2025
Home Blog Page 1805

ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‍ಗೆ ವಿಮಾನ ಸಂಚಾರ

ಬೆಂಗಳೂರು,ನ.20- ನಾಳೆಯಿಂದ ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭಿಸಲಿದೆ.

ವಿಮಾನಯಾನ ಸಂಸ್ಥೆಯು ತಮ್ಮ ಹೊಸ ಎಂಬ್ರಾರ್ ಇ175 ವಿಮಾನವನ್ನು ಬಳಸಿಕೊಂಡು ಈ ಬಹು ನಿರೀಕ್ಷಿತ ಮಾರ್ಗಗಳಲ್ಲಿ ಸಂಚಾರ ಪ್ರಾರಂಭಿಸಲಿದೆ. ಹೈದರಾಬಾದ್‍ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಅನ್ವೇಷಿಸುವ ಪ್ರವಾಸಿಗರಿಗೆ ಮತ್ತು ಬ್ಯುಸಿನೆಸ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶಿವಮೊಗ್ಗ ಮತ್ತು ಹೈದರಾಬಾದ್ ನಡುವೆ ತಡೆರಹಿತ ದೈನಂದಿನ ವಿಮಾನಗಳ ಸೇವೆ ಲಭ್ಯವಿರುತ್ತದೆ ಎಂದು ಸ್ಟಾರ್ ಏರ್ ಮೂಲಗಳು ತಿಳಿಸಿವೆ.

ಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ’

ಇದಲ್ಲದೆ ದೈನಂದಿನ ವಿಮಾನಗಳು ಶಿವಮೊಗ್ಗದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಶ್ರೀವೆಂಕಟೇಶ್ವರ ದೇವಸ್ಥಾನ ಮತ್ತು ಇತರ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆನಂದಿಸಬಹುದು ಮತ್ತು ನಮ್ಮ ಸೌಕರ್ಯವನ್ನು ಅನುಭವಿಸಬಹುದು.ಇನ್ನು ಗೋವಾ ಪ್ರವಾಸಿಗರಿಗೂ ಸಂಪರ್ಕ ಒದಗಿಸುತ್ತದೆ ಎಂದು ಸ್ಟಾರ್ ಏರ್ ಹೇಳಿದೆ.

ಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ’

ಬೆಂಗಳೂರು, ನ.20- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪಡೆದ ಬಿರುದುಗಳ ಪಟ್ಟಿಯನ್ನು ನೀಡಿದೆ. ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಸರ್ಕಾರ್ ಎಂದು ಬಿಜೆಪಿ ದೂರಿದೆ.

ಈ ಕುರಿತು ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶ್ಯಾಡೋ ಸಿಎಂ ಯತೀಂದ್ರರವರಿಗೆ ಎಟಿಎಂ ಸರ್ಕಾರದ ಆಡಳಿತದಲ್ಲಿ ದೊರೆತಿರುವ ಬಿರುದುಗಳು ಎಂದು ಟ್ವೀಟ್ ಮಾಡಿದೆ.
ಕಡು ಭ್ರಷ್ಟ , ಹಲೋ ಅಪ್ಪ ವೈ.ಎಸ್.ಟಿ ಕಲೆಕ್ಷನ್ ಪ್ರಿನ್ಸ್ ಸಿಎಂ ಸಿದ್ದರಾಮಯ್ಯರವರ ಕಲೆಕ್ಷನ್-ಕಮಿಷನ್-ಕರಪ್ಷನ್ ಆಡಳಿತ ಮುಗಿಯುವ ಮುನ್ನ ಮತ್ತಷ್ಟು ಬಿರುದುಗಳು ಬಂದರೂ ಸಹ ಅಚ್ಚರಿಯಿಲ್ಲ!! ಎಂದು ಬಿಜೆಪಿ ಹೇಳಿದೆ.

ಜನಾರ್ಧನರೆಡ್ಡಿ ಬಿಜೆಪಿಗೆ ಕರೆತರಲು ಯತ್ನ

ಹಲೋ ಅಪ್ಪ ಕರ್ನಾಟಕದಲ್ಲಿ ಕಳೆದ ವಾರದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಯ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ ಹಲೋ ಅಪ್ಪ ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ರಾಜ್ಯದಲ್ಲಿ 3 ದಿನ ಮಳೆ ಸಾಧ್ಯತೆ

ಬೆಂಗಳೂರು, ನ.20- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ದಿಂದ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ನವೆಂಬರ್ 22ರಿಂದ 24ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಇಲ್ಲವೆ ಮಧ್ಯಮ ಪ್ರಮಾಣದ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರ ಪರಿಣಾಮ ರಾಜ್ಯದ ಮೇಲೆ ಹೆಚ್ಚಾಗುವುದಿಲ್ಲ. ಆದರೆ, ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ನೈರುತ್ಯ ಮುಂಗಾರಿನಂತೆ ಈಶಾನ್ಯ ಹಿಂಗಾರು ಮಳೆಯೂ ಕೈಕೊಟ್ಟಿದೆ. ಇತ್ತೀಚೆಗೆ ಹಿಂಗಾರು ಚೇತರಿಕೆ ಕಂಡು ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತದ ಪರಿಣಾಮದಿಂದ ಹಿಂಗಾರು ಕೂಡ ದುರ್ಬಲಗೊಂಡಿತ್ತು. ಹೀಗಾಗಿ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣ ಹವೆ ಮುಂದುವರೆದಿದೆ.

ಹಿಂಗಾರು ಆರಂಭವಾಗುವ ಅಕ್ಟೋಬರ್‍ನಲ್ಲಿ ಶೇ.65ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಉಂಟಾಗಿತ್ತು. ನವೆಂಬರ್‍ನಲ್ಲಿ ಈತನಕ ವಾಡಿಕೆಗಿಂತೆ ಹೆಚ್ಚಿನ ಮಳೆ ಬಿದ್ದ ಮಾಹಿತಿ ಇದೆ. ಆದರೆ, ಬೆಳೆಗೆ ಅನುಕೂಲವಾಗುವಂತೆ ಕಾಲಕಾಲಕ್ಕೆ ಮಳೆಯಾಗಿಲ್ಲ. 8-10 ದಿನಗಳ ಹಿಂದೆ ಕೆಲವೆಡೆ ಬಿದ್ದ ಭಾರಿ ಮಳೆಯಿಂದ ವಾಡಿಕೆಗಿಂತ ಹೆಚ್ಚು ಮಳೆಯಾದಂತಾಗಿದೆ ಅಷ್ಟೆ.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ಕಳೆದ ಒಂದು ವಾರದಿಂದಲ್ಲೂ ಒಣ ಹವೆ ಮುಂದುವರೆದಿದ್ದು, ಶೇ.95ರಷ್ಟು ಮಳೆ ಕೊರತೆ ಕಂಡುಬಂದಿದೆ. ಕೆಲವೆಡೆ ಮುಂಜಾನೆ ಮಂಜು ಕವಿಯುವ ವಾತಾವರಣ ಕಂಡುಬರುತ್ತಿದೆ. ರಾತ್ರಿ ವೇಳೆ ಚಳಿಯೂ ಹೆಚ್ಚಾಗುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್‍ನಿಂದ ನಿನ್ನೆವರೆಗೆ ರಾಜ್ಯಲ್ಲಿ ವಾಡಿಕೆಗಿಂತ ಶೇ.27ರಷ್ಟು ಕಡಿಮೆ ಮಳೆಯಾಗಿದ್ದು, ರಾಜ್ಯದಲ್ಲಿ ಬರದ ವಾತಾವರಣ ಸೃಷ್ಟಿಯಾಗಿದೆ.

ಅಕ್ಟೋಬರ್‍ನಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ರಾಜ್ಯದಲ್ಲಿ ಶೇ. 39ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.31ರಷ್ಟು, ಉತ್ತರ ಒಳನಾಡಿನಲ್ಲಿ ಶೇ.74 ಹಾಗೂ ಮಲೆನಾಡಿನಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದೆ. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿರುವುದರಿಂದ ಮುಂಗಾರು ಹಂಗಾಮಿನ ಕೊಯ್ಲು ಮಾಡುವಂತಹ ಭತ್ತ, ರಾಗಿ, ಶೇಂಗಾ ಮೊದಲಾದ ಬೆಳೆಗಳಿಗೆ ಅನುಕೂಲವಾಗಿದೆ.

ಆದರೆ, ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ತೇವಾಂಶವಿಲ್ಲದೆ ಒಣಗುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಹಿಂಗಾರು ಬೆಳೆ ಹೆಚ್ಚು ಬೆಳೆಯಲಾಗುತ್ತಿತ್ತು. ಈ ಬಾರಿಯ ಮಳೆಯ ಅಭಾವದಿಂದ ಮುಂಗಾರಿನಂತೆ ಹಿಂಗಾರು ಬೆಳೆಯೂ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಸರ್ಕಾರದಿಂದ ರೈತರ ನಿರ್ಲಕ್ಷ್ಯ : ವಿಜಯೇಂದ್ರ ಕಿಡಿ

ಮೈಸೂರು, ನ.20- ಬಿಜೆಪಿಯಲ್ಲಿ ಸದ್ಯದಲ್ಲೇ ಅಸಮಾಧಾನ ಸ್ಪೋಟಗೊಳ್ಳಲಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಎಲ್ಲಿ ಅಸಮಾಧಾನಗೊಳ್ಳಲಿದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿ ದ್ದಾರೆ. ಸಣ್ಣ-ಪುಟ್ಟ ಸಮಸ್ಯೆ ಗಳಿದ್ದರೂ ಸರಿಪಡಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‍ನಲ್ಲೇ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸದ್ಯದಲ್ಲೇ ಸ್ಪೋಟಗೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದರು.

ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ವರಿಷ್ಠರು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಅಸಮಾಧಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಶಾಸಕರು ಅವರ ಕ್ಷೇತ್ರದಲ್ಲಿ ತಲೆಎತ್ತಿಕೊಂಡು ಓಡಾಡಲು ಆಗದಂತೆ ಮಾಡಿದ್ದೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಇವರ ಸಾಧನೆಯಾಗಿದೆ. ಒಬ್ಬ ಸಚಿವರಾದರು ಅವರ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆಂದು ಹೇಳಲಿ. ಬರದ ಬಗ್ಗೆ ಚರ್ಚೆ ಮಾಡಿದ್ದಾರೆಯೇ? ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ನಿರಂತರ ವಿದ್ಯುತ್ ನೀಡಲಾಗುತ್ತಿತ್ತು. ರೈತರ, ಬಡವರ ವಿರೋಧಿ ರಾಜ್ಯ ಸರ್ಕಾರವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ರಾಜ್ಯದ ಜನರು ಇವರಿಗೆ ಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ನೆರವೂ ಕಾಯದೇ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ 314 ಕೋಟಿ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡದಿರಲು ಸರ್ಕಾರವೇನು ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಎದುರು ನೋಡದೆ, ರಾಜ್ಯ ಸರ್ಕಾರ ಮೊದಲು ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿ. ನಾವೇನು ಕರ್ನಾಟಕಕ್ಕೆ ಅನುದಾನ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ, ಇಲ್ಲವೆ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿಲ್ಲ. ಸೂಕ್ತ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನವನ್ನು ಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಕಾಂಗ್ರೆಸ್ ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ,ಇವರ ಆಡಳಿತದಿಂದ ಜನ ನಿರಾಶರಾಗಿದ್ದು, ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಂತೆ ಇದ್ದರು. ಈಗ ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ಶಿವಕುಮಾರ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವ ಆಸಕ್ತಿಯೂ ಇಲ್ಲ. ಆದರೆ ರಾಜ್ಯದ ಜನರಿಗೆ ಏನು ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಪ್ರವಾಸದ ವೇಳೆ ರೈತರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ಮಾತನಾಡಿದ ಅವರು ಸೌಜನ್ಯಕ್ಕೂ ಸಿದ್ದರಾಮಯ್ಯ ಭೇಟಿ ಮಾಡದೆ ಅಧಿಕಾರ ಬಳಸಿ ಬಂಧಿಸಿದ್ದಾರೆ. ಬರಗಾಲದ ವೇಳೆ ಆಡಳಿತ ಯಂತ್ರ ಕುಸಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ರೈತರಿಗೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ವೈಖರಿ ಕಣ್ಣೀರು ತರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಜಮೀರ್ ಅಹಮದ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದು ಹುಡುಗಾಟದ ಮಾತಲ್ಲ. ಜಮೀರ್ ಅಹಮದ್ ಅವರ ಮನದಾಳದ ಮಾತು. ನ್ಯಾಯದೇವತೆ ಎಂದು ಗೌರವ ಕೊಡುತ್ತೇವೆ. ಅದಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಬೇರೆ ಸಿಎಂ ಆಗಿದ್ದರೆ ಜಮೀರ್ ರಾಜೀನಾಮೆ ತೆಗೆದುಕೊಳ್ಳುತ್ತಿದ್ದರು. ಆದರೆ, ಸರ್ಕಾರ ಈ ಹೇಳಿಕೆ ಖಂಡಿಸುವ ಕೆಲಸ ಸಹ ಮಾಡಿಲ್ಲ. ಜಮೀರ್ ಅಹಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ಸಚಿವ ಪ್ರಿಯಾಂಕ ಖರ್ಗೆ ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಾರೆ. ಗೂಂಡಾಗಿರಿ ಕಲುಬುರುಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಿಯಾಂಕ ತವರು ಜಿಲ್ಲೆಯಲ್ಲಿ ಗುಂಡಾಗಿರಿ ಹೆಚ್ಚಾಗಿದೆ. ಮಣಿಕಂಠ ರಾಥೋಡ್ ಮೇಲೆ ರಾಜಕೀಯ ಪುಡಾರಿಗಳಿಂದ ಹಲ್ಲೆ ನಡೆಸಲಾಗಿದೆ. ಅಧಿಕಾರದ ದರ್ಪದಿಂದ ಏನೇ ಮಾಡಿದರು ನಡೆಯುತ್ತದೆ ಅಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಅಧಿಕಾರದ ದರ್ಪದಿಂದ ಕಾಂಗ್ರೆಸ್‍ನವರು ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂದಿನ ಎಲ್ಲಾ ಚುನಾವಣೆ ಒಗ್ಗಟ್ಟಾಗಿ ಒಂದಾಗಿ ಎದುರಿಸುತ್ತೇವೆ. ರಾಜ್ಯ ಸರ್ಕಾರದ ರುದ್ಧ ಬೇಸರಕ್ಕೆ ಪರ್ಯಾಯ ಬಿಜೆಪಿ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಮೈಸೂರು ಮತ್ತು ಮಂಡ್ಯ ಜಿಲ್ಲೆ ಪ್ರವಾಸ ಮಾಡಿದ್ದೇನೆ. ಮೈಸೂರು ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧವಿದೆ. ಬಿ.ವೈ. ವಿಯೇಂದ್ರರನ್ನು ಗುರುತಿಸಿ, ಶಾಸಕ ಆಗಲು ಭದ್ರ ಬುನಾದಿ ಹಾಕಿರುವುದು ವರುಣ ಕ್ಷೇತ್ರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆ. ಮುಂದಿನ ಲೋಕಸಭಾ ಚುನಾವಣೆ ಗಂಭೀರವಾಗಿ ತೆಗೆದುಕೊಂಡು 28ಕ್ಕೆ 28 ಕ್ಷೇತ್ರವನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಭದ್ರಕೋಟೆ. ಕಳೆದ ಬಾರಿ ಚುನಾವಣೆ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಕಾರಕ್ಕೆ ತರುವ ಗುರಿ ಹೊಂದಬೇಕು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಷ್ಟೇ ಮಹತ್ವ ಸ್ಥಳೀಯ ಸಂಸ್ಥೆಗೂ ನೀಡಲಾಗುವುದು. ಅದು ನಮ್ಮ ಕಾರ್ಯಕರ್ತರ ಚುನಾವಣೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.

ಜನಾರ್ಧನರೆಡ್ಡಿ ಬಿಜೆಪಿಗೆ ಕರೆತರಲು ಯತ್ನ

ಬೆಂಗಳೂರು, ನ.20- ಆಕ್ರಮ ಗಣಿಗಾರಿಕೆ ಪ್ರಕಣದಿಂದ ಜೈಲು ಪಾಲಾಗಿ ಬಿಜೆಪಿಯಿಂದ ದೂರ ಸರಿದಿದ್ದ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರನ್ನು ಪುನಃ ಮಾತೃ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚೆ ಪಕ್ಷದ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಲೋಕಸಭಾ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲ್ಲಲು ತಂತ್ರಗಾರಿಕೆ ಹೆಣೆಯತ್ತಿದ್ದು, ಇದರ ಭಾಗವಾಗಿಯೇ ಕೆಕೆಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸರ್ವ ಯತ್ನಗಳು ನಡೆಯುತ್ತಿವೆ.

ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆ ಗಾಲಿ ಜನಾರ್ದನ ರೆಡ್ಡಿ ಕಳೆದ ಒಂದು ದಶಕದಿಂದ ರಾಜಕೀಯದಿಂದ ದೂರ ಉಳಿದಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರವೇಶಿಸಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದರು.

ನೂತನ ಪಕ್ಷ ಸ್ಥಾಪನೆ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಸವಾಲೊಡ್ಡಿದ್ದರು. ರೆಡ್ಡಿಯವರ ಈ ತಂತ್ರಗಾರಿಕೆ ಮತ ವಿಭಜನೆಗೂ ಕಾರಣವಾಗಿತ್ತು. ಕೆಆರ್‍ಪಿ ಪಕ್ಷದಿಂದ ರಾಜ್ಯದ ನಾನಾ ಭಾಗಗಳಲ್ಲಿಅಭ್ಯರ್ಥಿಗಳನ್ನು ನಿಲ್ಲಿಸಿದ್ದ ರೆಡ್ಡಿ, ಈ ಪೈಕಿ ಗಂಗಾವತಿ ಕ್ಷೇತ್ರದಿಂದ ಸ್ರ್ಪಧಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಪಕ್ಷದಿಂದ ಗೆದ್ದ ಏಕೈಕ ಶಾಸಕರು ಎನ್ನಿಸಿಕೊಂಡಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಿಂದ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ, ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಕಣಕ್ಕಿಳಿಸಿ ಬಿಜೆಪಿಗೇ ಸೆಡ್ಡು ಹೊಡೆದಿದ್ದರು. ಮುಂಬರುವ ಚುನಾವಣೆಗಳಲ್ಲಿ ಕೆಆರ್‍ಪಿಪಿಯಿಂದ ಎದುರಾಗಬಹುದಾದ ಪರಿಣಾಮಗಳನ್ನು ತಡೆಯಲು ಮತ್ತು ಕಾಂಗ್ರೆಸ್‍ಗೆ ತಿರುಗೇಟು ನೀಡುವ ತಂತ್ರದೊಂದಿಗೆ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನಗಳನ್ನು ಸದ್ದಿಲ್ಲದೆ ನಡೆಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇತ್ತೀಚೆಗಷ್ಟೇ ಕೆಆರ್‍ವ ಮೂಲಕ ಮುಂದಿನ ಚುನಾವಣೆಗಲ್ಲಿ ಸ್ಥಾನ ಕೈತಪ್ಪದಂತೆ ಬಿಜೆಪಿ ಯೋಚಿಸಿದೆ. ಇದರಿಂದ ಕಾಂಗ್ರೆಸ್‍ಗೆ ತಕ್ಕ ಉತ್ತರ ನೀಡಿದಂತಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ. ರೆಡ್ಡಿ ಅವರ ರಾಜಕೀಯ ಪ್ರವೇಶ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ರೆಡ್ಡಿಯವರ ಈ ನಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕದಲ್ಲಿ ಸವಾಲುಗಳು ಸೃಷ್ಟಿಯಾದವು. ಮತಗಳು ಒಡೆದು ಹೋಗುವ ಜೊತೆಗೆ ಕ್ಷೇತ್ರಗಳು ಕೈತಪ್ಪುವ ಭೀತಿ ಎದುರಾಗಿತ್ತು.

ಇದೆಲ್ಲ ಗಮನಿಸಿರುವ ಬಿಜೆಪಿ ಮುಂದೆ ಹೀಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಆರ್ಪಿಪಿ ಸಂಸ್ಥಾಪಕರನ್ನು ಕರೆತರಲು ಕೇಂದ್ರ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕರ ಬಳಿ ಚರ್ಚೆ: ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಮರಳಿ ಸೇರ್ಪಡೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ನಾಯಕರ ಅಂಗಳದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಇದಲ್ಲದೆ, ರೆಡ್ಡಿ ವಾಪಸ್ ಬಿಜೆಪಿಗೆ ಬರುವುದರಿಂದ ಆಗುವ ಲಾಭ, ಎದುರಾಗುವ ಸವಾಲುಗಳ ಕುರಿತೂ ಪಕ್ಷದಲ್ಲಿ ಚರ್ಚೆಗಳು ಮುನ್ನಲೆಗೆ ಬಂದಿದ್ದು, ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಸೋಲು ಅನುಭವಿಸಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಎದುರಾಗುವ ಲೋಕಸಭೆ, ತಾಪಂ, ಜಿಪಂ ಹಾಗೂ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ನಾನಾ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಮುಂದಾಗಿರುವ ಬಿಜೆಪಿ, ಕೆಆರ್‍ಪಿಪಿಯಿಂದ ಬಿಜೆಪಿಗೆ ಕೈತಪ್ಪುವ ಮತಗಳನ್ನು ತಡೆಯುವ ಉದ್ದೇಶದಿಂದ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉತ್ಸಾಹ ತೋರಿದೆ ಎನ್ನಲಾಗಿದೆ.

ರೆಡ್ಡಿಯನ್ನು ಕರೆತರುವ ಮೂಲಕ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಮುಂದಾಗಿದೆ. ಇದರೊಂದಿಗೆ ನಂತರ ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪದವಿಧರರ ಕ್ಷೇತ್ರದ ಚುನಾವಣೆಗಳಲ್ಲಿ ಸೀಟು ಭದ್ರಪಡಿಸಿಕೊಳ್ಳಲು, ತಮ್ಮ ಮತ ಬ್ಯಾಂಕ್ ಕೈತಪ್ಪದಂತೆ ರಣತಂತ್ರ ಹೆಣೆಯುತ್ತಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮಗೊಳ್ಳಬೇಕಿದೆ.

ಗಾಲಿ ಜನಾರ್ಧನ್ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾದರೆ, ಇತ್ತೀಚೆಗೆಷ್ಟೇ ರಚನೆಯಾದ ಜಿಲ್ಲಾಮಟ್ಟದ ಘಟಕ, ಅಧ್ಯಕ್ಷರು ಮತ್ತು ಕಾರ್ಯಕರ್ತರ ಗತಿ ಏನು. ಸಂಸ್ಥಾಪಕರನ್ನೇ ನಂಬಿ ಬಂದ ಅವರು ಬಿಜೆಪಿ ವಿರುದ್ಧ ಸೆಣಸಿ ತಮ್ಮ ಅಭ್ಯರ್ಥಿ ಗೆಲ್ಲಿಸುವಲ್ಲಿ ಶ್ರಮಿಸಿದ್ದಾರೆ. ಮುಂದೆ ಅವರ ನಡೆ ಹೇಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ಬೆಂಗಳೂರು, ನ.20- ಯಾರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್ ಒಂದು ಬಾರಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ, ಅದಕ್ಕೆ ಎಲ್ಲರೂ ಒಪ್ಪಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಾಮಾಧಾನಕ್ಕೆ ಮಾಜಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನ ಸಿಗದ ಹಿನ್ನೆಲೆ ಯತ್ನಾಳ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಒಂದು ಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯತ್ನಾಳ್ ಅವರು ಹಿರಿಯ ನಾಯಕ. ಒಂದು ಬಾರಿ ಪಕ್ಷ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನು ಸರಿ ಮಾಡಿಕೊಂಡು ಪಕ್ಷ ಮುನ್ನಡೆಸಬೇಕು ಹೀಗಾಗಿ ಎಲ್ಲ ಸರಿ ಮಾಡಿಕೊಂಡು ಹೋಗುವ ವಿಶ್ವಾಸವಿದೆ ಎಂದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆರ್.ಆಶೋಕ್ ನೇಮಕ ಆಗಿದ್ದಾರೆ. ಅದೇ ರೀತಿ ಬಿ.ವೈ. ವಿಜಯೇಂದ್ರ ಕಿರಿಯರು ಎಂಬುದನ್ನು ಒಪ್ಪಿಕೊಳ್ಳುವೆ. ಇಲ್ಲಿ ನನ್ನ ಅಥವಾ ಇನ್ನೊಬ್ಬರ ಇಷ್ಟ, ಕಷ್ಟ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ರಾಷ್ಟ್ರೀಯ ಪಕ್ಷದಲ್ಲಿ ಅದು ಪರಿಗಣನೆಗೆ ಬರುವವುದಿಲ್ಲ ಎಂದು ತಿಳಿಸಿದರು.

ವಿಶ್ವದ ವಿಶ್ವಾಸಾರ್ಹ ಪಕ್ಷ ಬಿಜೆಪಿ; ರಾಜ್‍ನಾಥ್‍ಸಿಂಗ್

ಈಗ ವಿಜೆಯೇಂದ್ರ ಅವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರೂ ಸಹಕಾರವನ್ನು ಅವರಿಗೆ ನಾನು ಸೇರಿದಂತೆ ಕೊಡಬೇಕು. ಆಗ ಮಾತ್ರ ಪಕ್ಷ ಕಟ್ಟಲು ಅನುಕೂಲ ಆಗುತ್ತದೆ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ. ಏನೇ ಅಸಮಾಧಾನ ಇದ್ದರೂ ಸರಿ ಮಾಡಿಕೊಂಡು ಹೋಗೋ ಕೆಲಸ ಮಾಡುವುದಾಗಿ ರಾಮುಲು ಹೇಳಿದರು.

ಸಿಎಸ್ ವಿರುದ್ಧದ ದೂರಿಗೆ ಕ್ಯಾರೆ ಎನ್ನದ ದೆಹಲಿ ಲೆಫ್ಟಿನೆಂಟ್ ಗವರ್ನರ್

ನವದೆಹಲಿ,ನ.20- ಬಮ್ನೋಲಿ ಭೂಸ್ವಾೀಧಿನ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಪ್ರಾಥಮಿಕ ಹಂತದ ತೊಡಕಾಗಿದ್ದಾರೆ ಎಂಬ ವಿಜಿಲೆನ್ಸ್ ಸಚಿವ ಅತಿಶಿ ಅವರ ವರದಿಯನ್ನು ಪರಿಗಣಿಸಲು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ನಿರಾಕರಿಸಿದ್ದಾರೆ. ಇದು ಸಚಿವರ ಪೂರ್ವಾಗ್ರಹ ಪೀಡಿತ ಊಹೆಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.

ವರದಿಯನ್ನು ಸರ್ಕಾರವು ತನಗೆ ಸಲ್ಲಿಸಿದ ಬಗ್ಗೆ ಒಂದು ಕಡತದಲ್ಲಿ, ಸಕ್ಸೇನಾ ವರದಿಯು ಪ್ರಸ್ತುತ ತನಿಖೆಯನ್ನು ಸುಗಮಗೊಳಿಸುವ ಬದಲು ಉತ್ತಮವಾಗಿ ಮುಂದುವರಿಯಬಹುದು ಎಂದು ಹೇಳಿದ್ದಾರೆ. ದೂರುಗಳ ಕುರಿತು ಪ್ರಾಥಮಿಕ ವರದಿಯನ್ನು ಮಾನ್ಯ ಸಚಿವರು ಸಲ್ಲಿಸಿದ್ದಾರೆ ಮತ್ತು ಮಾನ್ಯ ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ. ಕನಿಷ್ಠ ಹೇಳಲು ಆಶ್ಚರ್ಯಕರ ಮತ್ತು ದುರದೃಷ್ಟಕರ,

ಜೈಲಿನಿಂದ ಸಾಕ್ಷಿಗೆ ಬೆದರಿಕೆ- ಛೋಟಾ ಶಕೀಲ್ ಸಹಚರನ ವಿರುದ್ಧ ಎಫ್‍ಐಆರ್

ಈ ವರದಿಯು ವ್ಯವಹರಿಸುತ್ತದೆ. ಸೂಕ್ಷ್ಮ ಜಾಗರೂಕತೆಗೆ ಸಂಬಂಸಿದ ವಿಷಯಗಳು ಮತ್ತು ಗೌಪ್ಯ ಕವರ್‍ನಲ್ಲಿ ನನ್ನ ಸೆಕ್ರೆಟರಿಯೇಟ್‍ಗೆ ಗುರುತಿಸಲಾಗಿದೆ, ಈಗಾಗಲೇ ಸಾರ್ವಜನಿಕ ಡೊಮೇನ್‍ನಲ್ಲಿದೆ ಮತ್ತು ಅದರ ಡಿಜಿಟಲ/ಎಲೆಕ್ಟ್ರಾನಿಕ್ ಪ್ರತಿಗಳು ಉಚಿತವಾಗಿ ಲಭ್ಯವಿವೆ ಮತ್ತು ಅದರ ವಿವರಗಳನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಮಾಡಲಾಗಿದೆ, ಎಂದು ಅವರು ಹೇಳಿದ್ದಾರೆ.

ವರದಿಯಿಂದ ಆಯ್ದ ಪಠ್ಯವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಹೇಳಿರುವ ಅವರು, ಈ ಭಾವಿಸಲಾದ ವಿಚಾರಣೆಯ ಸಂಪೂರ್ಣ ಉದ್ದೇಶವು ಸತ್ಯವನ್ನು ಬಹಿರಂಗಪಡಿಸಲು ಅಲ್ಲ, ಆದರೆ ಮಾಧ್ಯಮ ವಿಚಾರಣೆಯನ್ನು ಪ್ರಾರಂಭಿಸಲು ಮತ್ತು ಈ ಸಂಪೂರ್ಣ ಸಮಸ್ಯೆಯನ್ನು ರಾಜಕೀಯಗೊಳಿಸುವುದು ಎಂದು ಪ್ರಾಥಮಿಕವಾಗಿ ತೋರುತ್ತದೆ. , ಇದು ಸುಪ್ರೀಂ ಕೋರ್ಟ್‍ನ ಮುಂದೆಯೂ ಇದೆ.

ಗೌರವಾನ್ವಿತ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವ ಗುರಿಯನ್ನು ಹೊಂದಿರುವ ಸಾರ್ವಜನಿಕ ಗ್ರಹಿಕೆ ಪೂರ್ವಾಗ್ರಹವನ್ನು ಸೃಷ್ಟಿಸಲು ಇದು ಸಮಾನವಾಗಿಲ್ಲವೇ ಎಂದು ಒಬ್ಬರು ಆಶ್ಚರ್ಯ ಪಡಬೇಕಾಗುತ್ತದೆ ಎಂದು ಅವರು ಸೇರಿಸಿದ್ದಾರೆ.

ವಿಶ್ವದ ವಿಶ್ವಾಸಾರ್ಹ ಪಕ್ಷ ಬಿಜೆಪಿ; ರಾಜ್‍ನಾಥ್‍ಸಿಂಗ್

ಶಹಪುರ,ನ.20- ಭಾರತೀಯ ಜನತಾ ಪಕ್ಷ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ ಎಂದು ರಕ್ಷಣಾ ಸಚಿವ ಮತ್ತು ರಾಜಸ್ಥಾನದ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಶಹಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ರಾಜಸ್ಥಾನದ ಹೆಮ್ಮೆ ಮತ್ತು ಘನತೆಗೆ ಗಾಯವನ್ನುಂಟುಮಾಡುವ ಕೆಲಸವನ್ನು ಮಾಡಿದೆ, ನಮ್ಮ ಪಕ್ಷದಲ್ಲಿ, ಬಹುಶಃ ಒಬ್ಬ ವ್ಯಕ್ತಿ ತಪ್ಪಾಗಬಹುದು ಆದರೆ ನಮ್ಮ ಪಕ್ಷವು ಹೋಗಲಾರದು. ಬಿಜೆಪಿ ವಿಶ್ವದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ ಎಂದಿದ್ದಾರೆ.

ಸುರಂಗದಲ್ಲಿ ಸಿಲುಕದ 41 ಕಾರ್ಮಿಕರ ರಕ್ಷಣೆಗೆ ಐದು ಪ್ರತ್ಯೇಕ ಕಾರ್ಯಾಚರಣೆ

ಕೇಂದ್ರದ ಭರವಸೆಗಳನ್ನು ಎತ್ತಿ ಹಿಡಿದ ಅವರು, ನಾವು 370 ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದೇವೆ ಮತ್ತು ನಾವು ಅದನ್ನು ಮಾಡಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ನಾವು ಭರವಸೆ ನೀಡಿದ್ದೇವೆ ಮತ್ತು ಈಗ ನಿಮ್ಮೆಲ್ಲರನ್ನು ಜನವರಿ 22 ರಂದು ಭಗವಾನ್ ರಾಮನ ದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ, ರಾಜ್ಯದ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡಿದ ಸಿಂಗ್ ಅವರು ಸೂಚಿಸಲಾದ ಪ್ರತಿಯೊಂದು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು. ಈಗಲಾದರೂ ಅವಕಾಶ ಕೊಟ್ಟರೆ ನಮ್ಮ ಪ್ರಣಾಳಿಕೆಯಲ್ಲಿ ಏನೇನು ಭರವಸೆ ನೀಡಿದ್ದೇವೆಯೋ ಅದನ್ನು ಖಾತರಿ ಪಡಿಸುತ್ತೇನೆ ಎಂದರು.

ಮೊದಲು, ಭಾರತವು ಏನನ್ನಾದರೂ ಹೇಳಿದಾಗ, ವಿಶ್ವ ರಾಷ್ಟ್ರಗಳು ನಮ್ಮನ್ನು ದುರ್ಬಲ ರಾಷ್ಟ್ರವೆಂದು ಪರಿಗಣಿಸಿ ನಮ್ಮ ಅಭಿಪ್ರಾಯವನ್ನು ಕುರುಡಾಗಿಸಿದವು. ಆದರೆ ಈಗ ಇಡೀ ಜಗತ್ತು ಅದು ಏನು ಹೇಳುತ್ತದೆ ಎಂಬುದನ್ನು ಭಾರತವನ್ನು ಎದುರು ನೋಡುತ್ತಿದೆ ಎಂದು ನೀವು ಹೆಮ್ಮೆಪಡಬಹುದು ಎಂದು ಅವರು ಹೇಳಿದರು.

ಪಶ್ಚಿಮ ದಂಡೆಯಲ್ಲೂ ಯುದ್ಧದ ಕಾರ್ಮೋಡ

ಕುಸ್ರಾ,ನ 20. ದಕ್ಷಿಣ ಇಸ್ರೇಲ್‍ನ ಮೇಲೆ ಹಮಾಸ್ ಉಗ್ರಗಾಮಿಗಳ ಮಾರಣಾಂತಿಕ ದಾಳಿಯ ನಂತರ ಇಸ್ರೇಲಿ ಯುದ್ಧ ವಿಮಾನಗಳು ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದಾಗ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಿಭಿನ್ನ ರೀತಿಯ ಯುದ್ಧ ನಡೆಯಿತು ಎಂದು ಪ್ಯಾಲೆಸ್ಟೀನಿಯಾದವರು ಹೇಳುತ್ತಾರೆ.

ರಾತ್ರಿಯಿಡೀ, ಪ್ರದೇಶವನ್ನು ಮುಚ್ಚಲಾಯಿತು. ಪಟ್ಟಣಗಳ ಮೇಲೆ ದಾಳಿ ಮಾಡಲಾಯಿತು, ಕಫ್ರ್ಯೂಗಳನ್ನು ವಿಧಿಸಲಾಯಿತು, ಹದಿಹರೆಯದವರನ್ನು ಬಂಧಿಸಲಾಯಿತು, ಬಂಧಿತರನ್ನು ಹೊಡೆಯಲಾಯಿತು ಮತ್ತು ಯಹೂದಿ ಜಾಗರೂಕರಿಂದ ಹಳ್ಳಿಗಳ ಮೇಲೆ ದಾಳಿ ಮಾಡಲಾಗಿದೆ.

ಗಾಜಾದ ಮೇಲೆ ವಿಶ್ವದ ಗಮನ ಮತ್ತು ಅಲ್ಲಿನ ಮಾನವೀಯ ಬಿಕ್ಕಟ್ಟಿನೊಂದಿಗೆ, ಪಶ್ಚಿಮ ದಂಡೆಯಲ್ಲಿಯೂ ಯುದ್ಧದ ಹಿಂಸಾಚಾರ ಭುಗಿಲೆದ್ದಿದೆ. ವಿಶ್ವಸಂಸ್ಥೆಯ ಪ್ರಕಾರ ಇಸ್ರೇಲಿ ವಸಾಹತುಗಾರರ ದಾಳಿಗಳು ಅಭೂತಪೂರ್ವ ದರದಲ್ಲಿ ಹೆಚ್ಚಿವೆ. ಉಲ್ಬಣವು ಭಯವನ್ನು ಹರಡಿದೆ, ಹತಾಶೆಯನ್ನು ಹೆಚ್ಚಿಸಿದೆ ಮತ್ತು ಪ್ಯಾಲೇಸ್ಟಿನಿಯನ್ನರ ಜೀವನೋಪಾಯವನ್ನು, ಅವರ ಮನೆಗಳನ್ನು ಮತ್ತು ಕೆಲವು ಸಂದರ್ಭಗಳಲ್ಲಿ, ಅವರ ಜೀವನವನ್ನು ದೋಚಲಾಗುತ್ತಿದೆ.

ನಮ್ಮ ಜೀವನವು ನರಕವಾಗಿದೆ ಎಂದು 52 ವರ್ಷದ ರೈತ ಸಾಬ್ರಿ ಬೌಮ್ ಹೇಳಿದರು, ಕಳೆದ ವಾರ ತನ್ನ ಮಕ್ಕಳನ್ನು ವಸಾಹತುಗಾರರಿಂದ ರಕ್ಷಿಸಲು ಲೋಹದ ಗ್ರಿಲ್‍ಗಳಿಂದ ತನ್ನ ಕಿಟಕಿಗಳನ್ನು ಬಲಪಡಿಸಿದ ಅವರು ಉತ್ತರದ ಹಳ್ಳಿಯಾದ ಕ್ರಿಯಾಔಟ್‍ನಲ್ಲಿ ಸ್ಟನ್ ಗ್ರೆನೇಡ್‍ಗಳನ್ನು ಎಸೆದರು ಎಂದು ಹೇಳಿದರು.

ಆರು ವಾರಗಳಲ್ಲಿ, ವಸಾಹತುಗಾರರು ಒಂಬತ್ತು ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಣಾಯಕ ಸುಗ್ಗಿಯ ಋತುವಿನಲ್ಲಿ ಅವರು 3,000-ಕ್ಕೂ ಹೆಚ್ಚು ಆಲಿವ್ ಮರಗಳನ್ನು ನಾಶಪಡಿಸಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಅಧಿಕಾರಿ ಘಾಸನ್ ಡಾಗ್ಲಾಸ್ ಹೇಳಿದರು, ಕೆಲವರಿಗೆ ತಲೆಮಾರುಗಳ ಮೂಲಕ ರವಾನಿಸಲಾದ ಪರಂಪರೆಯನ್ನು ಅಳಿಸಿಹಾಕಿದರು. ಮತ್ತು ಅವರು ಹರ್ಡಿಂಗ್ ಸಮುದಾಯಗಳಿಗೆ ಕಿರುಕುಳ ನೀಡಿದ್ದಾರೆ, 900 ಕ್ಕೂ ಹೆಚ್ಚು ಜನರು ತಮ್ಮ ಮನೆಗೆ ಕರೆದ 15 ಕುಗ್ರಾಮಗಳನ್ನು ತ್ಯಜಿಸಲು ಒತ್ತಾಯಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಜೈಲಿನಿಂದ ಸಾಕ್ಷಿಗೆ ಬೆದರಿಕೆ- ಛೋಟಾ ಶಕೀಲ್ ಸಹಚರನ ವಿರುದ್ಧ ಎಫ್‍ಐಆರ್

ವಸಾಹತುಗಾರರ ದಾಳಿಯ ಬಗ್ಗೆ ಕೇಳಿದಾಗ, ಇಸ್ರೇಲಿ ಸೈನ್ಯವು ಸಂಘರ್ಷವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಇಸ್ರೇಲ್ ನಾಗರಿಕರು ಕಾನೂನನ್ನು ಉಲ್ಲಂಘಿಸಿದರೆ ಪಡೆಗಳು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು. ನಿರ್ದಿಷ್ಟ ಘಟನೆಗಳ ಕುರಿತು ಪ್ರತಿಕ್ರಿಯೆಗಾಗಿ ವಿನಂತಿಗಳಿಗೆ ಸೇನೆಯು ಪ್ರತಿಕ್ರಿಯಿಸಲಿಲ್ಲ.

ಅಮೆರಿಕ ಅಧ್ಯಕ್ಷ ಬಿಡೆನ್ ಮತ್ತು ಇತರ ಆಡಳಿತ ಅಧಿಕಾರಿಗಳು ಪದೇ ಪದೇ ವಸಾಹತುಗಾರರ ಹಿಂಸಾಚಾರವನ್ನು ಖಂಡಿಸಿದ್ದಾರೆ, ಅವರು ಗಾಜಾದಲ್ಲಿ ಇಸ್ರೇಲಿ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜೈಲಿನಿಂದ ಸಾಕ್ಷಿಗೆ ಬೆದರಿಕೆ- ಛೋಟಾ ಶಕೀಲ್ ಸಹಚರನ ವಿರುದ್ಧ ಎಫ್‍ಐಆರ್

ಮುಂಬೈ, ನ.20 (ಪಿಟಿಐ) – ಸುಲಿಗೆ ಪ್ರಕರಣದಲ್ಲಿ ಜೈಲಿನಿಂದ ಸಾಕ್ಷಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಪರಾರಿಯಾಗಿರುವ ಗ್ಯಾಂಗ್‍ಸ್ಟರ್ ಛೋಟಾ ಶಕೀಲ್‍ನ ಸಹಚರ ರಿಯಾಜ್ ಭಾಟಿ ವಿರುದ್ಧ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಸುಲಿಗೆ ಪ್ರಕರಣದಲ್ಲಿ ಭಾಟಿಯನ್ನು ಮುಂಬೈನ ಜೈಲಿನಲ್ಲಿ ಇರಿಸಲಾಗಿದ್ದು, ಇದರಲ್ಲಿ ಶಕೀಲ್‍ನ ಸೋದರ ಮಾವ ಸಲೀಂ ಮತ್ತು ಇತರ ಐವರು ಆರೋಪಿಗಳಾಗಿದ್ದಾರೆ.

ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಕಟ್ಟುನಿಟ್ಟಾದ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಿದ್ದಾರೆ ಮತ್ತು ಎಲ್ಲಾ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ವಾರ ಇಲ್ಲಿ ಖಾರ್ ಪೊಲೀಸರು ಭಾಟಿ ವಿರುದ್ಧ ದಾಖಲಿಸಿದ ಇತ್ತೀಚಿನ ಎಫ್‍ಐಆರ್ ಪ್ರಕಾರ, 43 ವರ್ಷದ ಉದ್ಯಮಿಯೊಬ್ಬರು ಕಳೆದ 10 ವರ್ಷಗಳಿಂದ ತಿಳಿದಿರುವ ರಾಜೇಶ್ ಬಜಾಜ್ ಎಂಬ ವ್ಯಕ್ತಿ ನ್ಯಾಯಾಲಯದಲ್ಲಿ ಪರವಾಗಿ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಭಾಟಿಯ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತಕ್ಕೆ ಆಗಮಿಸಿದ ಅಸ್ಟ್ರೇಲಿಯಾ ವಿದೇಶಾಂಗ ಸಚಿವೆ

ಭಾಟಿ ಅವರನ್ನು ಭೇಟಿಯಾದ ವರ್ಸೋವಾ ಪೊಲೀಸ್ ಠಾಣೆಯ ಬಳಿ ಉದ್ಯಮಿಯನ್ನು ಬಜಾಜ್ ಕರೆದೊಯ್ದಿದ್ದರು ಮತ್ತು ಅವರ ಪರವಾಗಿ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. 2021 ರಲ್ಲಿ, ಉದ್ಯಮಿಯ ಸ್ನೇಹಿತ ಭಾಟಿ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಭಾಟಿ ತನ್ನ ಹೆಂಡತಿಯನ್ನು ತನ್ನ ಸ್ನೇಹಿತ ಎಂದು ಹೇಳಿಕೊಂಡು ಉದ್ಯಮಿಯ ಸಹಚರನಿಗೆ ಪರಿಚಯಿಸಿದ್ದ. ಭಾಟಿ ತನ್ನ ಹೆಂಡತಿಗೆ ಬೆದರಿಕೆ ಹಾಕಿದ್ದಾನೆ ಮತ್ತು ಹಣದ ಆಮಿಷ ಒಡ್ಡಿದ ನಂತರ ಉದ್ಯಮಿ ಮತ್ತು ಅವನ ಸ್ನೇಹಿತನೊಂದಿಗೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ. ನಂತರ, ಭಾಟಿ ಉದ್ಯಮಿ ಮತ್ತು ಅವನ ಸ್ನೇಹಿತನಿಂದ ತನ್ನ ಹೆಂಡತಿಯೊಂದಿಗಿನ ಲೈಂಗಿಕ ಸಂಬಂಧಕ್ಕಾಗಿ ಹಣವನ್ನು ಸುಲಿಗೆ ಮಾಡಿದ್ದಾನೆ ಎಂದು ಅದು ಹೇಳಿದೆ.

ದೂರಿನ ಆಧಾರದ ಮೇಲೆ, ಭಾಟಿ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 195 ಎ (ಸುಳ್ಳು ಹೇಳಿಕೆ ನೀಡುವಂತೆ ವ್ಯಕ್ತಿಯನ್ನು ಬೆದರಿಸುವುದು), 506-2 (ಅಪರಾಧದ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.